ಜೈಪುರ(ರಾಜಸ್ಥಾನ) ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ೩೧ ವರ್ಷದಿಂದ ಮುಚ್ಚಿದ್ದ ಶಿವನ ದೇವಸ್ಥಾನವನ್ನು ಭಾಜಪ ಶಾಸಕರು ತೆರೆದರು !

ಮಂದಿರದಲ್ಲಿ ಪೂಜೆ ಮಾಡುವಾಗ ಮುಸಲ್ಮಾನರಿಂದ ಹೊರಗೆ ಅಲ್ಲಾಹು ಅಕ್ಬರ್ ನ(ಅಲ್ಲ ಮಹಾನ ಇರುವನು) ಘೋಷಣೆ

ಜೈಪುರ (ರಾಜಸ್ಥಾನ) – ಇಲ್ಲಿಯ ಹವಾಮಹಲ ಮತದಾರ ಕೇಂದ್ರದಲ್ಲಿ ಭಾಜಪದ ಶಾಸಕ ಆಚಾರ್ಯ ಬಾಲಮುಕುಂದ ಇವರು ಮಹಾಶಿವರಾತ್ರಿಯ ದಿನದಂದು ನಗರದಲ್ಲಿನ ಆದರ್ಶ ನಗರದಲ್ಲಿ ಕಳೆದ ೩೧ ವರ್ಷಗಳಿಂದ ಮುಚ್ಚಿರುವ ಶಿವನ ದೇವಸ್ಥಾನ ತೆರೆದು ಅಲ್ಲಿ ಪೂಜೆ ನಡೆಸಿದರು ಆ ಪ್ರದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಿದ್ದು ಅಲ್ಲಿ ಕಾಂಗ್ರೆಸ್ಸಿನ ರಫೀಕ್ ಖಾನ್ ಇವರು ಶಾಸಕರಾಗಿದ್ದಾರೆ. ದೇವಸ್ಥಾನ ಮುಚ್ಚಿರುವುದರಿಂದ ಶಾಸಕ ಬಾಲ ಮುಕುಂದ ಇವರು ಶಾಸಕ ಖಾನ ಇವರನ್ನು ಟೀಕಿಸಿದರು. ಶಾಸಕ ಬಾಲಮುಕುಂದ ಪೂಜೆ ಮಾಡುತ್ತಿರುವಾಗ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು ಸೇರಿದ್ದರು ಮತ್ತು ಅವರು ಅಲ್ಲಾಹು ಅಕ್ಬರ್ ಎಂದು ಘೋಷಣೆ ನೀಡಿದರು.

(ಸೌಜನ್ಯ – VK News)

ಶಾಸಕ ಆಚಾರ್ಯ ಬಾಲ ಮುಕುಂದ ದೇವಸ್ಥಾನದ ಸ್ಥಳಕ್ಕೆ ತಲುಪಿದಾಗ ಅವರಿಗೆ ದೇವಸ್ಥಾನ ಪ್ರವೇಶ ದ್ವಾರಕೆ ಬೀಗ ಹಾಕಿರುವುದು ಕಂಡಿತು ಅದರ ಬೀಗದ ಕೈ ಸಿಗದೇ ಇರುವುದರಿಂದ ಬೀಗವನ್ನು ಒಡೆದರು. ಅದರ ನಂತರ ಅವರು ದೇವಸ್ಥಾನದ ಒಳಗೆ ಹೋದಾಗ ಅಲ್ಲಿ ಬಹಳ ಅಸ್ವಚ್ಛತೆ ಕಂಡಿತು. ಅವರು ಅಲ್ಲಿ ತಮ್ಮ ಬೆಂಬಲಿಗರ ಜೊತೆಗುಡಿ ಸ್ವಚ್ಛತೆ ಮಾಡಿದರು ಮತ್ತು ನಂತರ ಪೂಜೆ ಮಾಡಿದರು. ಹಿಂದೆ ದೇವಸ್ಥಾನದ ಸುತ್ತಲೂ ಹಿಂದುಗಳ ಜನಸಂಖ್ಯೆ ಬಹಳವಾಗಿ ಇತ್ತು. ನಂತರ ಹಿಂದುಗಳು ವಿವಿಧ ಕಾರಣಗಳಿಂದ ಅಲ್ಲಿಂದ ಹೊರಟು ಹೋದರು.

ಪರಿಸರದಲ್ಲಿನ ಮುಸಲ್ಮಾನರ ಅಭಿಪ್ರಾಯ, ಮಹಾಶಿವರಾತ್ರಿಯ ದಿನದಂದು ಶುಕ್ರವಾರ ಇರುವಾಗ ಶಾಸಕ ಬಾಲ ಮುಕುಂದ ಇವರು ವಾತಾವರಣ ಹದಗೆಡಿಸುವ ಪ್ರಯತ್ನ ಮಾಡಿದ್ದಾರೆ. (ಇದಕ್ಕೆ ಹೇಳುವುದು ಕಳ್ಳನಿಗೊಂದು ಪಿಳ್ಳೆನೆವ ಅಂತ ! – ಸಂಪಾದಕರು)

ಸಂಪಾದಕೀಯ ನಿಲುವು

ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ದೇವಸ್ಥಾನ ಏಕೆ ಮುಚ್ಚಬೇಕು ? ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿನ ಮಸೀದಿ ಮತ್ತು ಚರ್ಚ್ ಗಳು ಎಂದಾದರೂ ಮುಚ್ಚಲಾಗುತ್ತದೆಯೆ ? ಸರ್ವಧರ್ಮಸಮಭಾವದ ಗುತ್ತಿಗೆ ಕೇವಲ ಹಿಂದುಗಳೇ ತೆಗೆದುಕೊಂಡಿದ್ದಾರೆಯೆ ?