ಲಕ್ಷ್ಮಣಪುರಿ (ಉತ್ತರ ಪ್ರದೇಶ)- ಇಲ್ಲಿಯ ‘ಟೀಲೇವಾಲಿ ಮಸೀದಿ’ ಪ್ರಕರಣದಲ್ಲಿ ಹಿಂದೂಗಳ ವಾದವನ್ನು ಕೇಳಲಾಗುವುದು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿಯ ಗೋಮತಿ ನದಿಯ ಎಡದಂಡೆಯಲ್ಲಿ ‘ಟೀಲೇವಾಲಿ ಮಸೀದಿ’ ಇದೆ. ಹಿಂದೂಗಳು ಇದನ್ನು ‘ಲಕ್ಷ್ಮಣ ಟೀಲಾ’ ಆಗಿದೆಯೆಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ. ಇದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮುಸಲ್ಮಾನರ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ, ಹಿಂದೂಗಳ ವಾದವನ್ನು ಪುರಸ್ಕರಿಸಿದೆ. ಈಗ ಈ ಪ್ರಕರಣದ ವಿಚಾರಣೆ ಕಿರಿಯ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಪ್ರಕರಣವು 2013 ರಿಂದ ನ್ಯಾಯಾಲಯದಲ್ಲಿದೆ.

1. ಹಿಂದೂಗಳ ಪರವಾಗಿ ನ್ಯಾಯವಾದಿ ನಪೇಂದ್ರ ಪಾಂಡೆ ಮಾತನಾಡಿ, ಮುಸಲ್ಮಾನ ಪಕ್ಷದವರು ಯಾವುದನ್ನು `ಟೀಲೆವಾಲಿ ಮಸೀದಿ’ ಎಂದು ಕರೆಯುತ್ತಾರೆಯೋ, ಅದು ‘ಲಕ್ಷ್ಮಣನ ಟೇಕಡಿ’ ಆಗಿದೆಎಂದು ಹೇಳಿದರು. ಲಕ್ಷ್ಮಣಪುರಿಯನ್ನು (ಲಖನೌ) ಶ್ರೀರಾಮನ ಸಹೋದರ ಲಕ್ಷ್ಮಣನು ನಿರ್ಮಿಸಿದ್ದನು. ಗೋಮತಿ ನದಿಯ ದಡದಲ್ಲಿ ಒಂದು ಬೆಟ್ಟವಿತ್ತು. ಇದನ್ನು `ಲಕ್ಷ್ಮಣ ಟೀಲಾ’ ಎಂದು ಹೇಳಲಾಗುತ್ತಿತ್ತು. ಔರಂಗಜೇಬನ ಕಾಲದಲ್ಲಿ ಟೆಕಡಿಯನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಆ ಸ್ಥಳದಲ್ಲಿ ನಾವು ಮೊದಲಿನಿಂದಲೂ ಪೂಜೆ ಮಾಡುತ್ತಿದ್ದೆವು.2001 ರಲ್ಲಿ ಇಲ್ಲಿ ಗಲಭೆ ನಡೆಯಿತು ಮತ್ತು ನಮ್ಮ ಟೀಲೇಶ್ವರ ಮಹಾದೇವ ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು. ಶೇಷನಾಗೇಶ ಪಾತಾಳ ಬಾವಿಯನ್ನು ಕೆಡವಲಾಯಿತು.ನಮಗೆ ಪೂಜೆ ಮಾಡುವುದರಿಂದ ಏಕೆ ತಡೆಯಲಾಗುತ್ತಿದೆ? ನಾವು ಅಲ್ಲಿ ಪೂಜೆ ಮಾಡಲು ಹೋದಾಗ, ಮುಸಲ್ಮಾನರು ಅಸಭ್ಯವಾಗಿ ವರ್ತಿಸಿದರು. ಈ ವಿಷಯದಲ್ಲಿ ಮುಸಲ್ಮಾನರು ನ್ಯಾಯಾಲಯದಲ್ಲಿ, ಈ ಪ್ರಕರಣ ಕಾಯಂ ಆಗಿ ಮುಂದುವರಿಸುವುದು ಯೋಗ್ಯವಲ್ಲವೆಂದು ಹೇಳಿದ್ದಾರೆ. ಅದರ ಕಾರಣ ಸ್ಪಷ್ಟವಾಗಿಲ್ಲ. ಇದಕ್ಕೆ ನ್ಯಾಯಾಲಯವು ಮುಸಲ್ಮಾನರ ವಾದವನ್ನು ತಳ್ಳಿ, ಹಿಂದೂಗಳ ಪಕ್ಷವನ್ನು ಆಲಿಸುವುದು ಯೋಗ್ಯವಿದೆಯೆಂದು ತೀರ್ಪು ನೀಡಿದೆ.

2. ಟೀಲೆವಾಲಿ ಮಶೀದಿಯ ಮೌಲಾನಾ ಫಜಲುಲ ಮನ್ನಾನ ಮಾತನಾಡಿ, ಈ ಮಶೀದಿ ವಿಶ್ವವಿಖ್ಯಾತವಾಗಿದೆ. ಹಿಂದೂಗಳು ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದಾರೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು. ಈ ಜನರನ ನಡುವೆ ಘರ್ಷಣೆಯನ್ನು ನಿರ್ಮಾಣ ಮಾಡುವುದು. ನಾನು ಈ ವಿಷಯವನ್ನು ನಿರಾಕರಿಸುತ್ತೇನೆ. ಒಂದು ವೇಳೆ ಲಕ್ಷ್ಮಣ ಕಾ ಟೀಲಾ ಧ್ವಂಸಗೊಳಿಸಿ ಮಶೀದಿಯನ್ನು ನಿರ್ಮಿಸಲಾಗಿದ್ದರೆ, ನೀವು ಆಗ ಎಲ್ಲಿದ್ದೀರಿ? ಎಂದು ಅವರು ಹಿಂದೂಗಳನ್ನು ಪ್ರಶ್ನಿಸಿದ್ದಾರೆ.

3. ಈ ಪ್ರಕರಣ 2013ರಿಂದ ನ್ಯಾಯಾಲಯದಲ್ಲಿದೆ. ಪೂ.(ನ್ಯಾಯವಾದಿ) ಹರಿಶಂಕರ ಜೈನ ಅವರು ಲಕ್ಷ್ಮಣಪುರಿ ನ್ಯಾಯಾಲಯದಲ್ಲಿ ಈ ವಿಷಯದಲ್ಲಿ ಮೊದಲ ಅರ್ಜಿ ದಾಖಲಿಸಿದ್ದರು. ಈ ಸಂಪೂರ್ಣ ಪ್ರದೇಶ ಶಿವಮಂದಿರದ್ದಾಗಿದ್ದು, ಮಶೀದಿಯನ್ನು ತೆಗೆದು, ಈ ಪ್ರದೇಶದಲ್ಲಿ ಹಿಂದೂಗಳ ವಶಕ್ಕೆ ನೀಡುವ ಬೇಡಿಕೆಯನ್ನು ಸಲ್ಲಿಸಲಾಗಿದೆ. ತದನಂತರ 2018 ರಲ್ಲಿ ಮಶೀದಿಯ ಆವರಣದಲ್ಲಿ ಲಕ್ಷ್ಮಣನ ಮೂರ್ತಿ ಸ್ಥಾಪಿಸಿರುವ ಬಗ್ಗೆ ಘರ್ಷಣೆ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಭಾಜಪ ಸರಕಾರ ಬಂದ ನಂತರ ಭಾಜಪ ನಗರಸೇವಕರಾದ ರಜನೀಶ ಗುಪ್ತಾ ಮತ್ತು ರಾಮಕೃಷ್ಣ ಯಾದವ ಇವರು ಲಖನೌ ಮಹಾನಗರಪಾಲಿಕೆಗೆ ಮಶೀದಿಯ ಹತ್ತಿರ ಲಕ್ಷ್ಮಣನ 151 ಅಡಿ ಎತ್ತರದ ಲಕ್ಷ್ಮಣನ ಮೂರ್ತಿಯನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದರು; ಆದರೆ ಮುಸಲ್ಮಾನರ ಪ್ರತಿಭಟನೆಯ ನಂತರ ಪ್ರಕರಣ ಶಾಂತವಾಗಿತ್ತು.

ಸಂಪಾದಕೀಯ ನಿಲುವು

ಹಿಂದೂ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿರುವುದು ಇತಿಹಾಸವಾಗಿದೆ. ಪ್ರತಿಯೊಂದು ಸ್ಥಳದ ವಿಷಯದಲ್ಲಿ ಇಂತಹ ಬೇಡಿಕೆಯನ್ನು ಹಿಂದೂಗಳು ಮಾಡುವಂತೆ ಆಗಬಾರದು. ಇದಕ್ಕಾಗಿ ಈಗ ಕೇಂದ್ರ ಸರಕಾರವೇ ಮುಂದಡಿಯಿಡುವುದು ಆವಶ್ಯಕವಾಗಿದೆ.