ಜುನಾಗಢ(ಗುಜರಾತ); ಕಾನೂನುಬಾಹಿರವಾಗಿ ಕಟ್ಟಲಾದ ದರ್ಗಾ ಮತ್ತು ೨ ದೇವಾಲಯಗಳನ್ನು ಕೆಡವಿದ ಸರ್ಕಾರ!

ಕಳೆದವರ್ಷ ಜೂನ್‌ನಲ್ಲಿ ಈ ಕಾರ್ಯಾಚರಣೆ ವೇಳೆ ಪೋಲೀಸರ ಮೇಲೆ ಮುಸಲ್ಮಾನರಿಂದ ದಾಳಿ!

ಜುನಾಗಢ(ಗುಜರಾತ) – ಆಕ್ರಮವಾಗಿ ಕಟ್ಟಲಾಗಿದ್ದ ದರ್ಗಾ ಮತ್ತು ೨ ಮಂದಿರಗಳನ್ನು ಸರ್ಕಾರವು ಕೆಡವಿ ಹಾಕಿದೆ. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ರಾತ್ರಿಯ ವೇಳೆ ಈ ಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.

(ಸೌಜನ್ಯ – Aaj Tak)

ದರ್ಗಾವನ್ನು ಕೆಡವಲಾಗುವುದೆಂದು ಕಳೆದವರ್ಷ ಜೂನ್‌ನಲ್ಲಿ ಸರ್ಕಾರವು ನೋಟೀಸ್ ನೀಡಿತ್ತು.ಆದರೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸುಮಾರು ೨೦೦ ರಿಂದ ೩೦೦ ಸ್ಥಳೀಯ ನಾಗರೀಕರು ಒಗ್ಗೂಡಿ ಸರ್ಕಾರದ ನೋಟೀಸ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪೋಲೀಸರು ಉದ್ರಿಕ್ತ ಜನರನ್ನು ಚದುರಿಸಲು ಯತ್ನಿಸಿದಾಗ ಪ್ರತಿಭಟನಾಕಾರರು ಪೋಲೀಸರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಉಪಪೋಲೀಸ್‌ ವರಿಷ್ಟಾಧಿಕಾರಿ ಮತ್ತು ಇಬ್ಬರು ಪೋಲೀಸರು ಗಾಯಗೊಂಡಿದ್ದರು. ಕಾನೂನುಬಾಹಿರವಾಗಿ ದರ್ಗಾ ನಿರ್ಮಿಸಲ್ಪಟ್ಟಿದೆ ಎಂದು ಉಚ್ಛ ನ್ಯಾಯಾಲಯ ತೀರ್ಪು ನೀಡಿದ ನಂತರ ೨೦೨೪ ರ ಮಾರ್ಚ್ ೯ ರಂದು ರಾತ್ರಿ ದರ್ಗಾವನ್ನು ಕೆಡವಲಾಯಿತು.

ಸಂಪಾದಕೀಯ ನಿಲುವು

ಪೋಲೀಸರ ಮೇಲೆ ಮತ್ತೆ ದಾಳಿ ಆಗಬಾರದೆಂದು ಈ ಬಾರಿ ಅಲ್ಲಿನ ಸರ್ಕಾರವು ಮೊದಲು ಹಿಂದೂ ದೇವಾಲಯಗಳನ್ನು ಕೆಡವಿ, ‘ನಾವು ಯಾವುದೇ ತಾರತಮ್ಯ ಮಾಡುವುತ್ತಿಲ್ಲ‘, ಎಂಬುದನ್ನು ತೋರಿಸಲು ಹೀಗೆ ಮಾಡಿದೆ ಎಂದು ಜನರಿಗೆ ಅನಿಸಿದರೆ ಅದು ತಪ್ಪಾಗಲಿಕ್ಕಿಲ್ಲ!

ಹಿಂದೂಗಳ ಮಂದಿರಗಳ ವಿರುದ್ಧ ಕ್ರಮ ಕೈಗೊಂಡಾಗ ಹಿಂದೂಗಳು ಅದನ್ನು ಸ್ವೀಕರಿಸಿ ಸುಮ್ಮನಿರುತ್ತಾರೆ; ಆದರೆ ಮುಸ್ಲೀಂರು ಅಂತಹ ಕ್ರಮಗಳನ್ನು ಒಪ್ಪುವುದಿಲ್ಲ ಮತ್ತವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, “ಈ ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ‘ ಎಂದು ಹೇಳುವವರಿಗೆ ಇದು ಕಪಾಳಮೋಕ್ಷ!