51 ವರ್ಷಗಳ ಬಳಿಕ ಮೊದಲ ಬಾರಿಗೆ, ಅಮೇರಿಕೆಯ ನೌಕೆ ಚಂದ್ರನ ಮೇಲೆ ಕಾಲೂರಿದೆ

‘ಇಂಟ್ರ್ಯುಟಿವ ಮಷಿನ್ಸ’ ಈ ಕಂಪನಿಯ ಕಾರ್ಯಾಚರಣೆ ಯಶಸ್ವಿ!

ವಾಷಿಂಗ್ಟನ (ಅಮೇರಿಕಾ) – ಕಳೆದ ವರ್ಷ ಆಗಸ್ಟನಲ್ಲಿ ಭಾರತದ ‘ಚಂದ್ರಯಾನ-3’ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆಯನ್ನು ಯಶಸ್ವಿಯಾಗಿ ಇಳಿಸಿರುವ ಅಮೇರಿಕಾ ಭಾರತದ ನಂತರ ಎರಡನೇ ದೇಶವಾಗಿದೆ. ಭಾರತೀಯ ಸಮಯದ ಪ್ರಕಾರ, ಫೆಬ್ರವರಿ 23 ರ ಬೆಳಿಗ್ಗೆ, 4 ಗಂಟೆ 53 ನಿಮಿಷಕ್ಕೆ, ಅಮೇರಿಕೆಯ ‘ಇಂಟ್ರ್ಯುಟಿವ ಮೆಷಿನ್ಸ್’ ಈ ಕಂಪನಿಯ ‘ಒಡಿಸೆಸ’ ಹೆಸರಿನ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರತ್ಯೇಕವಾಗಿ ನಿಧಾನವಾಗಿ ಇಳಿಯಿತು. ಈ ನೌಕೆಗೆ ‘ಐಎಂ-1’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಮುಂದಿನ 14 ದಿನಗಳವರೆಗೆ ಅದು ಕಾರ್ಯನಿರ್ವಹಿಸಲಿದೆ. ಚಂದ್ರನ ಮೇಲಿರುವ ವಿವಿಧ ಮಾಹಿತಿಗಳನ್ನು ನೌಕೆಯಲ್ಲಿರುವ ಸಂವೇದಕಗಳ ಮೂಲಕ (ಸೆನ್ಸಾರ್‌ಗಳ ಮೂಲಕ) ಮಾಹಿತಿಯನ್ನು ಸಂಗ್ರಹಿಸಲಿದೆ. ಅಮೇರಿಕೆಯು ಭವಿಷ್ಯದ ಚಂದ್ರ ಯಾನಕ್ಕಾಗಿ ಈ ಕಂಪನಿಯ ಸಹಾಯವನ್ನು ಪಡೆದುಕೊಳ್ಳಲಿದೆ.

(ಸೌಜನ್ಯ – Business Today)

‘ಓಡಿಸೆಸ ’ ನ ವೈಶಿಷ್ಟ್ಯಗಳು!

1. ತೂಕ: 1ಸಾವಿರ 900 ಕೆಜಿ

2. ಉಡಾವಣಾ ಅವಧಿ: 8 ದಿನಗಳು – ಫೆಬ್ರವರಿ 15 ರಂದು ಉಡಾವಣೆ; ಫೆಬ್ರವರಿ 21 ರಂದು, ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು ಮತ್ತು ಫೆಬ್ರವರಿ 23 ರ ಬೆಳಿಗ್ಗೆ ಚಂದ್ರನಲ್ಲಿ ಕಾಲೂರಿತು.

3. ‘ಒಡಿಸೆಸ’’ 6 ಕಾಲುಗಳನ್ನು ಹೊಂದಿದೆ.

4. ಆಕಾರ: 4.3 ಮೀಟರ್ ಎತ್ತರದ ಷಟ್ಕೋನದ ನೌಕೆಯಾಗಿದೆ. ಒಂದು ಸಣ್ಣ ‘ಎಸ್‌ಯು ವಿ’ (ಕ್ರೀಡೆ ಮತ್ತು ನಿಯಮಿತ ಬಳಕೆಗಾಗಿ ತಯಾರಿಸಲಾಗಿರುವ ನಾಲ್ಕು ಚಕ್ರಗಳ ವಾಹನ) ಅಷ್ಟೇ ಈ ನೌಕೆಯಿದೆ.

ಅಮೇರಿಕೆಯ ಚಂದ್ರಯಾನ ಮಿಷನ !

ಅಮೇರಿಕೆಯು ಚಂದ್ರನ ಮೇಲೆ ಅನೇಕ ಬಾರಿ ಕಾರ್ಯಾಚರಣೆಗಳನ್ನು ನಡೆಸಿದ್ದು, ಡಿಸೆಂಬರ್ 19, 1972 ರಂದು, ‘ಅಪೊಲೊ-17’ ಮಿಷನ ಮೂಲಕ ಅಮೇರಿಕೆಯ ಕೊನೆಯ ಇಬ್ಬರು ಗಗನಯಾತ್ರಿಗಳು ಚಂದ್ರನ ಮೇಲೆ ಇಳಿದಿದ್ದರು. ಅಪೊಲೊ ಮಿಷನ್ ಅಡಿಯಲ್ಲಿ ಒಟ್ಟು 12 ಗಗನಯಾತ್ರಿಗಳು ಚಂದ್ರನ ಮೇಲೆ ಇಳಿದಿದ್ದಾರೆ. ತದನಂತರ ನೇರವಾಗಿ ಚಂದ್ರನ ಸುತ್ತ ವಿವಿಧ ನೌಕೆಗಳನ್ನು ಅಮೇರಿಕೆಗೆ ಕಳುಹಿಸಿದ್ದರೂ, ಪ್ರತ್ಯಕ್ಷ ಚಂದ್ರನ ಮೇಲೆ ಇಳಿಸುವ ಯಾವುದೇ ಮಿಷನ್ ನಡೆಸಿರಲಿಲ್ಲ.

ನಾಸಾದ ಮುಂಬರುವ ಮಹತ್ವಾಕಾಂಕ್ಷೆಯ ಚಂದ್ರಮಿಷನ!

‘ಆರ್ಟೆಮಿಸ್ ಪ್ರೋಗ್ರಾಂ’ ಮೂಲಕ ಚಂದ್ರನ ಮೇಲೆ ವಾಸ್ತವ್ಯ ಮಾಡುವ ಕಾರ್ಯಾಚರಣೆಯನ್ನು ಅಮೇರಿಕೆಯ ನಾಸಾ ಕೈಗೆತ್ತಿಕೊಂಡಿದೆ. 2025 ರ ನಂತರ, ಅಮೇರಿಕೆಯ ಗಗನಯಾತ್ರಿಗಳು ಚಂದ್ರನ ಮೇಲೆ ಪುನಃ ಇಳಿಯಲು ಪ್ರಯತ್ನಿಸಲಿದ್ದಾರೆ ಮತ್ತು ಕೆಲವು ದಿನಗಳವರೆಗೆ ಚಂದ್ರನ ಮೇಲೆ ವಾಸ್ತವ್ಯವನ್ನು ಮಾಡುವವರಿದ್ದಾರೆ.