ಪಾಕಿಸ್ತಾನವನ್ನು ಬೆಂಬಲಿಸಿ ಯಾರೇ ಘೋಷಣೆ ಕೂಗಿದರೆ ನೇರ ಗುಂಡು ಹಾರಿಸಿರಿ ! – ಸಚಿವ ಕೆ.ಎನ್. ರಾಜಣ್ಣನ

ಕಾಂಗ್ರೆಸ್ ಸರ್ಕಾರದ ಸಚಿವ ಕೆ.ಎನ್. ರಾಜಣ್ಣನವರ ಹೇಳಿಕೆ!

ಬೆಂಗಳೂರು – ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ’ ಘೋಷಣೆ ನೀಡಿದ ನಂತರ  ಏನಾಯಿತು ? ಕಾಂಗ್ರೆಸ್‌ನ ಪ್ರತಿಷ್ಠೆಗೆ ಯಾವುದೇ ಧಕ್ಕೆಯಾಗಿಲ್ಲ. ಬದಲಾಗಿ ಪ್ರತಿಷ್ಠೆ ಮತ್ತಷ್ಟು ಬೆಳಗುತ್ತಿದೆ. (ಇದಕ್ಕೆ ಹೇಳೊದು, ‘ಜಟ್ಟಿ ಜಾರಿ ಬಿದ್ದರೂ, ಮೀಸೆ ಮಣ್ಣಾಗಲಿಲ್ಲ’ ಎಂದು – ಸಂಪಾದಕರು) ಒಂದು ವೇಳೆ ಯಾರಾದರೂ ಪಾಕಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುತ್ತಿದ್ದರೆ, ಅವರಿಗೆ ನೇರವಾಗಿ ಗುಂಡು ಹಾರಿಸಿರಿ, ಅದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಕೆ.ಎನ್. ರಾಜಣ್ಣ ಇವರು ಹೇಳಿದ್ದಾರೆ.  ಕಾಂಗ್ರೆಸ್ ನಾಯಕ ಸೈಯದ ನಾಸಿರ ಹುಸೇನ ರಾಜ್ಯಸಭೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅವರ ಬೆಂಬಲಿಗರು ಕರ್ನಾಟಕ ವಿಧಾನಸಭಾ ಪರಿಸರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಪ್ರಕರಣದಲ್ಲಿ ಇದುವರೆಗೆ 3 ಮಂದಿಯನ್ನು ಬಂಧಿಸಲಾಗಿದೆ. `ಘೋಷಣೆಯ ಪ್ರಕರಣದ ಅಪರಾಧದಲ್ಲಿ ಕಾಂಗ್ರೆಸ್ಸಿನ ನೂತನವಾಗಿ ನೇಮಕಗೊಂಡಿರುವ ಕಾಂಗ್ರೆಸ್ ಸಂಸದ ಸೈಯದ ನಸೀರ ಹುಸೇನ ಅವರ ಹೆಸರನ್ನು ಸೇರಿಸಬೇಕು’ ಎಂದು ಭಾಜಪ ಒತ್ತಾಯಿಸಿದೆ. ಹಾಗೆಯೇ `ವಿಚಾರಣೆ ಪೂರ್ಣವಾಗುವವರೆಗೆ ಅವರನ್ನು ರಾಜ್ಯ ಸಭೆಯ ಪ್ರಮಾಣ ವಚನ ಬೋಧಿಸಬಾರದು’ ಎಂದು  ರಾಜ್ಯ ಸಭೆಯ ಅಧ್ಯಕ್ಷರಾಗಿರುವ ಜಗದೀಪ ಧನಕರ ಅವರಿಗೆ ಮನವಿ ಮಾಡುವುದಾಗಿ ಭಾಜಪ ಹೇಳಿದೆ.

ರಾಜಣ್ಣ ಇವರು ಈ ಹಿಂದೆ ಉತ್ತರಪ್ರದೇಶ ಸರಕಾರ ಅಪರಾಧಿಗಳ ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ಬುಲ್ಡೋಜರ್ ಮೂಲಕ ಕೈಗೊಂಡ ಕ್ರಮವನ್ನು ರಾಜಣ್ಣ ಬೆಂಬಲಿಸಿದ್ದರು. ಅವರು  ಬುಲ್ಡೋಜರ್ ಬಳಸಿ ಆರೋಪಿಗಳ ಮನೆಗಳನ್ನು ಕೆಡವುವಂತಹ ಸರಕಾರದ ಕ್ರಮಗಳಿಂದಾಗಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದಿದೆ ಎಂದು ಹೇಳುತ್ತಿದ್ದರು. ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತಿದ್ದರೆ, ನಾವು  ಇಂತಹ ಕ್ರಮವನ್ನು ನಾವು ವಿರೋಧಿಸುವುದಿಲ್ಲ. (ಕಾಂಗ್ರೆಸ್ ರಾಜ್ಯದಲ್ಲಿ  ಏಕೆ ಇಂತಹ ಕ್ರಮ ಕೈಕೊಳ್ಳುವುದಿಲ್ಲ? – ಸಂಪಾದಕರು)