ಭಾರತದ ಆಕ್ಷೇಪದಿಂದಾಗಿ ತೈವಾನ್ ಕ್ಷಮಾಯಾಚನೆ !

ತೈವಾನಿನ ಕಾರ್ಮಿಕ ಸಚಿವರಿಂದ ಭಾರತೀಯ ಕಾರ್ಮಿಕರ ಕುರಿತು ವರ್ಣದ್ವೇಷಿ ಹೇಳಿಕೆ ನೀಡಿತ್ತು !

ತೈಪೆಯಿ (ತೈವಾನ) – ತೈವಾನಿನ ಕಾರ್ಮಿಕ ಸಚಿವ ಝು ಮಿಂಗ ಚುನ ಇವರು ಮಾರ್ಚ್ ೪ ರಂದು ‘ಈಶಾನ್ಯ ಭಾರತದಲ್ಲಿನ ಜನರ ಬಣ್ಣ ಮತ್ತು ಆಹಾರ ಪದ್ಧತಿ ನಮ್ಮ ಹಾಗೆಯೇ ಇದೆ. ನಮ್ಮ ರೀತಿ ಅವರು ಕ್ರೈಸ್ತ ಧರ್ಮದ ಮೇಲೆ ಹೆಚ್ಚು ವಿಶ್ವಾಸ ಇಡುತ್ತಾರೆ. ಅವರು ಅವರ ಕೆಲಸದಲ್ಲಿಯೂ ನಿಪುಣರಾಗಿದ್ದಾರೆ. ಆದ್ದರಿಂದ ಮೊದಲು ಈಶಾನ್ಯದ ಕಾರ್ಮಿಕರ ಭರ್ತಿ ಮಾಡುವೆವು’ ಎಂದು ಹೇಳಿಕೆ ನೀಡಿದ್ದರು. ನಂತರ ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ ಇದನ್ನು ವರ್ಣ ದ್ವೇಷ ಎಂದು ಖಂಡಿಸಿದ್ದರು. ಅದರ ನಂತರ ಈಗ ತೈವಾನ ಕ್ಷಮೆ ಯಾಚಿಸಿದೆ.

೧. ತೈವಾನ, ಸಚಿವರ ಟಿಪ್ಪಣಿ ಖೆದಕರವಾಗಿದೆ. ತೈವಾನ ಯಾವುದೇ ವಲಸೆ ಕಾರ್ಮಿಕರು ಅಥವಾ ಉದ್ಯಮಿಗಳ ಜೊತೆಗೆ ಯಾವುದೇ ರೀತಿಯ ವಂಶ, ಧರ್ಮ, ಭಾಷೆ ಅಥವಾ ಆಹಾರದ ಪದ್ಧತಿಗಳ ಆಧಾರದ ಮೇಲೆ ಭೇದಭಾವ ಮಾಡುತ್ತಿಲ್ಲ. ನಾವು ಭಾರತ ಸರಕಾರಕ್ಕೆ, ತೈವಾನದಲ್ಲಿನ ಎಲ್ಲಾ ಭಾರತೀಯರಿಗೆ ನ್ಯಾಯಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡುತ್ತೇವೆ.

೨. ಭಾರತ ಮತ್ತು ತೈವಾನ ಇವರು ಫೆಬ್ರುವರಿ ೧೭, ೨೦೨೪ ರಂದು ಸಮನ್ವಯ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಮನ್ವಯ ಒಪ್ಪಂದದ ಅಂತರ್ಗತ ಭಾರತೀಯ ಕಾರ್ಮಿಕರಿಗಾಗಿ ತೈವಾನಿನ ಬಾಗಿಲು ತೆರೆದಿರುತ್ತದೆ. ತೈವಾನಿನಲ್ಲಿ ಈಗ ಉತ್ಪಾದನೆ, ಕಟ್ಟಡ ಕಾಮಗಾರಿ ಮತ್ತು ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಇದೆ. ಈ ಒಪ್ಪಂದದ ಅಂತರ್ಗತ ಭಾರತದಲ್ಲಿನ ಎಷ್ಟು ವಲಸೆ ಕಾರ್ಮಿಕರಿಗೆ ಅನುಮತಿ ನೀಡುವುದು ಇದನ್ನು ತೈವಾನ ನಿರ್ಧರಿಸುವುದು.