ಮಥುರಾ (ಉತ್ತರ ಪ್ರದೇಶ) – ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನಿಂದ ಮಾರ್ಚ್ 5 ರಂದು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ. ಶ್ರೀಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿಯ ಈ ಪ್ರಕರಣವಾಗಿದ್ದು, ` ಭಗವಾನ ಶ್ರೀ ಕೃಷ್ಣನ ಜನ್ಮಭೂಮಿಯಲ್ಲಿ ಶ್ರೀಕೃಷ್ಣನನ್ನು ಬಾಲಕನ ರೂಪದಲ್ಲಿ ಪೂಜಿಸಲಾಗುತ್ತದೆ. ಅವನು ಅಪ್ರಾಪ್ತ ವಯಸ್ಕನಾಗಿದ್ದು, ಉತ್ತರ ಪ್ರದೇಶ ಸರಕಾರದ ಪ್ರತಿನಿಧಿಯಾಗಿರುವ ಮಥುರಾ ಜಿಲ್ಲಾಧಿಕಾರಿಗಳನ್ನು ಸಂರಕ್ಷಕರನ್ನಾಗಿ ನೇಮಿಸಬೇಕು’ ಎಂಬ ಮನವಿಯನ್ನು ಈ ಅರ್ಜಿಯಲ್ಲಿ ಮಾಡಲಾಗಿದೆ. ನ್ಯಾಯಾಲಯವು ಈ ಅರ್ಜಿಯನ್ನು ಸ್ವೀಕರಿಸಿದೆ. ಹಾಗೆಯೇ ಈ ಸಂದರ್ಭದಲ್ಲಿ ಮಥುರಾ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಮಾರ್ಚ್ 18 ರಂದು ನಡೆಯಲಿದೆ.
ಈ ಸಂದರ್ಭದಲ್ಲಿ ‘ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್’ ಅಧ್ಯಕ್ಷ ಮತ್ತು ಸಿದ್ಧಪೀಠ ಮಾ ಶಾಕುಂಭರಿ ಪೀಠದ ಪೀಠಾದೀಶ್ವರ ಅಶುತೋಷ್ ಪಾಂಡೆಯವರು `ಸನಾತನ ಪ್ರಭಾತ’ ಕ್ಕೆ, ಶಾಹಿ ಈದ್ಗಾ ಮಶೀದಿಯ ವಕ್ಫ್ ಬೋರ್ಡ್ ಅಡಿಯಲ್ಲಿ ಮಾಡಿದ ನೋಂದಣಿಯನ್ನು ಕೃತಕವಾಗಿ ಮಾಡಲಾಗಿತ್ತು. ಇದರಲ್ಲಿ ಸುಳ್ಳು ದಾಖಲೆಗಳನ್ನು ಸೇರಿಸಲಾಗಿದೆ. ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಅದರ ವಿಚಾರಣೆ ಮಾರ್ಚ 5 ರಂದು ನಡೆಯಲಿಲ್ಲ. ಮುಂದಿನ ವಿಚಾರಣೆ ಮಾರ್ಚ 19 ರಂದು ನಡೆಯಲಿದೆ.
BIG BREAKING!@AshutoshBhriguV ji & others from the @Krishnjanmsthan submitted a petition in #Mathura district court today.
They have requested the court to appoint Mathura DM as official protector (Sanrakshak) of Bhagwan #Shrikrishna.
Next hearing on March 18@Vishnu_Jain1 pic.twitter.com/63AUGWGsdi
— Sanatan Prabhat (@SanatanPrabhat) March 5, 2024