ಸೌದಿ ಅರೇಬಿಯಾದ ಮಸೀದಿಯಲ್ಲಿ ಇಪ್ತಾರ ಆಯೋಜನೆಯ ಮೇಲೆ ನಿಷೇಧ ಹಾಗೂ ಆಜಾನ್ ಧ್ವನಿಯ ಮೇಲೆ ಕೂಡ ನಿಯಂತ್ರಣ !

ರಂಜಾನ್ ಗೆ ಸಂಬಂಧಿತ ನಿಯಮದಿಂದ ಕಟ್ಟರವಾದಿಗಳಲ್ಲಿ ಅಸಮಾಧಾನ

ರಿಯಾಧ (ಸೌದಿ ಅರೇಬಿಯಾ) – ಇಸ್ಲಾಮಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ರಮಜಾನ ತಿಂಗಳಲ್ಲಿ ಮಸೀದಿಯಲ್ಲಿ ಇಪ್ತಾರ ಪಾರ್ಟಿ ನಿಷೇಧಿಸಿದೆ. ಸೌದಿ ಅರೇಬಿಯಾ ಸರಕಾರ, ಮಸೀದಿಯಲ್ಲಿ ಯಾವುದೇ ಇಮಾಮ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವರು) ಇಪ್ತಾರ ಆಯೋಜನೆ ಮಾಡುವುದಿಲ್ಲ, ಇದರ ಜೊತೆಗೆ ಇಪ್ತಾರಿಗಾಗಿ ನಿಧಿ ಸಂಗ್ರಹ ಕೂಡ ನಿಷೇಧಿಸಿದೆ. ಹೊಸ ನಿಯಮಗಳ ಪ್ರಕಾರ ರಂಜಾನ ಕಾಲದಲ್ಲಿ ಮಸೀದಿಯಿಂದ ಧ್ವನಿವರ್ಧಕದ ಮೂಲಕ ನೀಡುವ ಅಜಾನ್ ಧ್ವನಿಯ ಮೇಲೆ ಕೂಡ ನಿಯಂತ್ರಣ ಹೇರಿದೆ. ಮಸೀದಿಯಲ್ಲಿ ಅಳವಡಿಸಿರುವ ಕ್ಯಾಮರಾದ ಮೂಲಕ ಇಲ್ಲಿಯ ಪ್ರಾರ್ಥನೆಯ ನೇರ ಪ್ರಸಾರ ಮಾಡಬಾರದು, ಎಂದೂ ಸಹ ಸರಕಾರದ ಇಸ್ಲಾಮಿ ವ್ಯವಹಾರ ಸಚಿವಾಲಯದಿಂದ ಆದೇಶ ನೀಡಿದೆ. ಭಿಕ್ಷುಕರಿಗೆ ಮಸೀದಿಯಲ್ಲಿ ಭಿಕ್ಷೆ ಬೇಡುವುದರಿಂದ ತಡೆಯಬೇಕು ಹೀಗೋ ಕೂಡ ಸಚಿವಾಲಯ ಹೇಳಿದೆ. ಬರುವ ಮಾರ್ಚ್ ೧೧ ರಿಂದ ರಂಜಾನ್ ತಿಂಗಳ ಆರಂಭವಾಗುತ್ತದೆ. ಈ ನಿರ್ಣಯದಿಂದ ಸೌದಿಯಲ್ಲಿನ ಕಟ್ಟರವಾದಿಗಳು ಅಸಮಾಧಾನಗೊಂಡಿದ್ದಾರೆ.

ಮಸೀದಿ ಅಸ್ವಚ್ಚ ಆಗುತಿದ್ದರಿಂದ ನಿರ್ಣಯ

ಸೌದಿ ಅರೇಬಿಯಾದ ಇಸ್ಲಾಮಿ ವ್ಯವಹಾರ ಸಚಿವಾಲಯವು ಈ ಆದೇಶ ಜಾರಿ ಮಾಡುತ್ತಾ ಮುಂಬರುವ ರಂಜಾನ್ ತಿಂಗಳ ಬಗ್ಗೆ ಕೆಲವು ಸೂಚನೆಗಳು ಪ್ರಸಾರ ಮಾಡಿದೆ. ಸೌದಿ ಅರೇಬಿಯಾದಲ್ಲಿನ ಎಲ್ಲಾ ಮಸೀದಿ ಈ ಸಚಿವಾಲಯದ ಅಡಿಯಲ್ಲಿದೆ. ರೋಜಾ ಮುಗಿದ ನಂತರ ಸಂಜೆ ಆಯೋಜಿಸುವ ಇಪ್ತಾರನಿಂದ ಮಸೀದಿಯ ಸ್ವಚ್ಛತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾದಲ್ಲಿ ಆಧುನಿಕತೆಗೆ ಆದ್ಯತೆ

ಇಸ್ಲಾಮಿನ ಆರಂಭ ಸೌದಿ ಅರೇಬಿಯಾದಲ್ಲಿ ಆಗಿದೆ; ಆದರೆ ಇತ್ತೀಚಿನ ಕಾಲದಲ್ಲಿ ಇಲ್ಲಿ ಇಸ್ಲಾಮಿ ನಿಯಮ ಸಡಿಲು ಮಾಡಿದ್ದಾರೆ. ಇತ್ತೀಚಿಗೆ ಪ್ರಧಾನಮಂತ್ರಿ ಮತ್ತು ಸೌದಿ ಅರೇಬಿಯಾದ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ಇವರು ಆಧುನಿಕ ವಿಚಾರಸರಣಿಗೆ ತೊಂದರೆ ಆಗುವ ಅನೇಕ ನಿಯಮಗಳು ರದ್ದು ಪಡಿಸಿದೆ. ಇದರಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡುವಂತಹ ಅನೇಕ ನಿರ್ಣಯದ ಸಮಾವೇಶವಿದೆ.

ಸಂಪಾದಕೀಯ ನಿಲುವು

ಇಸ್ಲಾಂನ ತವರು ಮನೆಯಾಗಿರುವ ಸೌದಿ ಅರೇಬಿಯಾದ ಮಸೀದಿಯ ಸಂದರ್ಭದಲ್ಲಿ ಇಂತಹ ಕಠೋರ ನಿರ್ಣಯ ತೆಗೆದುಕೊಳ್ಳಬಹುದಾದರೆ ‘ಜಾತ್ಯತೀತ’ ಭಾರತದಲ್ಲಿ ರಾಷ್ಟ್ರ ಘಾತಕ ಚಟುವಟಿಕೆ ನಡೆಯುತ್ತಿರುವ ಬಹಳಷ್ಟು ಮಸೀದಿಗಳ ಮೇಲೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಡಚಣೆ ಬರಬಾರದು !