|
ಜೈಪುರ (ರಾಜಸ್ಥಾನ) – ಹಿಂದೂ ವಿದ್ಯಾರ್ಥಿಗಳಿಗೆ ನಮಾಜಪಠಣ ಮಾಡುವಂತೆ ಒತ್ತಡ ಹೇರಿದ್ದಕ್ಕಾಗಿ, ಸರಕಾರಿ ಶಾಲೆಯ ಫಿರೋಜ ಖಾನ ಮತ್ತು ಮಿರ್ಜಾ ಮುಜಾಹಿದ ಈ ಇಬ್ಬರು ಶಿಕ್ಷಕರನ್ನು ರಾಜ್ಯದ ಶಿಕ್ಷಣ ಸಚಿವ ಮದನ್ ದಿಲಾವರ ಅವರು ಅಮಾನತುಗೊಳಿಸಿದ್ದಾರೆ. ಈ ಶಿಕ್ಷಕರು ನಿರ್ಬಂಧಿಸಿರುವ ಒಂದು ಸಂಘಟನೆಗೆ ಸಂಬಂಧಿಸಿರುವ ಆರೋಪವಿದೆ. ಈ ಘಟನೆ ಕೋಟಾ ಜಿಲ್ಲೆಯ ಖಜೂರಿ ಓಡಪೂರ ಗ್ರಾಮದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಶಿಕ್ಷಣ ಸಚಿವರಿಗೆ ಮನವಿ ನೀಡಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಈ ಪ್ರಕರಣದಲ್ಲಿ ಶಿಕ್ಷಕಿ ಶಬಾನಾ ಭಾಗಿಯಾಗಿದ್ದು, ಆಕೆಯ ವಿರುದ್ಧ ಕೂಡ ಕ್ರಮ ಕೈಗೊಳ್ಳಲಿರುವರು. ‘ನಮಾಜಪಠಣ ಮಾಡಲು ನಿರಾಕರಿಸಿದರೆ, ನಿಮ್ಮ ಭವಿಷ್ಯವನ್ನು’ ಎಂಬ ಬೆದರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಾಕಲಾಗುತ್ತಿತ್ತು.
ರಾಜಸ್ಥಾನದ ಶಾಲೆಗಳನ್ನು ನಾವು ಧಾರ್ಮಿಕ ಮತಾಂತರದ ತಾಣವಾಗಲು ಬಿಡುವುದಿಲ್ಲ! – ಶಿಕ್ಷಣ ಸಚಿವರು
ಶಿಕ್ಷಣ ಸಚಿವ ಮದನ ದಿಲಾವರ ಮಾತನಾಡಿ, ಶಾಲೆಯಲ್ಲಿ ಧಾರ್ಮಿಕ ಮತಾಂತರ ಮಾಡುವುದು, ವಿದ್ಯಾರ್ಥಿಗಳ ಧರ್ಮ ಬದಲಾಯಿಸುವುದು, ಒತ್ತಾಯಪೂರ್ವಕವಾಗಿ ನಮಾಜಪಠಣ ಮಾಡಲು ಹೇಳುವುದು ಇಂತಹ ದೂರುಗಳು ಬಂದಿದ್ದವು. ಈ ಪ್ರಕರಣದಲ್ಲಿ 2 ಶಿಕ್ಷಕರನ್ನು ಅಮಾನತ್ತುಗೊಳಿಸಲಾಗಿದೆ. ಶಿಕ್ಷಕಿಯ ಮೇಲೆಯೂ ಕ್ರಮ ಕೈಕೊಳ್ಳಲಿದ್ದೇವೆ. ಈ ಮೂವರಿಗೂ ಬಿಕಾನೇರ ಪ್ರಧಾನ ಕಛೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಶಿಕ್ಷಣದ ಮಂದಿರಗಳು ಮಕ್ಕಳ ಭವಿಷ್ಯ ರೂಪಿಸುವ ನಿಜವಾದ ಕೇಂದ್ರಗಳಾಗಬೇಕು. ಅದು ಮತಾಂತರದ ಪ್ರಯೋಗಶಾಲೆಗಳಾಗಬಾರದು. ನಾವು ರಾಜಸ್ಥಾನದಲ್ಲಿರುವ ಶಾಲೆಗಳಿಗೆ ಮತಾಂತರದ ತಾಣವಾಗಲು ಬಿಡುವುದಿಲ್ಲ. ಶಿಕ್ಷಕರ ತನಿಖೆ ನಡೆಸಲಾಗುವುದು ಮತ್ತು ದೋಷಿಗಳೆಂದು ಕಂಡುಬಂದಲ್ಲಿ ಅವರನ್ನು ವಜಾಗೊಳಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದರು.
‘ಪೂಜೆ’ ಅಥವಾ ‘ನಮಾಜ’ ಹೆಸರಿನಲ್ಲಿ ಶಾಲೆಯನ್ನು ಮುಚ್ಚುವವರು ಕಾಯಂ ಆಗಿ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗುವುದು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮದನ ದಿಲಾವರ, ಮಾತನಾಡಿ, ‘ಪೂಜೆ’ ಅಥವಾ ‘ನಮಾಜ್’ ಹೆಸರಿನಡಿಯಲ್ಲಿ ಶಿಕ್ಷಕರು 2 ರಿಂದ 4 ಗಂಟೆಗಳ ಕಾಲ ಶಾಲೆಗಳನ್ನು ಮುಚ್ಚುತ್ತಾರೆ .ಇದನ್ನು ನಾನು ನೋಡಿದ್ದೇನೆ. ಇದರಿಂದ ಮಕ್ಕಳ ಶಿಕ್ಷಣದ ಹಾನಿಯಾಗುತ್ತದೆ. `ಪೂಜೆ’ ಅಥವಾ `ನಮಾಜ’ ಹೆಸರಿನಡಿಯಲ್ಲಿ ಶಾಲೆಯಿಂದ ನಾಪತ್ತೆಯಾದರೆ ಇಂತಹ ಶಿಕ್ಷಕರು ರಜೆ ಪಡೆಯಬೇಕು. ಒಂದು ವೇಳೆ ಸತತವಾಗಿ ಹೀಗೆಯೇ ಆಗುತ್ತಿದ್ದರೆ, ಅವರನ್ನು ಅಮಾನತ್ತುಗೊಳಿಸಲಾಗುವುದು. ಅದರ ನಂತರವೂ ಸುಧಾರಿಸದಿದ್ದರೆ, ಅವರ ಮೇಲೆ ನಿರ್ಣಯ ತೆಗೆದುಕೊಳ್ಳಲು ಸರಕಾರಕ್ಕೆ ಅಧಿಕಾರವಿದೆ. ಇಂತಹವರನ್ನು ಕಾಯಂ ಆಗಿ ಮನೆಗೆ ಕಳುಹಿಸಲಾಗುವುದು. ಅನೇಕ ಶಿಕ್ಷಕರು ಅನೇಕ ವರ್ಷಗಳಿಂದ ಶಾಲೆಗೆ ಕಲಿಸಲು ಬರುತ್ತಿಲ್ಲ. ನಾನು ಅವರಿಂದ ವೇತನದ ಸಂಪೂರ್ಣ ಮೊತ್ತವನ್ನು ಬಡ್ಡಿಯೊಂದಿಗೆ ವಸೂಲಿ ಮಾಡಿಕೊಳ್ಳುತ್ತೇನೆ. ಹಾಗೆಯೇ ಮಕ್ಕಳ ಅನುಭವಿಸಿದ ನಷ್ಟದ ಮೊತ್ತವನ್ನು ಮೌಲ್ಯಮಾಪನ ಮಾಡಿ ಸಂಪೂರ್ಣ ಹಣವನ್ನು ಲೆಕ್ಕ ಹಾಕಿ ವಸೂಲಿ ಮಾಡಲಾಗುವುದು. ಇದು ರಾಜಸ್ಥಾನದಲ್ಲಿ ಮೊದಲ ಬಾರಿಗೆ ನಡೆಯಲಿದೆ.
‘ಶಾಲೆಯ ಒಳಗೆ ಅಥವಾ ಹೊರಗೆ ಮಕ್ಕಳಿಗೆ ಕಿರುಕುಳ ನೀಡುವವರನ್ನು ಬಿಡಬಾರದೆಂದು ಸೂಚನೆ !
ಈಗ ಪಂಚಾಯಿತಿಯ ಕಟ್ಟಡ ನಿರ್ಮಾಣದಲ್ಲಿ ಗ್ರಾಮಾಭಿವೃದ್ಧಿ ಅಧಿಕಾರಿ ತಪ್ಪಿತಸ್ಥರಾದರೆ ಬಿಡಿಒ (ಬ್ಲಾಕ್ ಡೆವಲಪ್ ಮೆಂಟ್ ಆಫೀಸರ್) ಮೇಲೆಯೂ ಕ್ರಮ ಕೈಗೊಳ್ಳಲಾಗುವುದು. ಅನೇಕ ಅಧಿಕಾರಿಗಳು ಪ್ರಾಮಾಣಿಕರಾಗಿದ್ದರೂ, ಕೆಲವರು ಅಪ್ರಮಾಣಿಕರೂ ಆಗಿದ್ದಾರೆ. ಕೆಳಗಿನಿಂದ ಮೇಲಿನ ವರೆಗೆ `ಕಮಿಶನ’ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಕಾರ್ಯಗಳ ಗುಣಮಟ್ಟವು ಕೀಳಾಗಿರುತ್ತದೆ. ಇಂತಹ ಜನರ ಮೇಲೆಯೂ ಕ್ರಮ ಕೈಕೊಳ್ಳಲಾಗುವುದು. . – ಶಿಕ್ಷಣ ಸಚಿವ ಮದನ ದಿಲಾವರ
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಈಗ ಕಾಂಗ್ರೆಸ್ ಸರಕಾರ ಇಲ್ಲದ ಕಾರಣ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಗಮನಿಸಬೇಕಾಗಿದೆ. ಸರಕಾರವು ಇನ್ನು ಮುಂದೆ ಈ ರೀತಿ ಶಿಕ್ಷಕರ ನೇಮಕ ಮಾಡದಂತೆ ಗಮನಹರಿಸಬೇಕು. |