‘ಭಾರತೀಯ ಏಜೆಂಟ್ ಸಿಖ್ಖರನ್ನು ಗುರಿ ಮಾಡುತ್ತಿದ್ದಾರೆ (ಅಂತೆ) ! – ಬ್ರಿಟನ್ ನ ಮಹಿಳಾ ಸಿಖ್ ಸಂಸದೆ ಪ್ರೀತ ಕೌರ ಗಿಲ್

ಬ್ರಿಟನ್ನಿನ ಸಂಸತ್ತಿನಲ್ಲಿ ಮಹಿಳಾ ಸಿಖ್ ಸಂಸದೆ ಪ್ರೀತ ಕೌರ ಗಿಲ ಇವರ ಆರೋಪ !

ಲಂಡನ (ಬ್ರಿಟನ) – ಭಾರತೀಯ ಏಜೆಂಟ್ ಬ್ರಿಟನ್ ನಲ್ಲಿ ವಾಸಿಸುವ ಸಿಖ್ಖರನ್ನು ಗುರಿ ಮಾಡುತಿದ್ದಾರೆ ಎಂದು ಬ್ರಿಟನ್ ನ ಮಹಿಳಾ ಸಿಖ ಸಂಸದೆ ಪ್ರೀತ ಕೌರ ಗಿಲ್ ಇವರು ಬ್ರಿಟಿಷ್ ಸಂಸತ್ತಿನಲ್ಲಿ ಕನಿಷ್ಠ ಸಭಾಗೃಹದಲ್ಲಿ (ಹೌಸ್ ಆಫ್ ಕಾಮನ್ಸ್) ಆರೋಪಿಸಿದರು. ಪ್ರೀತ ಕೌರ ಗಿಲ್ ಇವರು ಬ್ರಿಟನ್ ನ ವಿರೋಧಿ ಪಕ್ಷದ ಲೇಬರ್ ಪಾರ್ಟಿಯ ಸಂಸದೆ ಆಗಿದ್ದಾರೆ .

(ಸೌಜನ್ಯ – World News)

‘ಸಿಖ್ಕರ ಭದ್ರತೆಗಾಗಿ ಸರಕಾರ ಏನು ಕ್ರಮ ಕೈಗೊಳ್ಳುತ್ತಿದೆ ?’, (ಅಂತೆ) – ಪ್ರೀತ ಕೌರ ಗಿಲ್

ಪ್ರೀತ ಕೌರ ಗಿಲ್ ಇವರು, ಇತ್ತೀಚಿಗೆ ಕೆಲವು ತಿಂಗಳಲ್ಲಿ ‘ಫೈವ್ ಐಜ್’ ದೇಶಗಳು (ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲ್ಯಾಂಡ್, ಅಮೇರಿಕಾ ಮತ್ತು ಬ್ರಿಟನ್ ಇವರ ಬೇಹುಗಾರಿಕೆ ಮೈತ್ರಿ) ಬ್ರಿಟನ್ ನಲ್ಲಿಯ ಸಿಖ್ ಕಾರ್ಯಕರ್ತರನ್ನು ಗುರಿ ಮಾಡುತ್ತಿರುವ ಭಾರತಕ್ಕೆ ಸಂಬಂಧ ಪಟ್ಟ ಏಜೆಂಟಗಳ ಕಾರ್ಯಾಚರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಲವು ಹತ್ಯೆಯ ಷಡ್ಯಂತ್ರ ವಿಫಲ ಗೊಳಿಸಿದ್ದಾರೆ. ಅಮೇರಿಕಾ ಮತ್ತು ಕೆನಡಾ ದೇಶಗಳು ಈ ರೀತಿಯ ಪ್ರಕರಣಗಳು ಬಹಿರಂಗಪಡಿಸಿದೆ. ಇಂತಹ ಘಟನೆಗಳಿಂದಾಗಿ ಅವರ ಪ್ರಜಾಪ್ರಭುತ್ವಕ್ಕೆ ಮತ್ತು ಸಾರ್ವಭೌಮತ್ವ ಮೌಲ್ಯಗಳಿಗೆ ಸವಾಲು ಆಗಿದೆ. ಬ್ರಿಟಿಷ್ ಸಿಖ್ಖರು ಈ ರೀತಿಯ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಾರ್ತೆಯನ್ನು ನೋಡಿದರೆ ಅವರ ಭದ್ರತೆಗಾಗಿ ಸರಕಾರ ಏನು ಕ್ರಮ ಕೈಗೊಂಡಿದೆ ? ಎಂದು ಗಿಲ ಇವರು ಪ್ರಶ್ನೆ ಕೇಳಿದರು.

ಬ್ರಿಟನ್ ಕೂಡಲೇ ಕ್ರಮ ಕೈಗೊಳ್ಳಲಿದೆ ! – ರಕ್ಷಣಾ ಸಚಿವ ಟಾಮ್ ತುರ್ಗೆಂಧತ

ಸಂಸದೆ ಪ್ರೀತ ಕೌರ ಇವರ ಪ್ರಶ್ನೆಗೆ ಉತ್ತರಿಸುವಾಗ ಬ್ರಿಟನ್‌ನ ರಕ್ಷಣಾ ಸಚಿವ ಟಾಮ್ ತುರ್ಗೆಂಧತ್ ಇವರು, ಯಾವುದೇ ವಿದೇಶಿ ನಾಗರಿಕರಿಂದ ಬ್ರಿಟಿಷ ನಾಗರಿಕನಿಗೆ ಅಪಾಯ ಇದ್ದರೆ ನಾವು ತಕ್ಷಣ ಕ್ರಮ ಕೈಗೊಳ್ಳುವೆವು. (ಬ್ರಿಟನ್ ಲಂಡನ್ ನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿರುವ ಖಲಿಸ್ತಾನಿಗಳ ಮೇಲೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ, ಹಾಗೂ ಅಲ್ಲಿಯ ಹಿಂದುಗಳ ಮೇಲೆ ಮತಾಂತರದಿಂದ ನಡೆಯುವ ದಾಳಿ ನಿತ್ಯದ ವಿಷಯವೇ ಆಗಿದೆ. ಆದ್ದರಿಂದ ರಕ್ಷಣಾ ಸಚಿವರ ಈ ಹೇಳಿಕೆಯ ಅರ್ಥವೇನು ? – ಸಂಪಾದಕರು) ಇತರ ಸಮುದಾಯದಂತೆ ಸಿಖ್ ಸಮುದಾಯಕ್ಕೆ ಬ್ರಿಟನ್ನಿನಲ್ಲಿ ಸುರಕ್ಷಿತ ಇರುವ ಅಧಿಕಾರವಿದೆ. ಬ್ರಿಟಿಷ ನಾಗರಿಕರ ಬಣ್ಣ, ಧರ್ಮ, ಶ್ರದ್ಧೆ ಅಥವಾ ರಾಜಕೀಯ ನಿಷ್ಠೆ ಏನೇ ಆಗಿರಲಿ, ಇದೆಲ್ಲವೂ ಸಮಾನವಾಗಿ ಇದೆ.

ಈ ಹಿಂದೆ ಕೆನಡಾ ಕೂಡ ತನ್ನ ದೇಶದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಮಾಡಿತ್ತು ಹಾಗೂ ಅಮೇರಿಕಾ ನಿಷೇಧ ಹೇರಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ನ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಗೆ ಕಥಿತ ಷಡ್ಯಂತ್ರದ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಹೊರಸಿತ್ತು. ಅದರ ನಂತರ ಈಗ ಬ್ರಿಟನ್ನಿನಲ್ಲಿ ಸಂಸದೆಯು ಈ ರೀತಿ ಆರೋಪಿಸಿದ್ದರೆ.

ಸಂಪಾದಕೀಯ ನಿಲುವು

ಕೆನಡಾ ಮತ್ತು ಅಮೆರಿಕಾ ಇವರು ಕೂಡ ಭಾರತದ ಮೇಲೆ ಈ ಹಿಂದೆ ಇದೇ ರೀತಿಯ ಆರೋಪ ಮಾಡಿದ್ದರು; ಆದರೆ ಇಬ್ಬರು ಯಾವುದೇ ಸಾಕ್ಷಿ ನೀಡಲಿಲ್ಲ, ಐದು ನಿಜ ಸ್ಥಿತಿಯಾಗಿದೆ. ಖಲಿಸ್ತಾನದ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತೇವೆ, ಇದನ್ನು ಭಾರತವು ತಿಳಿದುಕೊಂಡು ಇಂತಹವರಿಗೆ ತಕ್ಕ ಪ್ರತ್ಯತ್ತರ ನೀಡಲು ಪ್ರಯತ್ನಿಸಬೇಕು !

ಭಾರತದ ಮೇಲೆ ಆರೋಪ ಮಾಡಿರುವ ಗಿಲ್ ಇವರಂತಹ ಜನರು ಖಲಿಸ್ತಾನಿಗಳು ಮಾಡುತ್ತಿರುವ ಭಾರತ ವಿರೋಧಿ ಕೃತ್ಯದ ಬಗ್ಗೆ ಚಕಾರ ಶಬ್ದವು ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !