`ಸಾರ್ಕ್’ ಸದಸ್ಯ ರಾಷ್ಟ್ರಗಳಿಂದ ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ! – ಎಸ್. ಜೈಶಂಕರ 

ನವದೆಹಲಿ – ಪಾಕಿಸ್ತಾನದಲ್ಲಿ ಶಹಬಾಜ ಷರೀಫ ಸರಕಾರದ ಸ್ಥಾಪನೆಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ ಇವರು ದಕ್ಷಿಣ ಏಶಿಯಾ ಸಹಕಾರ ಸಂಘಟನೆ ಅರ್ಥಾತ್ (ಸಾರ್ಕ್) ಶೀಘ್ರ ಪುನರುಜ್ಜೀವನದ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಪಾಕಿಸ್ತಾನದ ಹೆಸರನ್ನು ತೆಗೆದುಕೊಳ್ಳದೇ ಜೈಶಂಕರ ಮಾತನಾಡಿ, ಸಾರ್ಕ ಸಂಕಟದಲ್ಲಿದೆ; ಕಾರಣ ಅದರ ಸದಸ್ಯ ದೇಶವೊಂದು ಭಯೋತ್ಪಾದಕತೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ಕನ ಭವಿಷ್ಯದ ಮೇಲೆಯೂ ಗಂಭೀರ ಪ್ರಶ್ನೆಯನ್ನು ಎತ್ತಲಾಗುತ್ತಿದೆ.

 1. ಸಾರ್ಕ್ ಒಂದು ಪ್ರಾದೇಶಿಕ ಸಂಘಟನೆಯಾಗಿದ್ದು, ಇದರಲ್ಲಿ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಸೇರಿವೆ. 2016 ರಿಂದ ಸಾರ್ಕ ಪರಿಣಾಮಕಾರಿಯ ಕುರಿತು ಪ್ರಶ್ನಿಸಲಾಗುತ್ತಿತ್ತು.

 2. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ, ಬಾಂಗ್ಲಾದೇಶ, ಭೂತಾನ ಮತ್ತು ಅಫ್ಘಾನಿಸ್ತಾನ ಇದರಲ್ಲಿ ಭಾಗವಹಿಸಲು ನಿರಾಕರಿಸಿದ್ದರು.

 3. ಭಾರತವು ಸಾರ್ಕ ಸ್ಥಳದಲ್ಲಿ `ಬಿಮಸ್ಟೆಕ’ ನ (ಬಹುಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳದ ಉಪಸಾಗರದ ಮುಂದಾಳತ್ವ) ಪ್ರಚಾರವನ್ನು ಪ್ರಾರಂಭಿಸಿದೆ. ವಿದೇಶಾಂಗ ಸಚಿವ ಜೈಶಂಕರ ಮಾತನಾಡಿ, ಬಿಮ್‌ಸ್ಟೆಕ್ ಅಡಿಯಲ್ಲಿ ಸಹಕಾರವು ಮುಂದುವರಿಯುತ್ತಿದೆ ಮತ್ತು ಸಂಘಟನೆಯು ವೃದ್ಧಿಸುವ ಇಚ್ಛೆಯಿದೆ ಎಂದು ಹೇಳಿದ್ದಾರೆ.