ರಾಜ್ಯದ ವಿಧಾನಸಭೆಯಲ್ಲಿ ಪುನಃ ಹಿಂದೂ ದೇವಾಲಯಗಳ ಆದಾಯದ ಮೇಲೆ 10 ಪ್ರತಿಶತ ತೆರಿಗೆ ವಿಧಿಸುವ ಮಸೂದೆ ಅಂಗೀಕಾರ !

ರಾಜ್ಯಪಾಲರ ಒಪ್ಪಿಗೆ ಬಳಿಕ ಕಾನೂನು ರಚನೆ !

ಬೆಂಗಳೂರು – ರಾಜ್ಯದ ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆ, 2024’ ಅನ್ನು ವಿಧಾನಸಭೆಯಲ್ಲಿ ಮಂಡಿಸಿ ಮರು ಅಂಗೀಕರಿಸಲಾಯಿತು. ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ನಂತರ ಅದನ್ನು ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ತಿರಸ್ಕರಿಸಿ ಮರುಪರಿಶೀಲನೆಗೆ ವಿಧಾನ ಸಭೆಗೆ ಕಳುಹಿಸಲಾಗಿತ್ತು. ಆ ಬಳಿಕ ಮತ್ತೆ ವಿಧಾನ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಈಗ ವಿಧೇಯಕವನ್ನು ನೇರವಾಗಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುವುದು. ರಾಜ್ಯಪಾಲರ ಸಹಿ ನಂತರ ಕಾನೂನು ಆಗಲಿದೆ.

ಈ ಮಸೂದೆಯ ಪ್ರಕಾರ ವಾರ್ಷಿಕ 5 ಲಕ್ಷದಿಂದ 10 ಲಕ್ಷದವರೆಗೆ ಆದಾಯವಿರುವ ದೇವಸ್ಥಾನಗಳು ತಮ್ಮ ನಿವ್ವಳ ಆದಾಯದ ಶೇ 5ರಷ್ಟು ಹಣವನ್ನು ನೀಡಬೇಕಾಗುತ್ತದೆ. 10 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ದೇವಾಲಯಗಳು 10 ಪ್ರತಿಶತ ಪಾಲನ್ನು ಪಾವತಿಸಬೇಕಾಗುತ್ತದೆ.