Yana Mir exposed Pakistan : ಕಾಶ್ಮೀರದ ಜನರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದು, ಪಾಕಿಸ್ತಾನವು ಅಪಪ್ರಚಾರ ಮಾಡುತ್ತಿದೆ ! – ಕಾಶ್ಮೀರದ ಮಹಿಳಾ ಪತ್ರಕರ್ತೆ ಯಾನಾ ಮಿರ್

ಕಾಶ್ಮೀರದ ಮಹಿಳಾ ಪತ್ರಕರ್ತೆ ಯಾನಾ ಮಿರ್ ಇವರಿಂದ ಬ್ರಿಟಿಷ್ ಸಂಸತ್ತಿನಲ್ಲಿ ಛೀಮಾರಿ !

ಯಾನಾ ಮಿರ್

ಲಂಡನ (ಬ್ರಿಟನ) – ಭಾರತದ ಭಾಗವಾಗಿರುವ ಕಾಶ್ಮೀರದಲ್ಲಿ ಜನರು ಸಂಪೂರ್ಣವಾಗಿ ಸುರಕ್ಷಿತ ಮತ್ತು ಮುಕ್ತರಾಗಿದ್ದಾರೆ. ನಾನು ಭಯೋತ್ಪಾದಕರ ಭಯದಿಂದ ತನ್ನದೇ ದೇಶವನ್ನು (ಪಾಕಿಸ್ತಾನ) ಬಿಟ್ಟು ಹೋಗಿರುವ ಮಲಾಲಾ ಯೂಸುಫ್‌ಜಾಯ್ ಅಲ್ಲ. ನಾನು ಭಾರತದಲ್ಲಿ ನನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಲ್ಲೆನು ಮತ್ತು ಸುರಕ್ಷಿತವಾಗಿದ್ದೇನೆ. ಪಾಕಿಸ್ತಾನ ಕಾಶ್ಮೀರದ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿದೆ, ಎಂದು ಭಾರತದ ಕಾಶ್ಮೀರದಲ್ಲಿರುವ ಕಾರ್ಯಕರ್ತೆ ಮತ್ತು ಪತ್ರಕರ್ತೆ ಯಾನಾ ಮಿರ ಇವರು ಪಾಕಿಸ್ತಾನದ ಬಗ್ಗೆ ಟೀಕಿಸಿದರು. ಅವರು ಈ ಸಮಯದಲ್ಲಿ ಪಾಕಿಸ್ತಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಮಲಿನಗೊಳಿಸಿದೆಯೆಂದು ಹೇಳಿ, ಅದನ್ನು ತೀವ್ರವಾಗಿ ವಿರೋಧಿಸಿದರು. ಈ ಹೇಳಿಕೆಗೆ ಸದನವು ಚಪ್ಪಾಳೆಯ ಸದ್ದಿನಲ್ಲಿ ರಿಂಗಣಿಸಿತು. ಯಾನಾ ಮಿರ್ ಇವರು ಲಂಡನ್‌ನಲ್ಲಿ ಬ್ರಿಟಿಷ್ ಸಂಸತ್ತು ಆಯೋಜಿಸಿದ್ದ ‘ರೆಸಲ್ಯೂಶನ್ ಡೇ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ‘ಜಮ್ಮು ಮತ್ತು ಕಾಶ್ಮೀರದ ಜನರ ನಡುವೆ ಬಿರಿಕು ಮೂಡಿಸುವುದನ್ನು ನಿಲ್ಲಿಸುವಂತೆ ಕರೆ ನೀಡಿದರು.

ಯಾನಾ ಮಿರ್ ಮಾತನಾಡಿ,

1. ನನ್ನ ಜನ್ಮಸ್ಥಳ ಕಾಶ್ಮೀರ ಅದು ಭಾರತದ ಭಾಗವಾಗಿದೆ. ಅದು ಸುರಕ್ಷಿತವಾಗಿದೆ. ನನಗೆ ಎಂದಿಗೂ ಓಡಿಹೋಗಿ ಬೇರೆ ದೇಶದಲ್ಲಿ ಆಶ್ರಯ ಪಡೆಯುವ ಆವಶ್ಯಕತೆ ಬೀಳಲಿಲ್ಲ.

2. ನಾನು ಎಂದಿಗೂ ಮಲಾಲಾ ಯೂಸುಫ್‌ಜಾಯ್ ಆಗುವುದಿಲ್ಲ; ಆದರೆ ಮಲಾಲಾಳನ್ನು ‘ಸಂತ್ರಸ್ಥೆ’ ಎಂದು ಕರೆದು ತನ್ನ ದೇಶದ, ತನ್ನ ಪ್ರಗತಿಪರ ಮಾತೃಭೂಮಿಯನ್ನು ಅವಮಾನ ಮಾಡುವ ಕೃತ್ಯವನ್ನು ನಾನು ಆಕ್ಷೇಪಿಸುತ್ತೇನೆ. ಸಾಮಾಜಿಕ ಮಾಧ್ಯಮ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ಎಂದಿಗೂ ಭಾರತದ ಕಾಶ್ಮೀರಕ್ಕೆ ಭೇಟಿ ನೀಡಲು ಮುಂದಾಗಿಲ್ಲ, ಇಂತಹವರು ಅಪಪ್ರಚಾರ ಮಾಡುತ್ತಿರುವ ಬಗ್ಗೆ ನಾನು ಆಕ್ಷೇಪಿಸುತ್ತೇನೆ. ಅಂತಹ ಜನರು ಕಾಶ್ಮೀರದಲ್ಲಿ ಬರದೇ ಹೊರಗೆ ನಿಂತುಕೊಂಡು ದೌರ್ಜನ್ಯದ ದಂತಕಥೆಗಳನ್ನು ಸೃಷ್ಟಿಸಿದ್ದಾರೆ.

3. ನಾನು ನಿಮಗೆ ಧರ್ಮದ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವುದನ್ನು ನಿಲ್ಲಿಸಬೇಕೆಂದು ವಿನಂತಿಸುತ್ತೇನೆ. ನಾವು ನಮ್ಮ ಒಗ್ಗಟ್ಟನ್ನು ನಷ್ಟಗೊಳಿಸಲು ಬಿಡುವುದಿಲ್ಲ.

4. ಈ ವರ್ಷದ ‘ರೆಸಲ್ಯೂಶನ್ ಡೇ’ ಸಂದರ್ಭದಲ್ಲಿ, ಬ್ರಿಟನ್ ಮತ್ತು ಪಾಕಿಸ್ತಾನದಲ್ಲಿ ವಾಸಿಸುವ ನಮ್ಮ ಅಪರಾಧಿಗಳು ಅಂತರಾಷ್ಟ್ರೀಯ ಪ್ರಸಾರ ಮಾಧ್ಯಮ ಅಥವಾ ಅಂತರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಗಳಲ್ಲಿ ನನ್ನ ದೇಶವನ್ನು ಅಪಪ್ರಚಾರ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ನಾನು ಆಶಿಸುತ್ತೇನೆ.

5. ಭಯೋತ್ಪಾದನೆಯಿಂದಾಗಿ ಸಾವಿರಾರು ಕಾಶ್ಮೀರಿ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನನ್ನ ಕಾಶ್ಮೀರಿ ಸಮುದಾಯಕ್ಕೆ ಶಾಂತಿಯಿಂದ ಬದುಕಲು ಬಿಡಿರಿ. ಧನ್ಯವಾದಗಳು ಮತ್ತು ಜೈ ಹಿಂದ್.

ಸಂಪಾದಕೀಯ ನಿಲುವು

ಪಾಕಿಸ್ತಾನ ಮಾತ್ರವಲ್ಲ, ಭಾರತದಲ್ಲಿರುವ ತಥಾಕಥಿತ ಜಾತ್ಯಾತೀತವಾದಿ ರಾಜಕೀಯ ಪಕ್ಷಗಳೂ ಇದನ್ನೇ ಮಾಡುತ್ತಿವೆ !