ಬೆಂಗಳೂರು – ಕಾಂಗ್ರೆಸ್ ಸರಕಾರವು ಒಂದನೇ ತರಗತಿಯಿಂದ ಹತ್ತನೆಯ ತರಗತಿಯ ಪಠ್ಯಕ್ರಮದಲ್ಲಿನ ಸುಧಾಹರಣೆಗೆ ಅಂತಿಮ ರೂಪ ನೀಡಿದೆ. ಇದರಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದ್ದಾರೆ. ಇದರಲ್ಲಿ ‘ಸನಾತನ ಧರ್ಮ’ದ ಮೇಲೆ ಆಧಾರಿತ ಪಠ್ಯದ ಬದಲು ಮಕ್ಕಳಿಗೆ ಪಿ. ಲಂಕೇಶ, ಸಾವಿತ್ರಿಬಾಯಿ ಫುಲೆ, ಗಿರೀಶ ಕಾರ್ನಾಡ, ಪೆರಿಯಾರ, ದೇವನೂರು ಮಹಾದೇವ, ತಿರುನಾಕುಡು ಚಿನ್ನಸ್ವಾಮಿ, ನಾಗೇಶ ಹೆಗಡೆ ಮುಂತಾದ ಲೇಖಕರ ಲೇಖನಗಳನ್ನು ಸೇರಿಸಲಾಗಿದೆ.
೧. ಪ್ರಾ. ಮಂಜುನಾಥ ಹೆಗಡೆ ಇವರ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪುನರ್ನಿರೀಕ್ಷಣೆ ಸಮಿತಿಯಿಂದ ಇದರ ವರದಿ ಸರಕಾರಕ್ಕೆ ಒಪ್ಪಿಸಿದೆ. ಸಮಿತಿಯು ಸಾವಿತ್ರಿಬಾಯಿ ಫುಲೆ ಮತ್ತು ಪೆರಿಯಾರ್ ಇವರಂತಹ ಪ್ರಗತಿಪರ ಲೇಖಕರಗೆ ಸಂಬಂಧದ ವಿಷಯದ ಪಠ್ಯಗಳು ಮತ್ತೆ ಸೇರಿಸುವಂತೆ ಶಿಫಾರಸ್ಸು ಮಾಡಿದೆ. ಆದರೂ ಸಮಿತಿಯು ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿ ಇವರಿಗೆ ಸಂಬಂಧಪಟ್ಟ ಪಾಠಗಳು ಸೇರಿಸಲು ಶಿಫಾರಸ್ಸು ಮಾಡಿಲ್ಲ. ಈ ಪಾಠಗಳು ಭಾಜಪ ಸರಕಾರ ತೆಗೆದುಹಾಕಿತ್ತು.
೨. ಈ ಪಠ್ಯ ಪುಸ್ತಕದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಹೊಸ ಅಧ್ಯಾಯಗಳು ಸೇರಿಸಿದ್ದಾರೆ. ಅದರ ಜೊತೆಗೆ ‘ಧರ್ಮ’ ಶಬ್ದದ ಬದಲು ‘ರಿಲಿಜನ್’ ಎಂದು ಬದಲಾವಣೆ ಮಾಡಿದ್ದಾರೆ.
೩. ಈ ಹಿಂದೆ ಜೂನ್ ೨೦೨೩ ರಲ್ಲಿ ‘ಕರ್ನಾಟಕ ಟೆಕ್ಸ್ಟ್ ಬುಕ್ ಸೊಸೈಟಿ’ಯು ಪಠ್ಯಪುಸ್ತಕದಲ್ಲಿ ಕೆಲವು ಬದಲಾವಣೆ ಮಾಡಿತ್ತು. ಇದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಪೂ. ಹೆಗಡೆವಾರ ಇವರ ಬಗ್ಗೆ ಇರುವ ಪಾಠ ತೆಗೆದುಹಾಕಿ ಅದರ ಜಾಗದಲ್ಲಿ ಶಿವಕೋಟ್ಯಾಚಾರ್ಯ ಇವರ ‘ಸುಕುಮಾರಸ್ವಾಮಿ ಕಥೆ’ ಈ ಪಾಠ ಸೇರಿಸಲಾಗಿತ್ತು. ಅದೇ ಸಮಯದಲ್ಲಿ 10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಶತಾವಧಾನಿ ಆರ್ ಗಣೇಶ್ ಇವರ ಶ್ರೇಷ್ಠ ಭಾರತೀಯ ಚಿಂತನೆಗಳು ಇದರ ಜಾಗದಲ್ಲಿ ಸಾರಾ ಅಬುಬಕರನ ‘ಯುದ್ಧ’ ಈ ಪಾಠ ಸೇರಿಸಿದೆ.
Karnataka’s #Congress Government to include lessons on #Periyar, #GirishKarnad, and other anti-Hindu figures in school curriculum.
The example of Karnataka should make it clear to Hindus across the nation that voting Congress into power is detrimental to Hindus and their Dharma.… pic.twitter.com/g33rmaXNAv
— Sanatan Prabhat (@SanatanPrabhat) March 8, 2024
ಕಾಂಗ್ರೆಸ್ ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ಧ್ರುವಿಕರಣ ನಿರ್ಮಾಣ ಮಾಡುವುದಿದೆ ! – ಭಾಜಪದಿಂದ ಟೀಕೆ
ಭಾಜಪದ ಸಂಸದ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಇವರು ಕರ್ನಾಟಕ ಸರಕಾರದ ಈ ನಿರ್ಣಯಕ್ಕೆ ವಿರೋಧಿಸಿದ್ದಾರೆ. ಅವರು, ಕಾಂಗ್ರೆಸ್ ಸಂವಿಧಾನ ಮತ್ತು ಕರ್ನಾಟಕದಲ್ಲಿನ ಜನರ ವಿಶ್ವಾಸ ಇದನ್ನು ಗೌರವಿಸುವುದಿಲ್ಲ. ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ದ್ರುವಿಕರಣ ನಿರ್ಮಾಣ ಮಾಡುವುದಿದೆ. ಸರಕಾರ ಸನಾತನ ಧರ್ಮವನ್ನು ಗೌರವಿಸುವುದಿಲ್ಲ. ಆದ್ದರಿಂದ ಅದು ಸನಾತನ ಧರ್ಮದ ವಿರುದ್ಧ ಇರುವವರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದೆ. ಅದು ನಮ್ಮ ಶ್ರದ್ಧೆಯ ವಿರುದ್ಧವಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರಕಾರದ ಮುಖವಾಡಾ ಕಳಚಲು ನಾವು ಜನಜಾಗೃತಿ ಮಾಡುವೆವು. ನಾವು ಈ ಪಠ್ಯಕ್ರಮವನ್ನು ತೀವ್ರವಾಗಿ ವಿರೋಧಿಸುವೇವು ಮತ್ತು ಅದು ಪಠ್ಯಕ್ರಮದಲ್ಲಿ ಸೇರಿಸದಂತೆ ಪ್ರಯತ್ನ ಮಾಡುವೆವು ಎಂದು ಹೇಳಿದರು.