ರಾಜ್ಯದ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಿರಿ ! – ವಿಶೇಷ ತನಿಖಾ ತಂಡ

  • ಉತ್ತರ ಪ್ರದೇಶ ಸರಕಾರ ಸ್ಥಾಪಿಸಿದ ವಿಶೇಷ ತನಿಖಾ ತಂಡದಿಂದ ಶಿಫಾರಸ್ಸು

  • ರಾಜ್ಯದ 23 ಸಾವಿರಗಳ ಪೈಕಿ ಕೇವಲ 5 ಸಾವಿರ ಮದರಾಗಳಿಗೆ ತಾತ್ಕಾಲಿಕ ಅನುಮತಿ !

  • ಮದರಸಾಗಳಿಗೆ ಕೊಲ್ಲಿ ದೇಶಗಳಿಂದ ಹಣ ಪೂರೈಕೆ ! 

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯ ಸರಕಾರದ ಆದೇಶದ ಬಳಿಕ ಅಕ್ರಮ ಮದರಸಾದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ತನ್ನ ವರದಿಯನ್ನು ಆಡಳಿತಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ. ಇವುಗಳಲ್ಲಿ ಹೆಚ್ಚಿನ ಮದರಸಾಗಳು ನೇಪಾಳದ ಗಡಿಯ ಬಳಿ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ. ಈ ಅಕ್ರಮ ಮದರಸಾಗಳು ಕಳೆದ ಎರಡು ದಶಕಗಳಲ್ಲಿಯೇ ನಿರ್ಮಿಸಲಾಗಿದ್ದು, ಅದನ್ನು ನಿರ್ಮಿಸಲು ಕೊಲ್ಲಿ ದೇಶಗಳಿಂದ ಹಣವು ಬಂದಿರುವುದು ಬಹಿರಂಗವಾಗಿದೆ.

(ಸೌಜನ್ಯ – News State)

1. ಈ ವರದಿಯ ಮಾಹಿತಿಯಲ್ಲಿ ಯಾವ 13 ಸಾವಿರ ಮದರಸಾಗಳ ಮೇಲೆ ಕ್ರಮ ಕೈಕೊಳ್ಳುವಂತೆ ಹೇಳಲಾಗಿದೆಯೋ, ಅವುಗಳಲ್ಲಿ ಕೆಲವು ಬಹರಾಯಿಚ, ಶ್ರಾವಸ್ತಿ, ಮಹಾರಾಜಗಂಜ ಇಂತಹ 7 ಜಿಲ್ಲೆಗಳಲ್ಲಿವೆ. ಆಶ್ಚರ್ಯದ ವಿಷಯವೆಂದರೆ ಪ್ರತಿಯೊಂದು ಗಡಿಯಲ್ಲಿರುವ ಜಿಲ್ಲೆಯಲ್ಲಿ ಅವುಗಳ ಸಂಖ್ಯೆ 500 ಕ್ಕಿಂತ ಅಧಿಕವಿದೆ; ಆದರೆ ಮದರಸಾಗಳಿಗೆ ಅವುಗಳ ಉತ್ಪನ್ನಗಳ ಮತ್ತು ವೆಚ್ಚದ ಲೆಕ್ಕವನ್ನು ಕೇಳಿದಾಗ, ಅವರ ಬಳಿ ಉತ್ತರವಿರಲಿಲ್ಲ. ದೇಣಿಗೆದಾರರ ಹೆಸರನ್ನು ಹೇಳುವಂತೆ ಕೇಳಿದಾಗ ಅವರು ಏನೂ ಉತ್ತರಿಸಲಿಲ್ಲ. ಹಾಗೆಯೇ ಅವರಿಗೆ ದೇಣಿಗೆದಾರರ ಹೆಸರನ್ನೂ ಹೇಳಲು ಸಾಧ್ಯವಾಗಲಿಲ್ಲ.

2. ಈ ಮದರಸಾಗಳು ನಿಯೋಜಿತ ಸಂಚಿನ ಭಾಗವಾಗಿ ನಿರ್ಮಿಸಿರಬೇಕು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಗ್ರಹಿಸಿದ ಹಣವನ್ನು ಹವಾಲಾ ಮೂಲಕ ಕಳುಹಿಸಿರಬೇಕು ಎಂದು ದಳವು ಸಂದೇಹ ವ್ಯಕ್ತಪಡಿಸಿದೆ.

3. ಮದರಸಾಗಳಲ್ಲಿ ಚಿಕ್ಕ ಮಕ್ಕಳ ಲೈಂಗಿಕ ಕಿರುಕುಳ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

4. ಇಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕೆಲಸ ಸಿಗುವಲ್ಲಿ ತೊಂದರೆ ಎದುರಾಗುತ್ತಿರುವುದು ಬಹಿರಂಗವಾಗಿದೆ.

5. ವಿಶೇಷ ತನಿಖಾ ತಂಡ ತನಿಖೆ ನಡೆಸಿದ 23 ಸಾವಿರ ಮದರಸಾಗಳ ಪೈಕಿ 5 ಸಾವಿರ ಮದರಸಾಗಳಿಗೆ ತಾತ್ಕಾಲಿಕ ಮಾನ್ಯತೆ ಸಿಕ್ಕಿದೆ. ಮದರಸಾಗಳಲ್ಲಿರುವ ಕೆಲವು ಜನರಿಗೆ ಗುರುತಿನ ಮಾನದಂಡಗಳನ್ನು ಪೂರೈಸುವ ಆಸಕ್ತಿಯು ಇಲ್ಲವೆನ್ನುವುದೂ ಕಂಡು ಬರುತ್ತಿತ್ತು.

ಸಂಪಾದಕೀಯ ನಿಲುವು

ಒಂದು ರಾಜ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಅಕ್ರಮ ಮದರಸಾಗಳು ಕಾರ್ಯನಿರ್ವಹಿಸುವವರೆಗೆ ಪೊಲೀಸರು ಮತ್ತು ಆಡಳಿತವು ನಿದ್ರಿಸ್ತವಾಗಿದ್ದವೇ ? ಕೇವಲ ಒಂದು ರಾಜ್ಯದಲ್ಲಿ ಇಷ್ಟೊಂದು ಇದ್ದರೆ, ಸಂಪೂರ್ಣ ದೇಶದಲ್ಲಿ ಎಷ್ಟು ಅಕ್ರಮ ಮದರಸಾಗಳಿವೆ ಎನ್ನುವ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ !

ಉತ್ತರ ಪ್ರದೇಶ ಸರಕಾರವು ತನಿಖೆ ನಡೆಸಿದ ರೀತಿಯಲ್ಲಿಯೇ, ದೇಶದ ಇತರೆ ರಾಜ್ಯಗಳು ಇಲ್ಲಿಯವರೆಗೆ ಏಕೆ ನಡೆಸಿಲ್ಲ ? ಮದರಸಾದಿಂದ ಭಯೋತ್ಪಾದಕರು ಮತ್ತು ಜಿಹಾದಿಗಳ ಚಟುವಟಿಕೆಗಳ ಜೊತೆಗೆ ಲೈಂಗಿಕ ಕಿರುಕುಳದ ಘಟನೆಗಳು ನಡೆಯುತ್ತಿರುವಾಗ ಅವುಗಳ ತನಿಖೆಯನ್ನು ಏಕೆ ಮಾಡುತ್ತಿಲ್ಲ ?