ಪ್ರಯಾಗರಾಜ್ (ಉತ್ತರ ಪ್ರದೇಶ) – ಇಂದು ಪ್ರೇಮ ವಿವಾಹಗಳು ಎಷ್ಟು ಸುಲಭವಾಗಿ ನಡೆಯುತ್ತಿವೆಯೋ ಅಷ್ಟೇ ಸುಲಭವಾಗಿ ದಂಪತಿಗಳ ನಡುವೆ ವಿವಾದಗಳು ಉಂಟಾಗುತ್ತಿವೆ. ಇದನ್ನು ಗಮನಿಸಿದರೇ ಹಿಂದೂ ವಿವಾಹ ಕಾಯ್ದೆಯನ್ನು ಬದಲಾಯಿಸಬೇಕು ಎಂದು ಅಲಹಾಬಾದ್ ನ್ಯಾಯಾಲಯವು ಪ್ರೇಮ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಪತಿಯ ಪರವಾಗಿ ತೀರ್ಪು ನೀಡುವ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದೆ. ಪ್ರಸ್ತುತ ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ, ವಿಚ್ಛೇದನವನ್ನು ಬಯಸುವ ದಂಪತಿಗಳು ವಿಚ್ಛೇದನ ಅರ್ಜಿಯನ್ನು ನಮೂದಿಸಿದ ನಂತರ (ಫೈಲಿಂಗ್) ೬ ತಿಂಗಳ ಕಾಲ ಒಟ್ಟಿಗೆ ವಾಸಿಸಬೇಕಾಗುತ್ತದೆ.
Due to the increasing trend of love marriages, it has now become imperative to change the Hindu Marriage Act ! – Allahabad High Court
According to the Dharmashastras, irrespective of the type of marriage, love or arranged, a person has to undergo his destiny. It is also… pic.twitter.com/OVKy7Ii0X8
— Sanatan Prabhat (@SanatanPrabhat) March 3, 2024
ನ್ಯಾಯಾಲಯವು, ೧೯೫೫ರಲ್ಲಿ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಆ ಸಮಯದಲ್ಲಿ ವೈವಾಹಿಕ ಸಂಬಂಧದಲ್ಲಿ ಭಾವನೆಗಳು ಮತ್ತು ಗೌರವದ ಮಟ್ಟವು ವಿಭಿನ್ನವಾಗಿತ್ತು. ಆಗ ಇಂದಿನಂತೆ ಮದುವೆಗಳು ಇರಲಿಲ್ಲ. ಈಗ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಜಾತಿಯ ಅಡೆತಡೆಗಳನ್ನು ಎದುರಿಸುವುದು, ಆಧುನೀಕರಣ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಮದುವೆ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ವಾಸ್ತವವಾಗಿ, ಸಮಾಜವು ಹೆಚ್ಚು ಉದಾರ ಮತ್ತು ವೈಯಕ್ತಿಕವಾಗಿದೆ. ಭಾವನಾತ್ಮಕ ಬೆಂಬಲಕ್ಕೆ ಹೆಚ್ಚಿನ ಅವಕಾಶವಿಲ್ಲ.
ಸಂಪಾದಕೀಯ ನಿಲುವುಪ್ರೇಮವಿವಾಹವಾಗಿರಲಿ ಅಥವಾ ನಿರ್ಧರಿತ ವಿವಾಹವೇ ಆಗಿರಲಿ ಪ್ರಾರಬ್ಧನುಸಾರ ಅನುಭವಿಸಲೇ ಬೇಕಾಗುತ್ತದೆ ಇದು ಧರ್ಮಶಾಸ್ತ್ರವಾಗಿದೆ. ಅದರಲ್ಲೂ ಪ್ರೇಮವಿವಾಹ ಮಾಡುವಾಗ ಜಾತಕ ನೋಡುವುದು, ಒಬ್ಬರಿಗೊಬ್ಬರು ಗುಣ-ದೋಷಗಳನ್ನು ಗಮನದಲ್ಲಿಟ್ಟುಕೊಳ್ಳುವುದು, ಹೊಂದಿಕೊಂಡು ಹೋಗುವ ಮನಸ್ಥಿತಿ ಇಟ್ಟುಕೊಳ್ಳುವುದು ಮುಂತಾದ ವಿಚಾರಗಳ ಬಗ್ಗೆಯೂ ಯೋಚಿಸಬೇಕು ! |