ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರಕ್ಕೆ ಪ್ರತಿದಿನ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ. ಈ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸವು ಈ ಭಕ್ತರಿಗೆ ಜೈಲಿನ ಕೈದಿಗಳು ತಯಾರಿಸಿದ 5 ಸಾವಿರ ಚೀಲಗಳಿಂದ ಪ್ರಸಾದ ನೀಡಲು ನಿರ್ಧರಿಸಿದೆ. ಫತೇಪುರ್ ಜೈಲಿನ ಕೈದಿಗಳು ಶ್ರೀರಾಮ ಮಂದಿರಕ್ಕಾಗಿ ಕೈಜೋಡಿಸಬೇಕು ಅದಕ್ಕಾಗಿ ಅವರೇ ತಯಾರಿಸಿದ 1 ಸಾವಿರದ 100 ಚೀಲಗಳನ್ನು ದೇವಾಲಯಕ್ಕೆ ಅರ್ಪಿಸಿದರು. ಈ ಚೀಲಗಳ ಬಣ್ಣ ಕೇಸರಿಯಾಗಿದ್ದು ಅದರ ಮೇಲೆ ಶ್ರೀರಾಮನ ದೇವಾಲಯದ ಚಿತ್ರ ಇದೆ. ಈ ಚೀಲ ನ್ಯಾಸಕ್ಕೆ ಸಿಕ್ಕಿದ ನಂತರ ಎಲ್ಲರಿಗೂ ಅದು ಇಷ್ಟವಾಯಿತು. ಇದರ ನಂತರ, ನ್ಯಾಸ ಸಚಿವ ಚಂಪತ್ ರೈ ಅವರು ಈ ಕೈದಿಗಳಿಗೆ ಇನ್ನೂ 5 ಸಾವಿರ ಬ್ಯಾಗ್‌ಗಳನ್ನು ತಯಾರಿಸುವಂತೆ ವಿನಂತಿಸಿದ್ದಾರೆ. ಈ ಕೈದಿಗಳು ತಯಾರಿಸಿದ ಚೀಲಗಳಿಂದ ಭಕ್ತರಿಗೆ ಪ್ರಸಾದ ನೀಡಲಾಗುವುದು.