ದುರ್ಗ (ಛತ್ತೀಸ್‌ಗಢ)ದಲ್ಲಿ ಹಿಂದೂಗಳ ಮತಾಂತರವನ್ನು ವಿರೋಧಿಸಿದ್ದರಿಂದ ಕ್ರೈಸ್ತರಿಂದ ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ !

ದುರ್ಗ (ಛತ್ತೀಸಗಡ) – ಇಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳ ಮತಾಂತರವನ್ನು ಮಾಡಲಾಗುತ್ತಿದೆಯೆಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದರಿಂದ ಕ್ರೈಸ್ತರು ಹಲ್ಲೆ ಮಾಡಿದ್ದಾರೆ. ಈ ಘಟನೆಯ ಮಾಹಿತಿ ಸಿಗುತ್ತಲೇ, ಪೊಲೀಸರು ತಲುಪಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಪ್ರಕರಣದಲ್ಲಿ ದೂರನ್ನು ದಾಖಲಿಸಿ ಎರಡೂ ಪಕ್ಷದವರಿಂದ ಪೊಲೀಸ ಠಾಣೆಯಲ್ಲಿ ಗದ್ದಲ ಮಾಡಿದರು. ಈ ಘಟನೆ ಮಾರ್ಚ್ 3 ರಂದು ನಡೆದಿದೆ.

1. ಬಜರಂಗ ದಳದವರು ಮಾತನಾಡಿ, ಇಲ್ಲಿ ಅನೇಕ ದಿನಗಳಿಂದ ಮತಾಂತರದ ದೂರುಗಳು ಬರುತ್ತಿದ್ದವು. ಓರಿಯಾ ಕಾಲನಿಯಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಮತಾಂತರದ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

2. ರಾಯಪುರ ವೃತ್ತದ ಬಳಿ ಒಂದು ಚರ್ಚ್‌ನಲ್ಲಿ ಪ್ರಾರ್ಥನೆಗೆ ನೂರಾರು ಜನರು ಹಾಜರಾಗಿದ್ದರು. ಆ ಸಮಯದಲ್ಲಿ ಬಜರಂಗದಳದ ಸದಸ್ಯರು ಅಲ್ಲಿಗೆ ತಲುಪಿ, ಪ್ರತಿಭಟಿಸಲು ಪ್ರಾರಂಭಿಸಿದರು. ಈ ಸಮಯದಲ್ಲಿ ಮತಾಂತರ ಮಾಡುವ ಕ್ರೈಸ್ತರು ಬಜರಂಗ ದಳದವರ ಮೇಲೆ ಹಲ್ಲೆ ಮಾಡಿ ಕಲ್ಲು ತೂರಾಟ ಮಾಡಿದರು. ಆ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಎರಡೂ ಪಕ್ಷದ ಜನರು ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ.

3. ಬಜರಂಗದಳದ ಸಹ ಸಂಯೋಜಕ ರಾಮಲೋಚನ ತಿವಾರಿಯವರು, ಕ್ರೈಸ್ತ ಮಿಶನರಿಯವರು ಹಿಂದೂಗಳ ವಸತಿಗಳಲ್ಲಿ ಕರಪತ್ರಗಳನ್ನು ಹಂಚಿ ಹಣ ಮತ್ತು ಶಿಕ್ಷಣದ ಆಮಿಷವನ್ನು ತೋರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

4. ಇಲ್ಲಿನ ಪಾದ್ರಿ ವಿನೋದ ಇವರು, ಒಂದು ಹಿಂದೂ ಸಂಘಟನೆಗೆ ಸಂಬಂಧಿಸಿದ 15 ರಿಂದ 20 ಜನರು ಪ್ರಾರ್ಥನೆ ಮಾಡುತ್ತಿರುವ ಜನರ ಮೇಲೆ ದಾಳಿ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಈ ಸಭೆಯಲ್ಲಿ ಕೇವಲ ಕ್ರೈಸ್ತರು ಮಾತ್ರವಲ್ಲ, ಪ್ರತಿಯೊಂದು ಧರ್ಮದ ಜನರೂ ಭಾಗವಹಿಸುತ್ತಾರೆ.

5. ದುರ್ಗದ ಪೊಲೀಸ ಅಧಿಕಾರಿ ಚಿರಾಗ ಜೈನ ಇವರು, ಈ ಘಟನೆ ತಪ್ಪು ತಿಳುವಳಿಕೆ ಇಲ್ಲದೆ ನಡೆದಿದ್ದು, ನಿಯಮಾನುಸಾರ ಕಾನೂನು ಕ್ರಮವನ್ನು ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಛತ್ತೀಸಗಢದಲ್ಲಿ ಈಗ ಭಾಜಪ ಸರಕಾರ ಇರುವುದರಿಂದ ಸರಕಾರವೇ ಪೊಲೀಸರ ಮೂಲಕ ಇಂತಹ ಘಟನೆಗಳ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು. ಹಾಗೆಯೇ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನನ್ನು ನಿರ್ಮಿಸಿ, ಕ್ರೈಸ್ತ ಮಿಶನರಿಗಳ ಮೇಲೆ ಗಮನವಿಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !