ಪಾಕಿಸ್ತಾನ ‘ಭಯೋತ್ಪಾದನೆಯ ಕಾರ್ಖಾನೆ’ ಎಂದು ವಿಶ್ವಮಟ್ಟದಲ್ಲಿ ಪರಿಚಯ !

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಛೀಮಾರಿ ಹಾಕಿದ ಭಾತರ !

ಜಿನೇವಾ (ಸ್ವಿಟ್ಜರ್ಲೆಂಡ್) – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ಛೀಮಾರಿ ಹಾಕಿದೆ. ಪಾಕಿಸ್ತಾನದ ಈ ನಡವಳಿಕೆಯನ್ನು ಟೀಕಿಸಿರುವ ಭಾರತ, ಮಾನವ ಹಕ್ಕುಗಳ ವಿಷಯದಲ್ಲಿ ಪಾಕಿಸ್ತಾನವು ಅತ್ಯಂತ ಕೆಟ್ಟ ಇತಿಹಾಸವನ್ನು ಹೊಂದಿದೆ ಎಂದು ಹೇಳಿದೆ. ಅವರೇ ಅವರ ಆತ್ಮ ಪರೀಕ್ಷೆಯನ್ನು ಮಾಡಿಕೊಳ್ಳಬೇಕು ಪಾಕಿಸ್ತಾನದ ‘ಭಯೋತ್ಪಾದನೆ ಕಾರ್ಖಾನೆ’ ಎಂದು ಜಾಗತಿಕವಾಗಿ ಕರೆಯಲಾಗುತ್ತದೆ. ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ಭಾರತದ ಸ್ಥಿತಿ ಪ್ರತಿನಿಧಿ ಜಗಪ್ರೀತ್ ಕೌರ್ ಇವರು ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನವು ‘ಇಸ್ಲಾಮಿಕ್ ಸಹಕಾರ ಸಂಘಟನೆ’ (ಒಐಸಿ) ಪರವಾಗಿ ಮಾತನಾಡುವಾಗ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿತ್ತು.

ಸಂಪಾದಕೀಯ ನಿಲುವು

ನಾಯಿಯ ಬಾಲವನ್ನು ಎಷ್ಟೇ ನೇರಗೊಳಿಸಲು ಪ್ರಯತ್ನಿಸಿದರೂ ಅದು ವಕ್ರವಾಗಿ ಉಳಿಯುತ್ತದೆ ಹಾಗೆ ಪಾಕಿಸ್ತಾನವಿದೆ. ಘೇಂಡಾಮೃಗದ ಚರ್ಮದ ಪಾಕಿಸ್ತಾನಕ್ಕೆ ಇಷ್ಟೇ ಚಿಮರಿ ಹಾಕಿದರು ಅದರ ಮೇಲೆ ಏನೋ ಪರಿಣಾಮ ಆಗುವುದಿಲ್ಲ ಇದೇ ಸತ್ಯ !