ಮುಂಬಯಿ ಸಮಿಪದ ಧಾರಾಪುರಿ ಗುಹಾ ಭಗವಾನ್ ಶಿವನ ಪ್ರಾಚೀನ ಸ್ಥಾನದಲ್ಲಿ; ಮಹಾಶಿವರಾತ್ರಿಯಂದು ಪೂಜೆಗೆ ಅನುಮತಿ ದೊರೆಯಬೇಕು !

ಮಹಾರಾಷ್ಟ್ರ ಮಂದಿರ ಮಹಾಸಂಘದಿಂದ ಪುರಾತತ್ವ ಇಲಾಖೆಗೆ ಆಗ್ರಹ !

ಮುಂಬಯಿ ಮಾರ್ಚ್ ೭(ವಾರ್ತೆ) – ಮುಂಬಯಿ ಹತ್ತಿರದ ಧಾರಾಪುರಿ ದ್ವೀಪದಲ್ಲಿರುವ ಧಾರಾಪುರಿ ಗುಹೆಯಲ್ಲಿನ ಶಿವಲಿಂಗವು ಭಗವನ ಶಿವನ ಪ್ರಾಚೀನ ಸ್ಥಾನವಿದೆ. ಹಿಂದೂಗಳ ಧಾರ್ಮಿಕ ಸ್ಥಾನವಾಗಿರುವ ಈ ಸ್ಥಳದಲ್ಲಿ ಮಹಾಶಿವರಾತ್ರಿ ದಿನದಂದು ಸಮಸ್ತ ಹಿಂದೂಗಳಿಗೆ ಪೂಜೆಯ ಅನುಮತಿ ನೀಡಬೇಕು ಅದಕ್ಕಾಗಿ ಮಾರ್ಚ್ ೭ ರಂದು ಮಹಾರಾಷ್ಟ್ರ ಮಂದಿರ ಮಹಾಸಂಘದ ವತಿಯಿಂದ ಕೇಂದ್ರ ಪುರಾತತ್ವ ಇಲಾಖೆಯ ಮುಂಬಯಿ ವಿಭಾಗಿಯ ಕಾರ್ಯಾಲಯದಲ್ಲಿ ಮನವಿ ನೀಡಿದ್ದಾರೆ. ಈ ಸಮಯದಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ದೇಶಾದ್ಯಂತ ಎಷ್ಟು ಧಾರ್ಮಿಕ ಸ್ಥಳಗಳಿವೆ, ಆ ಎಲ್ಲಾ ಸ್ಥಳಗಳಲ್ಲಿ ಪೂಜೆಯ ಅನುಮತಿ ನೀಡಬೇಕು. ಅದಕ್ಕಾಗಿ ಮಹಾರಾಷ್ಟ್ರ ಮಂದಿರ ಮಹಾಸಂಘ ವತಿಯಿಂದ ಧ್ವನಿಯತ್ತಲಾಗಿದೆ. ಮಾರ್ಚ್ ೮ ರಂದು ಮಹಾಶಿವರಾತ್ರಿಯ ಪ್ರಯುಕ್ತ ಮೊದಲು ಧಾರಾಪುರಿ ಗುಹೆಯಲ್ಲಿನ ಶಿವಲಿಂಗದ ಪೂಜೆಗೆ ಅನುಮತಿ ನೀಡಬೇಕೆಂದು ಮಹಾರಾಷ್ಟ್ರ ಮಂದಿರ ಮಹಾಸಂಘದಿಂದ ಆಗ್ರಹಿಸಿದೆ.

ಹೋರಾಟದ ಆರಂಭದ ಇತಿಹಾಸ !

ಎಲ್ಲಕ್ಕಿಂತ ಮೊದಲು ಸುದರ್ಶನ ವಾಹಿನಿಯ ಮುಖ್ಯ ಸಂಪಾದಕರು ಶ್ರೀ. ಸುರೇಶ ಚೌಹ್ವಾಣಕೆ ಇವರು ಫೆಬ್ರುವರಿ ೧೪, ೨೦೨೪ ರಂದು ನಡೆದಿರುವ ಒಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಹಿಂದೂಗಳಿಗೆ ಧಾರಾಪುರಿ ಇಲ್ಲಿಯ ಶಿವಲಿಂಗದ ಸ್ಥಳದಲ್ಲಿ ಪೂಜೆಗಾಗಿ ಒಟ್ಟಾಗಿ ಸೇರಲು ಕರೆ ನೀಡಿದ್ದರು. ಈ ಕರೆಯಿಂದ ಫೆಬ್ರುವರಿ ೧೫ ರಂದು ಶ್ರೀ. ಸುರೇಶ ಚೌಹ್ವಾಣಕೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂದೆ ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ ರಣಜಿತ ಸಾವರ್ಕರ್ ಇವರ ನೇತೃತ್ವದಲ್ಲಿ ಹಿಂದುಗಳು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದು. ಶಿವಲಿಂಗದ ಪ್ರಾತಿನಿಧಿಕ ಪೂಜೆ ಸಲ್ಲಿಸಿದರು. ಮಹಾರಾಷ್ಟ್ರ ಮಂದಿರ ಮಹಾಸಂಘದಿಂದ ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಪೂಜೆಯ ಅಧಿಕಾರ ದೊರೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಧಾರಾಪುರಿ ದ್ವೀಪ ಇದು ಭಗವಾನ್ ಶಿವನ ಪ್ರಾಚೀನ ಧಾರ್ಮಿಕ ಸ್ಥಳ !

ಧಾರಾಪುರಿ ಇಲ್ಲಿಯ ಗುಹೆಗಳಿಗೆ ‘ಯೂನೆಸ್ಕೋ’ ಇಂದ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ) ‘ಪರಂಪರೆಯ ಸ್ಥಳ’ ಎಂದು ಮಾನ್ಯತೆ ದೊರೆತಿದೆ. ಈ ಗುಹೆಗಳ ೬ ರಿಂದ ೮ ನೇಯ ಶತಮಾನದಲ್ಲಿನ ಇರುವುದಾಗಿ ಹೇಳುತ್ತಾರೆ. ಇಲ್ಲಿಯ ೫ ಗುಹೆ ಒಂದೇ ಭವ್ಯ ಶಿಲೆಯಲ್ಲಿ ಇದ್ದು ಇಲ್ಲಿಯ ಕಲ್ಲುಗಳ ಮೇಲೆ ಭಗವಾನ ಶಿವನ ವಿವಿಧ ಕಥೆಯಲ್ಲಿನ ಪ್ರಸಂಗಗಳು ಭವ್ಯಶಿಲ್ಪಗಳು ಕೆತ್ತಿದ್ದಾರೆ. ಈ ಶಿಲ್ಪಗಳು ಎಂದರೆ ಭಾರತೀಯ ಶಿಲ್ಪಕಲೆಯ ಸರ್ವೋತ್ಕೃಷ್ಟ ನಮೂನೆ ಎನ್ನುತ್ತಾರೆ. ಪೋರ್ತುಗಿಜರ ಕಾಲದಲ್ಲಿ ಶಿಲ್ಪಗಳನ್ನು ಧ್ವಂಸ ಮಾಡಿದ್ದರು. ಬ್ರಿಟಿಷರ ಕಾಲದಲ್ಲಿ ಈ ಶಿಲ್ಪಗಳ ಮೇಲೆ ಗುಂಡು ಹಾರಿಸುವ ಅಭ್ಯಾಸ ಮಾಡಿ ಅದರ ವಿಡಂಬನೆ ಮಾಡುತ್ತಿದ್ದರು. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿಯ ಬಹಳಷ್ಟು ಶಿಲ್ಪಗಳು ಭಗ್ನವಾಗಿವೆ. ಈ ಗುಹೆ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರದಲ್ಲಿ ಇರುವುದರಿಂದ ಇಲ್ಲಿಯ ಶಿವಲಿಂಗದ ಪೂಜಾರ್ಚನೆ ನಿಲ್ಲಿಸಿದ್ದಾರೆ.