ಮಂಗಳೂರು ಮತ್ತು ಉಜಿರೆಯಲ್ಲಿ ಕನ್ನಡ ವಾರಪತ್ರಿಕೆ ‘ಸನಾತನ ಪ್ರಭಾತ’ ಬೆಳ್ಳಿ ಮಹೋತ್ಸವದ ಆಚರಣೆ!
ಮಂಗಳೂರು – ಹಿಂದೂಗಳಲ್ಲಿ ಮಹಾರಾಣಾ ಪ್ರತಾಪನಂತಹ ಶೌರ್ಯ, ರಾಜ ವಿಕ್ರಮಾದಿತ್ಯನಂತೆ ಧೈರ್ಯ ಮತ್ತು ಹಿಂದುತ್ವವನ್ನು ಬಿಂಬಿಸುವ ಕಾರ್ಯವನ್ನು ‘ಸನಾತನ ಪ್ರಭಾತ’ ಮಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸಂಸ್ಕಾರವನ್ನು ಮಾಡುವ ಕಾರ್ಯವನ್ನು ಸನಾತನ ಪ್ರಭಾತ ಮಾಡುತ್ತಿದೆಯೆಂದು ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಯೋಗಾಶ್ರಮದ ಪ.ಪೂ. ದೇವಬಾಬಾ ಗೌರವದಿಂದ ಉದ್ಗರಿಸಿದರು. ಕನ್ನಡ ವಾರಪತ್ರಿಕೆ ‘ಸನಾತನ ಪ್ರಭಾತ’ದ ಬೆಳ್ಳಿ ಮಹೋತ್ಸವದ ನಿಮಿತ್ತ ಮಂಗಳೂರಿನ ಕೂಟಕ್ಕಲ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಈ ಸಮಯದಲ್ಲಿ ‘ಸನಾತನ ಪ್ರಭಾತ’ವು ಹಿತಚಿಂತಕರು ಹಾಗೂ ಉದ್ಯಮಿ ಶ್ರೀ. ಮಧುಸೂದನ ಅಯಾರ( ಅಯ್ಯರ?), ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸೌ. ಮಂಜುಳಾ ಗೌಡ, ಹಾಗೆಯೇ `ಸನಾತನ ಪ್ರಭಾತ’ದ ವಿಶೇಷ ಪ್ರತಿನಿಧಿ ಶ್ರೀ. ಪ್ರಶಾಂತ ಹರಿಹರ ಅವರೂ ಕೂಡ ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು. ಗಣ್ಯರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸನಾತನ ಪ್ರಭಾತದ ಓದುಗರು, ಜಾಹೀರಾತುದಾರರು, ಹಿತೈಷಿಗಳು ಮತ್ತು ಧಾರ್ಮಿಕ ಪ್ರೇಮಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಕೆಲವು ಓದುಗರು ಮತ್ತು ವಿತರಕರನ್ನು ಸತ್ಕರಿಸಲಾಯಿತು ಸನಾತನ ಪ್ರಭಾತ ನಿಯತಕಾಲಿಕ ಸಮೂಹದ ಸಂಸ್ಥಾಪಕ ಸಂಪಾದಕ ಸಚ್ಚಿದಾನಂದ ಪರಬ್ರಹ್ಮ ಡಾ.ಅಠವಲೆಯವರ ಸಂದೇಶವನ್ನು ಶ್ರೀಮತಿ ಅಶ್ವಿನಿ ಪ್ರಭು ಓದಿದರು. ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ನೂರಾರು ಜನರು ಇದರ ಪ್ರಯೋಜನ ಪಡೆದರು.
ಹಿಂದೂಗಳಿಗೆ ತಾಯಿ-ತಂದೆಯಂತೆ ಮಾರ್ಗದರ್ಶನ ಮಾಡುವ ಸುದ್ದಿಪತ್ರಿಕೆ! – ಶ್ರೀ. ಮಧುಸೂದನ ಅಯಾರ್
ಹಿಂದೂಗಳಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ಇರುವ ಸಂಶಯಗಳನ್ನು ನಿವಾರಣೆ ಮಾಡುವ ಕಾರ್ಯವನ್ನು ಸನಾತನ ಪ್ರಭಾತ ಮಾಡುತ್ತಿದೆ.ಹಿಂದೂಗಳಿಗೆ ತಾಯಿ-ತಂದೆಯಂತೆ ಮಾರ್ಗದರ್ಶನ ಮಾಡುತ್ತಿದೆ.
‘ಸನಾತನ ಪ್ರಭಾತ’ ಒಂದು ಸತ್ಯನಿಷ್ಠ ದಿನಪತ್ರಿಕೆ! – ಸೌ. ಮಂಜುಳಾ ಗೌಡ
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ತತ್ವನಿಷ್ಠತೆಯೊಂದಿಗೆ ಕಾರ್ಯ ಮಾಡುವ ದಿನಪತ್ರಿಕೆಯೆಂದರೆ ‘ಸನಾತನ ಪ್ರಭಾತ’! ಗೋಹತ್ಯೆ, ಧಾರ್ಮಿಕ ಮತಾಂತರ, ಹಲಾಲ ಜಿಹಾದ ಮುಂತಾದ ಹಿಂದೂಗಳ ಮೇಲಾಗುವ ಅನೇಕ ಆಘಾತಗಳ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಸನಾತನ ಪ್ರಭಾತ ನಿಯಮಿತವಾಗಿ ಮಾಡುತ್ತದೆ.
‘ಹಿಂದೂ ರಾಷ್ಟ್ರ’ ಈ ಶಬ್ದವನ್ನು ಸಮಾಜದಲ್ಲಿ ನಿಜವಾದ ಅರ್ಥದಿಂದ ತಿಳಿಸಿ ಹೇಳುವ ನಿಯಕಾಲಿಕೆ ‘ಸನಾತನ ಪ್ರಭಾತ’ ! – ಪ್ರಶಾಂತ ಹರಿಹರ
ಇಂದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದಿನಿಂದ, ಸರಿಸುಮಾರು 25 ವರ್ಷಗಳ ಹಿಂದೆ, ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಉಚ್ಚರಿಸುವುದು ಅಘೋಷಿತ ಅಪರಾಧ ಎಂದು ತಿಳಿಯಲಾಗುತ್ತಿತ್ತು. ಅಂತಹ ಸಮಯದಲ್ಲಿ, ‘ಈಶ್ವರೀ ರಾಜ್ಯ’, ‘ಹಿಂದೂ ರಾಷ್ಟ್ರ’ ಈ ಶಬ್ದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಿಂದ ತಿಳಿಸಿ ಹೇಳಿರುವ ದಿನಪತ್ರಿಕೆಯೆಂದರೆ ಸನಾತನ ಪ್ರಭಾತವಾಗಿದೆ. ಕೇವಲ ಸುದ್ದಿಯಷ್ಟೇ ಅಲ್ಲ, ಬದಲಾಗಿ ಪ್ರತಿಯೊಂದು ಸುದ್ದಿಯ ಮೇಲೆ ದೃಷ್ಟಿಕೋನವನ್ನು ನೀಡುವುದು, ಸನಾತನ ಪ್ರಭಾತದ ವೈಶಿಷ್ಟ್ಯವಾಗಿದೆ.
ಉಜಿರೆಯಲ್ಲಿಯೂ ವರ್ಧಂತ್ಯುತ್ಸವದ ಆಚರಣೆ !
ಉಜಿರೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ಫೆಬ್ರುವರಿ.25ರಂದು ಕನ್ನಡ ವಾರಪತ್ರಿಕೆ ಸನಾತನ ಪ್ರಭಾತದ ವರ್ಧಂತ್ಯುತ್ಸವವನ್ನು ಆಚರಿಸಲಾಯಿತು.. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸನಾತನ ಪ್ರಭಾತದ ಹಿತಚಿಂತಕರಾದ ಸನಾತನ ಸಂಸ್ಥೆಯ ಶ್ರೀ ಆನಂದಗೌಡ ಮತ್ತು ಸನಾತನ ಪ್ರಭಾತದ ಪ್ರತಿನಿಧಿ ಸೌ. ಶಾರದಾ ಭಂಡಾರಕರ ಅವರು ಆ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದರು. ಡಾ.ರವಿಯವರು ಮಾರ್ಗದರ್ಶನದಲ್ಲಿ ಮಾತನಾಡಿ, ಇತರೆ ಸುದ್ದಿಪತ್ರಿಕೆಗಳಿಗೂ ಸನಾತನ ಪ್ರಭಾತಕ್ಕೂ ಬಹಳ ವ್ಯತ್ಯಾಸಗಳಿವೆ. ಸನಾತನ ಪ್ರಭಾತವು ‘ಜ್ಞಾನದ ಸಾಗರ’ವಾಗಿದೆ. ಈ ಮೂಲಕ ರಾಷ್ಟ್ರ ಮತ್ತು ಧರ್ಮದ ವಿಚಾರಸಂಪತ್ತನ್ನು ಪ್ರಸಾರ ಮಾಡುತ್ತಿದೆಯೆಂದು ಹೇಳಿದರು.