ಈ ಪ್ರಕರಣದಲ್ಲಿ ರಾಜ್ಯ ಸಚಿವ ಉದಯನಿಧಿ ಸ್ಟಾಲಿನ ಅವರ ವಿಚಾರಣೆಯೂ ನಡೆಯಲಿದೆ
(ದ್ರಮುಕ ಎಂದರೆ ದ್ರಾವಿಡ ಮುನ್ನೇತ್ರ ಕಳಘಮ್ – ದ್ರಾವಿಡ ಪ್ರಗತಿ ಸಂಘ)
ಚೆನ್ನೈ (ತಮಿಳುನಾಡು) – ಮಾದಕ ಪದಾರ್ಥ ನಿಯಂತ್ರಣ ವಿಭಾಗ( ಎನ್.ಸಿ.ಬಿ) ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಘಮ್ ಪಕ್ಷದ ಮುಖಂಡ ಮತ್ತು ಚಲನಚಿತ್ರ ನಿರ್ಮಾಪಕ ಜಫರ ಸಾದಿಕನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಕಳೆದ ತಿಂಗಳಿನಿಂದ ಅವನು ನಾಪತ್ತೆಯಾಗಿದ್ದನು ಅವನು ಚೆನ್ನೈ, ತಿರುವನಂತಪುರಂ, ಮುಂಬಯಿ, ಪುಣೆ, ಕರ್ಣಾವತಿ ಮತ್ತು ಜಯಪೂರ ಈ ನಗರಗಳಲ್ಲಿ ಅಡಗಿಕೊಳ್ಳುತ್ತಿದ್ದನು. ಅವನು ದೆಹಲಿಗೆ ಬಂದಿರುವ ಗೌಪ್ಯ ಮಾಹಿತಿ ಸಿಗುತ್ತಲೇ ಅವನನ್ನು ಬಂಧಿಸಲಾಯಿತು. ಅವನು 2 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳ ಕಳ್ಳಸಾಗಣೆ ಮಾಡುವ ಗುಂಪನ್ನು ನಡೆಸುತ್ತಿದ್ದನು. ಅವನು ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷಿಯಾ ಈ ದೇಶಗಳಿಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದನು. ವಿಚಾರಣೆಯಲ್ಲಿ ಅವನು ದ್ರಮುಕದ ಅನಿವಾಸಿ ಭಾರತೀಯರ ಶಾಖೆಯ ಚೆನ್ನೈ ಪಶ್ಚಿಮ ಭಾಗದ ಉಪಸಂಘಟಕನೆಂದು ಹೇಳಿದ್ದಾನೆ. ಕಳೆದ ತಿಂಗಳು, ಅವನ ಗುಂಪಿನ 3 ಜನರನ್ನು ಬಂಧಿಸಿದ ಬಳಿಕ ಅವನ ಹೆಸರು ಬಹಿರಂಗವಾಗಿತ್ತು. ತದನಂತರ ದ್ರಮುಕ ಅವನನ್ನು ಪಕ್ಷದಿಂದ ವಜಾಗೊಳಿಸಿತ್ತು. ಜಫರ ಸಾದಿಕನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಗೆ 7 ಲಕ್ಷ ರೂಪಾಯಿ ನೀಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಇದರಲ್ಲಿ 5 ಲಕ್ಷ ರೂಪಾಯಿಗಳನ್ನು ನೆರೆಪೀಡಿತ ಸಹಾಯ ನಿಧಿಗಾಗಿ, 2 ಲಕ್ಷ ರೂಪಾಯಿಗಳನ್ನು ಪಕ್ಷನಿಧಿಯೆಂದು ನೀಡಲಾಗಿದೆ. ಅವನು ಯಾವ ಮಾಧ್ಯಮದಿಂದ ಹಣವನ್ನು ಸಂಪಾದಿಸಿದನು ? ಎನ್ನುವ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ವಿಚಾರಣಗಾಗಿ ಕರೆಸಬಹುದು ಎಂದು ತನಿಖಾ ತಂಡದ ಹೇಳಿದೆ.
(ಸೌಜನ್ಯ – ANI News)
1. ಜಫರ ಸಾದಿಕನು ಉದಯನಿಧಿ ಸ್ಟಾಲಿನ ಜೊತೆಗೆ ರಾಜ್ಯಸಭೆ ಸಂಸದ ಎಂ.ಎಂ. ಅಬ್ದುಲ್ಲಾ, ಡಿಎಂಕೆ ಕಾರ್ಯದರ್ಶಿ ಎನ್. ಚಿತ್ರರಸು ಹಾಗೂ ಅನೇಕ ಡಿಎಂಕೆ ನಾಯಕರೊಂದಿಗೆ ಒಡನಾಟ ಇಟ್ಟುಕೊಂಡಿದ್ದನು.
2. ಎನ್.ಸಿ.ಬಿ. ಉಪಮುಖ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಹ ಇವರು ಮಾತನಾಡಿ, ಸಾದಿಕ ತಮಿಳು ಮತ್ತು ಹಿಂದಿ ಚಲನಚಿತ್ರೋದ್ಯಮದೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದ ಜನರನ್ನು ವಿಚಾರಣೆಗೆ ಕರೆಯಲಾಗುವುದು. ಎನ್.ಸಿ.ಬಿ.ನಿಷ್ಪಕ್ಷಪಾತ ಮತ್ತು ಕಾನೂನು ತನಿಖೆಗಳಲ್ಲಿ ನಂಬಿಕೆ ಹೊಂದಿದೆ. ಅಪರಾಧಿಗಳಿಗೆ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷ ಇರುವುದಿಲ್ಲ. ಯಾರು ಕಾನೂನನ್ನು ಉಲ್ಲಂಘಿಸುತ್ತಾರೆಯೋ, ಅವರು ಅಪರಾಧಿಯಾಗಿರುತ್ತಾರೆ. ಅಂತಹ ಎಲ್ಲಾ ಪ್ರಕರಣಗಳನ್ನು ನಾವು ತನಿಖೆ ಮಾಡುತ್ತೇವೆ ಎಂದು ಹೇಳಿದರು.
DMK leader Jaffer Sadiq arrested in Tamil Nadu for international drug trafficking
State Minister #UdhayanidhiStalin to be investigated in this case
Discover who controls DMK, which tries to destroy #SanatanaDharma. The Union Government should ban such parties.
The Narcotics… pic.twitter.com/p6r1e7D2De
— Sanatan Prabhat (@SanatanPrabhat) March 10, 2024
3. ದೆಹಲಿಯ ಬಸಯಿ ದಾರಾಪುರ ಪ್ರದೇಶದಲ್ಲಿರುವ ಸಾದಿಕನ ಕಂಪನಿಯ ಗೋದಾಮಿನ ಮೇಲೆ ದಾಳಿ ನಡೆಸಿ 50 ಕೆಜಿ ಸೂಡೊಫೆಡ್ರಿನ್ ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಅಧಿಕಾರಿಗಳಿಂದ ಸಿಕ್ಕ ರಹಸ್ಯ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಲಾಗಿತ್ತು. ಇಲ್ಲಿ, ತೆಂಗಿನ ಪುಡಿ ಮತ್ತು ಮಿಶ್ರ ಆಹಾರ ಪುಡಿ ಮೂಲಕ, ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಗೆ ‘ಸ್ಯೂಡೋಫೆಡ್ರಿನ್’ ರಫ್ತು ಮಾಡಲಾಗುತ್ತಿತ್ತು.
4. ಎನ್.ಸಿ.ಬಿ. ಮಾತನಾಡಿ, ಜಫರ ಸಾದಿಕ ಮಾದಕ ಪದಾರ್ಥಗಳ ವ್ಯವಹಾರದಿಂದ ಗಳಿಸಿದ ಹಣವನ್ನು ಚಲನಚಿತ್ರ ನಿರ್ಮಾಣ, ನಿರ್ಮಾಣ ಕ್ಷೇತ್ರ ಮತ್ತು ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಹಣದಿಂದ ಅವನು `ಮಂಗಾಯಿ’ ಈ ತಮಿಳು ಚಲನಚಿತ್ರವನ್ನು ನಿರ್ಮಿಸಿದ್ದಾನೆ ಮತ್ತು ಅದರ ಜಾಹೀರಾತುಗಳನ್ನು (ಟ್ರೇಲರ) ಪ್ರದರ್ಶಿಸಲಾಗಿದೆ. ಚೆನ್ನೈನಲ್ಲಿ ಅವನು ಹೋಟೆಲ್ ನಿರ್ಮಿಸಿದ್ದಾನೆ.
ಸಾದಿಕ ಗುಂಪಿನ ಮುಖವಾಡ ಕಳಚಬೇಕು ! – ಭಾಜಪ
ತಮಿಳುನಾಡು ಭಾಜಪ ಪ್ರದೇಶಾಧ್ಯಕ್ಷ ಕೆ. ಅಣ್ಣಾಮಲೈ ಇವರು ಮಾತನಾಡಿ, ಕಳೆದ 3 ವರ್ಷಗಳಲ್ಲಿ, ದ್ರಮುಕರ ಅನೇಕ ನಾಯಕರೊಂದಿಗೆ ಸಂಪರ್ಕವನ್ನು ಹೊಂದಿದ್ದ ಸಾದಿಕ ಆರ್ಥಿಕ ಅವ್ಯವಹಾರದ ಕೆಲಸವನ್ನು ಹೇಗೆ ಮಾಡಿದನು? ಎನ್ನುವುದು ಬಹಿರಂಗಪಡಿಸುವುದು ಮಹತ್ವದ್ದಾಗಿದೆ. ಈ ಪ್ರಕರಣದಲ್ಲಿ ನಾವು ಜಾರಿ ನಿರ್ದೇಶನಾಲಯಕ್ಕೆ ಕೂಲಂಕುಷ ತನಿಖೆ ನಡೆಸಲು ಮತ್ತು ಸಾದಿಕನ ಗುಂಪಿನ ಮುಖವಾಡವನ್ನು ಹರಿದು ಹಾಕುವಂತೆ ಕೋರುತ್ತಿದ್ದೇವೆ. ತಮಿಳುನಾಡಿನಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದರು.
ಸಾದಿಕನನ್ನು ಪೊಲೀಸ್ ಮಹಾನಿರ್ದೇಶಕರಿಂದ ಉಡುಗೊರೆಗಳು ಸಿಕ್ಕಿದ್ದವು ! – ಅಖಿಲ ಭಾರತ ಎಐಎಡಿಎಂಕೆ ಪಕ್ಷಅಖಿಲ ಭಾರತೀಯ ಅಣ್ಣಾದ್ರಮುಕ ಪಕ್ಷದ ಕಾರ್ಯದರ್ಶಿ ಎ.ಕೆ. ಪಳನಿಸ್ವಾಮಿ ಮಾತನಾಡಿ, ಜಫರ ಸಾದಿಕನು ಹಿರಿಯ ಪೊಲೀಸ ಅಧಿಕಾರಿಯವರೆಗೆ ಹೇಗೆ ಸಂಬಂಧವನ್ನು ಹೊಂದಿದ್ದನು ? ಇದರ ಸ್ಪಷ್ಟೀಕರಣವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ಇವರು ಜನರಿಗೆ ನೀಡಬೇಕು. ಜಫರ ದ್ರಮುಕದ ಮುಖಂಡರೊಂದಿಗೆ ಸಾಮಿಪ್ಯವನ್ನು ಸಾಧಿಸಿದ್ದನು ಮತ್ತು ಅವನಿಗೆ ಪೊಲೀಸ ಮಹಾನಿರ್ದೇಶಕರಿಂದ ಉಡುಗೊರೆಯೂ ಸಿಕ್ಕಿತ್ತು. (ಇದೆಂದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ) ಈ ಆರೋಪದ ಬಗ್ಗೆಯೂ ವಿವರವಾದ ವಿಚಾರಣೆ ನಡೆಸಿ ಸತ್ಯವನ್ನು ಜನತೆಯೆದುರಿಗೆ ಬಹಿರಂಗವಾಗಬೇಕು – ಸಂಪಾದಕರು) ಇದು ಅತ್ಯಂತ ದುರದೃಷ್ಟಕರ ಮತ್ತು ದುಃಖಕರ ವಿಷಯವಾಗಿದೆ. ಇದನ್ನು ಕಟುವಾದ ಶಬ್ದಗಳಲ್ಲಿ ನಿಷೇಧಿಸಬೇಕು ಎಂದು ಹೇಳಿದ್ದಾರೆ. |
ಸಂಪಾದಕೀಯ ನಿಲುವುಸನಾತನ ಧರ್ಮವನ್ನು ನಾಶಮಾಡುವ ಪ್ರಯತ್ನ ಮಾಡುವ ದ್ರಮುಕರಲ್ಲಿ ಎಂತಹ ಜನರು ಸೇರಿದ್ದಾರೆ? ಎನ್ನುವುದನ್ನು ಗಮನಿಸುವ ವಿಷಯವಾಗಿದೆ. ಕೇಂದ್ರ ಸರ್ಕಾರ ಇಂತಹ ಪಕ್ಷಗಳ ಮೇಲೆ ನಿಷೇಧವನ್ನೇ ಹೇರಬೇಕು. |