Israel Hostages Death : ಇಸ್ರೇಲ್ ದಾಳಿಯಲ್ಲಿ ೭ ಒತ್ತೆಯಾಳುಗಳೂ ಮೃತ ! – ಹಮಾಸ್ ಹೇಳಿಕೆ

ಅಮೇರಿಕವು ಮೊದಲ ಬಾರಿಗೆ ಗಾಜಾಕ್ಕೆ ಸಹಾಯವೆಂದು ವಿಮಾನದಿಂದ ಆಹಾರವನ್ನು ಕೆಳಗೆ ಎಸೆಯಲಿದೆ !

ಗಾಜಾ / ವಾಷಿಂಗ್ಟನ್ – ಮಾರ್ಚ್ ೧ ರ ರಾತ್ರಿ ಇಸ್ರೇಲಿ ದಾಳಿಯಲ್ಲಿ ೭ ಒತ್ತೆಯಾಳುಗಳೂ ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಇಲ್ಲಿಯವರೆಗೆ ೭೦ ಕ್ಕೂ ಹೆಚ್ಚು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. 7 ಅಕ್ಟೋಬರ್ 2023 ರಂದು, ಹಮಾಸ್ ಭಯೋತ್ಪಾದಕರು ಗಾಜಾದಲ್ಲಿ ಅಂದಾಜು 253 ಒತ್ತೆಯಾಳುಗಳನ್ನು ಇಟ್ಟಿದ್ದರು. ನವೆಂಬರ್ 24 ಮತ್ತು ಡಿಸೆಂಬರ್ 1 ರ ನಡುವಿನ ಕದನ ವಿರಾಮದ ಸಮಯದಲ್ಲಿ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಉಳಿದ ಒತ್ತೆಯಾಳುಗಳು ಇನ್ನೂ ಹಮಾಸ್ ವಶದಲ್ಲಿದ್ದಾರೆ

ಆಹಾರ ಪೊಟ್ಟಣ ಸಂಗ್ರಹಿಸಲು ಹೋಗಿದ್ದ ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ, ೧೧೨ ಸಾವು !

ಮಾರ್ಚ್ ೧ ರಂದು, ಆಹಾರ ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಹೋಗಿದ್ದ ಪ್ಯಾಲೆಸ್ಟೀನಿಯರ ಮೇಲೆ ಇಸ್ರೇಲಿ ಸೇನೆಯು ಗುಂಡಿನ ದಾಳಿ ನಡೆಸಿತು ಎಂದು ‘ರೈಟರ್ಸ್’ ವರದಿ ಮಾಡಿದೆ. ಇದರಲ್ಲಿ 112 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದರೆ ಹಾಗೂ 760 ಜನರು ಗಾಯಗೊಂಡಿದ್ದಾರೆ. ಅಲ್ ನಬುಲ್ಸಿ ನಗರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ, ಅಮೇರಿಕಾವು ವಿಮಾನದ ಮೂಲಕ ಆಹಾರ ಪ್ಯಾಕೆಟ್‌ಗಳನ್ನು ಹಾಕಲು ನಿರ್ಧರಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾದ ನಂತರ ಅಮೆರಿಕಾ ಮೊದಲ ಬಾರಿಗೆ ಗಾಜಾಕ್ಕೆ ನೆರವು ನೀಡಿದೆ.

ಗಾಜಾದಲ್ಲಿ ಹಸಿವಿನ ಅಂಚಿನಲ್ಲಿ ೨೨ ಲಕ್ಷ ಜನರು ! – ವಿಶ್ವಸಂಸ್ಥೆಯ ದಾವೆ

ಆಹಾರವನ್ನು ಪಡೆಯಲು ಸಮುದ್ರದತ್ತ ಧಾವಿಸಿದ ಪ್ಯಾಲಿಸ್ಟೈನಿಯರು

ಕೆಲವು ದಿನಗಳ ಹಿಂದೆ, ಜೋರ್ಡಾನ್ ದಕ್ಷಿಣ ಗಾಜಾಗೆ ವಿಮಾನದಿಂದ ನೆರವನ್ನು ನೀಡಿದೆ; ಆದರೆ ಆ ಪ್ಯಾಕೆಟ್‌ಗಳು ಸಮುದ್ರದಲ್ಲಿ ಬಿದ್ದಿವೆ. ಪ್ಯಾಲೆಸ್ಟೈನ್ ಜನರು ಅದನ್ನು ಎತ್ತಿಕೊಳ್ಳಲು ಸಮುದ್ರಕ್ಕೆ ಓಡಿದರು. ಕೆಲವರು ದೋಣಿಗಳಿಂದ ಆಹಾರವನ್ನು ಸಾಗಿಸುತ್ತಿರುವುದು ಕಂಡುಬಂದಿತು. ವಿಶ್ವಸಂಸ್ಥೆಯ ಪ್ರಕಾರ, ಗಾಜಾದಲ್ಲಿ ೨೨ ಲಕ್ಷ ಜನರು ಹಸಿವಿನ ಅಂಚಿನಲ್ಲಿದ್ದಾರೆ. ಒಂದು ತಿಂಗಳ ಕಾಲ ಅಲ್ಲಿನ ಜನರ ಹಸಿವು ನೀಗಿಸುವಷ್ಟು ಸರಕುಗಳನ್ನು ವ್ಯವಸ್ಥೆ ಮಾಡುತ್ತಿರುವುದಾಗಿ ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ.