ಕೃತಕ ಬುದ್ಧಿಮತ್ತೆ ಬಳಕೆ ಮೂಲಕ ಅಪರಾಧ ತಡೆಗೆ ರೈಲ್ವೆ ಇಲಾಖೆಯ ಪ್ರಯತ್ನ !
ನವದೆಹಲಿ – ವಿಮಾನ ನಿಲ್ದಾಣಗಳಂತೆ ಈಗ ದೇಶದಲ್ಲಿ ರೈಲ್ವೆ ಸೇವೆಗಳನ್ನು ಆಧುನೀಕರಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಕೃತಕ ಬುದ್ಧಿಮತ್ತೆಯನ್ನು ಇಲ್ಲಿ ಬಳಸಲಾಗುತ್ತಿರುವುದು ವಿಶೇಷವಾಗಿದೆ. ರೈಲ್ವೆ ಇಲಾಖೆಯು ೪೪ ಸಾವಿರ ಕೋಚ್‌ಗಳಲ್ಲಿ ಮುಖಗಳನ್ನು ಗುರುತಿಸುವ ’ಸಿಸಿಟಿವಿ ಕ್ಯಾಮೆರಾ’ ಅಳವಡಿಸಲು ಟೆಂಡರ್ ಕರೆದಿದೆ. ಇದರಿಂದ ರೈಲಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಬಹುದು. ‘ಫೇಸ್ ರಿಕಗ್ನಿಶನ್ ಕ್ಯಾಮೆರಾ’ಗಳಿಂದ ಸೆರೆಹಿಡಿಯಲಾದ ಚಿತ್ರಗಳನ್ನು ಅಪರಾಧಿಗಳ ’ಡೇಟಾಬೇಸ್’ಗೆ ಲಿಂಕ್ ಮಾಡಲಾಗುತ್ತದೆ ಮತ್ತು ಕೃತಕ ಬುದ್ಧಿಮತ್ತೆಯಿಂದ ಗುರುತಿಸಲಾಗುತ್ತದೆ. ಇದು ಪುನರಾವರ್ತಿತ ಅಪರಾಧಿಗಳನ್ನು ಹಿಡಿಯಲು ಸಹಾಯ ಮಾಡುತ್ತದೆ. ಈ ಕ್ಯಾಮೆರಾಗಳನ್ನು ಕೇಂದ್ರ, ಪಶ್ಚಿಮ ಮತ್ತು ಪೂರ್ವ ರೈಲ್ವೆ ಮಾರ್ಗಗಳ ರೈಲುಗಳಲ್ಲಿ ಅಳವಡಿಸಲಾಗುವುದು. ೩೮ ಸಾವಿರಕ್ಕೂ ಹೆಚ್ಚು ಕೋಚ್‌ಗಳಲ್ಲಿ ತಲಾ ೮ ಕ್ಯಾಮೆರಾಗಳು, ೨ ಸಾವಿರ ಕೋಚ್‌ಗಳಲ್ಲಿ ತಲಾ ೪ ಕ್ಯಾಮೆರಾಗಳು ಮತ್ತು ೯೬೦ ಕೋಚ್‌ಗಳು ತಲಾ ೬ ಕ್ಯಾಮೆರಾಗಳು ಇರಲಿದೆ.
Facial recognition #cameras will be installed on the doors of 44 thousand railway coaches !
An attempt by the #railways Department to curb crime on trains through #ArtificialIntelligence ! pic.twitter.com/eOe8ugm6AJ
— Sanatan Prabhat (@SanatanPrabhat) March 3, 2024
ಸಿಸಿಟಿವಿ ಕ್ಯಾಮೆರಾ ಸಾಮರ್ಥ್ಯ ಹೀಗಿರಬೇಕು !
ಟೆಂಡರ್ ನಲ್ಲಿ, ಸಿಸಿಟಿವಿ ಕ್ಯಾಮೆರಾಗಳಲ್ಲಿ ‘ಇಮೇಜ್ ಕ್ರಾಪಿಂಗ್ ಟೂಲ್’ ಇರಬೇಕು. ಇದರಿಂದಾಗಿ ಕನ್ನಡಕ, ಗಾಗಲ್, ಸ್ಕಾರ್ಫ್, ಅರ್ಧ ಮುಚ್ಚಿದ ಮುಖವನ್ನು ಪತ್ತೆ ಮಾಡುತ್ತದೆ. ಮಾಸ್ಕ ಇದ್ದರೂ ಮುಖ ಗುರುತಿಸುವಿಕೆಯು ೯೫ ಪ್ರತಿಶತ ನಿಖರವಾಗಿರಬೇಕು. ಮಾಸ್ಕ ಇಲ್ಲದ ಮುಖಗಳು ೯೯ ಪ್ರತಿಶತದಷ್ಟು ನಿಖರತೆಯನ್ನು ಹೊಂದಿರಬೇಕು. ಕ್ಯಾಮರಾ ಗಂಟೆಗೆ ೧೦೦ ಮುಖಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರಬೇಕು. (ಈ ಶ್ಲಾಘನೀಯ ಉಪಕ್ರಮದ ಜೊತೆಗೆ, ಸರಕಾರವು ಬುರ್ಕಾ ಮೇಲೆ ನಿಷೇಧ ಹೇರಲು ಪ್ರಯತ್ನಿಸಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ. ಇಲ್ಲದಿದ್ದರೆ, ಅಪರಾಧಿಗಳು ಬುರ್ಕಾ ಬಳಸಿ ಅಪರಾಧಗಳನ್ನು ಮುಂದುವರೆಸುತ್ತಾರೆ ! – ಸಂಪಾದಕರು)