ಮಾಸ್ಕೋ (ರಷ್ಯಾ) – ಕೆಲವು ವರ್ಷಗಳ ಹಿಂದೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ರಷ್ಯಾದ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಅವರನ್ನು ರಷ್ಯಾ ಭಯೋತ್ಪಾದಕ ಎಂದು ಘೋಷಿಸಿದೆ. ವಿಶೇಷವೆಂದರೆ, ಈ ವಿಷಯದಲ್ಲಿ ರಷ್ಯಾದಿಂದ ಯಾವುದೇ ಸ್ಪಷ್ಟ ಕಾರಣವನ್ನು ನೀಡಲಾಗಿಲ್ಲ. ಕಾಸ್ಪರೋವ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೀರ್ಘಕಾಲದ ವಿರೋಧಿಯಾಗಿದ್ದಾರೆ ಮತ್ತು ಸುಮಾರು ಒಂದು ದಶಕದಿಂದ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ೬೦ ವರ್ಷದ ಕಾಸ್ಪರೋವ್ ಅವರು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಆಕ್ರಮಣದ ವಿರುದ್ಧ ಆಗಾಗ ಹೇಳಿಕೆ ನೀಡಿದ್ದಾರೆ.