ತಮಿಳುನಾಡಿನ ಧಾರ್ಮಿಕದತ್ತಿ ಇಲಾಖೆಯಿಂದ ದೇವಸ್ಥಾನದ ೫ ಸಾವಿರದ ೭೦೦ ಕೋಟಿ ರೂಪಾಯಿ ಆಸ್ತಿಯನ್ನು ಅತಿಕ್ರಮಣಕರ್ತರಿಂದ ಹಿಂಪಡೆ !

ಚೆನ್ನೈ – ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಯು ೨೦೨೧ ರಿಂದ ೫ ಸಾವಿರದ ೭೦೦ ಕೋಟಿ ರೂಪಾಯಿ ಮೌಲ್ಯದ ವಿವಿಧ ದೇವಸ್ಥಾನದ ಭೂಮಿ, ಭೂ ಖಂಡ ಮತ್ತು ಕಟ್ಟಡದ ಅತಿಕ್ರಮಣ ಮಾಡಿರುವವರಿಂದ ಹಿಂಪಡೆದಿದೆ. ತಮಿಳುನಾಡು ಸರಕಾರ ಪ್ರಸಿದ್ಧಿಗೊಳಿಸಿರುವ ಮಾಹಿತಿಯ ಪ್ರಕಾರ ರಾಜ್ಯಾದ್ಯಂತದ ೬ ಸಾವಿರದ ೭೧ ಎಕರೆ ಭೂಮಿ ಅತಿಕ್ರಮಣಕಾರರಿಂದ ಹಿಂಪಡೆದಿದೆ ಮತ್ತು ಮೂಲ ಒಡೆತನದ ದೇವಸ್ಥಾನಗಳಿಗೆ ಒಪ್ಪಿಸಿದೆ.

ದೇವಸ್ಥಾನದ ಭೂಮಿಯ ‘ಡಿಜಿಟಲ್ ಡೆಟಾ’ ತಯಾರಿಸುವರು !

ಅತಿಕ್ರಮಣಕಾರರಿಂದ ಹಿಂಪಡೆದಿರುವ ಭೂಮಿ ಮತ್ತು ಆಸ್ತಿ ಅದರ ಸುತ್ತಲೂ ಬೇಲಿ ಹಾಕಲಾಗುವುದು ಮತ್ತು ದೇವಸ್ಥಾನದ ಮಾಲಿಕತ್ವದ ಫಲಕ ಹಾಕಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆಯ ಸಚಿವ ಪಿ.ಕೆ. ಶೇಖರಬಾಬು ಇವರು ಹೇಳಿದರು. ಶೇಖರಬಾಬು ಇವರು, ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ದೇವಸ್ಥಾನ ಅಧಿಕಾರದ ಒಟ್ಟು ೪ ಲಕ್ಷ ೭೮ ಸಾವಿರ ಎಕರೆ ಭೂಮಿಯಲ್ಲಿ ೧ ಲಕ್ಷ ೬೭ ಎಕರೆ ಭೂಮಿಯ ಡಿಜಿಟಲ್ ಭೂಮಿ ಸಂಸಾಧನ ಡೇಟಾಬೇಸ್ ತಯಾರಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ ವಿಸರ್ಜಿಸುವಂತೆ ಭಾಜಪದಿಂದ ಬೇಡಿಕೆ

೨೦೨೧ ರ ವಿಧಾನಸಭಾ ಚುನಾವಣೆಯ ಮೊದಲು ಈಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ ಇವರು ತಮಿಳುನಾಡಿನಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸಿ, ಈ ಅಭಿಯಾನವನ್ನು ಆರಂಭಿಸಿದ್ದರು. ಈಗ ಭಾಜಪದ ಪ್ರದೇಶಾಧ್ಯಕ್ಷ ಕೆ. ಅಣ್ಣಮಲೈ ಇವರು ಧಾರ್ಮಿಕ ದತ್ತಿ ಇಲಾಖೆ ರದ್ದು ಪಡಿಸುವ ಆಶ್ವಾಸನೆ ನೀಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಈ ಅಭಿಯಾನ ಕೂಡ ಇದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ರಾಜಕೀಯ ನಡೆಯಾಗಿದೆ. ದ್ರಮುಕ ಪಕ್ಷ ಇದು ‘ಹಿಂದೂವಿರೋಧಿ’ ಎಂದು ಆರೋಪವಿದೆ.

ಸಂಪಾದಕೀಯ ನಿಲುವು

ದೇವಸ್ಥಾನದ ಭೂಮಿ ಅತಿಕ್ರಮಣ ಆಗುವವರೆಗೆ ದ್ರಮುಕ ಸರಕಾರ ನಿದ್ರಿಸಿತ್ತೆ ?