Abu Dhabi’s Dresscode : ಅಬುಧಾಬಿಯಲ್ಲಿನ ಸ್ವಾಮಿ ನಾರಾಯಣ ಮಂದಿರದಲ್ಲಿ ಮೊದಲನೆಯ ಭಾನುವಾರ ೬೫ ಸಾವಿರ ಜನರು ದರ್ಶನ ಪಡೆದರು !

ಮಾರ್ಚ್ ೧ ರಿಂದ ಎಲ್ಲರಿಗಾಗಿ ದೇವಸ್ಥಾನ ತೆರೆದಿದೆ !

ಅಬುಧಾಬಿ (ಸಂಯುಕ್ತ ಅರಬ್ ಅಮಿರಾತ) – ಇಲ್ಲಿ ಕಳೆದ ತಿಂಗಳಲ್ಲಿ ಉದ್ಘಾಟನೆ ಆಗಿರುವ ಸ್ವಾಮಿ ನಾರಾಯಣ ಮಂದಿರ ಮಾರ್ಚ್ ೧ ರಂದು ಎಲ್ಲರಿಗಾಗಿ ತೆರೆದಿದ್ದಾರೆ. ಈ ಮಂದಿರ ಎಲ್ಲರಿಗಾಗಿ ತೆರೆದ ನಂತರ ಮೊದಲನೆಯ ಭಾನುವಾರ ಎಂದರೆ ಮಾರ್ಚ್ ೩ ರಂದು ೬೫ ಸಾವಿರ ಜನರು ಮಂದಿರದಲ್ಲಿ ಭಾವಪೂರ್ಣ ದರ್ಶನ ಪಡೆದರು. ಒಂದು ಮುಸಲ್ಮಾನ ದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಂದು ಹಿಂದೂ ಮಂದಿರದಲ್ಲಿ ದರ್ಶನ ಪಡೆಯುವುದು ಬಹುಶಃ ಇದೇ ಮೊದಲ ಬಾರಿ ಇರಬಹುದು. ಈ ಪ್ರಸಂಗದಲ್ಲಿ ದರ್ಶನಾರ್ಥಿಗಳು ಮಂದಿರದ ವ್ಯವಸ್ಥೆಗಾಗಿ ಇಲ್ಲಿಯ ಸ್ವಯಂಸೇವಕ ಮತ್ತು ಮಂದಿರ ಕಾರ್ಮಿಕರನ್ನು ಹೊಗಳಿದರು ಮತ್ತು ಆನಂದ ವ್ಯಕ್ತಪಡಿಸಿದರು. ಬಹಳಷ್ಟು ಗದ್ದಲ ಇದ್ದರೂ ಕೂಡ ಭಕ್ತರು ನೂಕು ನಗ್ಗಲು ಇಲ್ಲದೆ ತಾಳ್ಮೆಯಿಂದ ಸರದಿಯಲ್ಲಿ ನಿಂತ್ತಿದ್ದರು.

ಅಬುದಾಬಿ ಇಲ್ಲಿಯ ಸುಮಂತ ರಾಯ ಇವರು ಸ್ಥಳೀಯ ಸಮಾಚಾರ ಪತ್ರಿಕೆ ‘ಖಲೀಜ ಟೈಮ್ಸ್’ನೊಂದಿಗೆ ಮಾತಾಡುತ್ತಾ, ಸಾವಿರಾರು ಜನರಲ್ಲಿ ಇಂತಹ ಅಪ್ರತಿಮ ಶಿಸ್ತು ನಾನು ಎಂದು ನೋಡಲಿಲ್ಲ. ನನಗೆ ಅವರೆಲ್ಲರು ಗಂಟೆಗಟ್ಟಲೆ ದಾರಿ ಕಾಯಬೇಕು ಮತ್ತು ಶಾಂತಿಯಿಂದ ದರ್ಶನ ಪಡೆಯಲು ಸಾಧ್ಯವಾಗದು, ಎಂದು ಭಯವಾಗುತ್ತಿತ್ತು, ಆದರೆ ನಾವು ಶಾಂತಿಯಿಂದ ದರ್ಶನ ಪಡೆದರು ಮತ್ತು ಅತ್ಯಂತ ಸಮಾಧಾನವಾಯಿತು.