ಪುತ್ತೂರಿಲ್ಲಿ ವೃದ್ಧನಿಗೆ ಥಳಿಸಿದ ಪಾದ್ರಿ !

ಪುತ್ತೂರು – ಇಲ್ಲಿನ ಮನೇಲ ಚರ್ಚ್‌ನ ಹಿರಿಯ ಪಾದ್ರಿಯೊಬ್ಬರು ಅವರ ಮನೆಯಲ್ಲಿಯೇ ವೃದ್ಧರೊಬ್ಬರಿಗೆ ಥಳಿಸಿದ ಘಟನೆ ಫೆಬ್ರವರಿ 29ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯಿಂದ ಜನರು ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಪುಣಾಚ ಗ್ರಾಮದ ಎರ್ಮೆತಡೊಕ ನಿವಾಸಿ ಗ್ರೆಗರಿ ಮೊಂಟೆರೊ (ವಯಸ್ಸು 79 ವರ್ಷ) ಎಂಬವರ ಮನೆಗೆ ಪಾದ್ರಿ ನೆಲ್ಸನ್ ಆಲಿವೇರಾ ಅವರು ಮನೆ ಸ್ವಚ್ಛತೆಗೆ ಭೇಟಿ ನೀಡಿದ್ದರು. ಆ ವೇಳೆ ಪಾದ್ರಿ ನೆಲ್ಸನ್, ‘ಈ ವೃದ್ದ ವ್ಯಕ್ತಿ ಚರ್ಚ್‌ಗೆ ದೇಣಿಗೆ ನೀಡಿ ಸಹಕರಿಸುತ್ತಿಲ್ಲ’ ಎಂದು ಮುದುಕನನ್ನು ಅವಾಚ್ಯವಾಗಿ ನಿಂದಿಸಿದ. ಹಾಗೆಯೇ ಮೊಂಟೇರಾ ಅವರ ಅಂಗಿಯ ಕಾಲರ್ ಹಿಡಿದು ಎಳೆದಾಡಿ ಥಳಿಸಿದ್ದಾರೆ.

ಪಾದ್ರಿ ನೆಲ್ಸನ್ ಆಲಿವೇರಾ

ವಿಶೇಷ ಎಂದರೆ ಈ ಹಿಂದೆ ತಲಪಾಡಿ, ಸಂಪಿಕೆ ಚರ್ಚ್‌ನಲ್ಲಿಯೂ ಇದೇ ಪಾದ್ರಿ ಇದೇ ರೀತಿ ನಡೆದುಕೊಂಡಿದ್ದ ಎಂಬುದು ಸ್ಥಳೀಯರು ಹೇಳಿದ್ದಾರೆ. (ಅಂದು ಈ ಪಾದ್ರಿ ವಿರುದ್ಧ ಕ್ರಮ ಕೈಗೊಂಡಿದ್ದರೆ ಈಗಿನ ಘಟನೆ ನಡೆಯುತ್ತಿರಲಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ಪಾದ್ರಿ ಅಂದರೆ ಚಲನಚಿತ್ರಗಳಲ್ಲಿ ಸಭ್ಯ ಮತ್ತು ಸುಸಂಸ್ಕೃತ ವ್ಯಕ್ತಿತ್ವ ಎಂದು ತೋರಿಸಲಾಗುತ್ತದೆ; ಆದರೆ ಅವರು ನಿಜವಾಗಿ ಹೇಗೆ ವರ್ತಿಸುತ್ತಾರೆ ಎಂಬುದು ದೇಶ-ವಿದೇಶಗಳಲ್ಲಿನ ಘಟನೆಗಳಿಂದ ಗಮನಕ್ಕೆ ಬರುತ್ತದೆ !