ಓರ್ವನ ಬಂಧನ, ಇತರರ ಹುಡುಕಾಟ !
ವಿಜಯನಗರ – ಅಯೋಧ್ಯೆಯಿಂದ ಕರ್ನಾಟಕಕ್ಕೆ ಮರಳುತ್ತಿದ್ದ ರೈಲನ್ನು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಮತಾಂಧನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರುವರಿ 22 ರ ರಾತ್ರಿ ಅಯೋಧ್ಯೆಯಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಶ್ರೀರಾಮಂದಿರದ ದರ್ಶನವನ್ನು ಪಡೆದುಕೊಂಡು ಮರಳುತ್ತಿರುವಾಗ ಈ ಘಟನೆ ನಡೆದಿದೆ.
1. ರಾಜ್ಯದ ಹೊಸಪೇಟೆ ರೇಲ್ವೆ ನಿಲ್ದಾಣದಲ್ಲಿ ರೈಲು ನಿಂತಾಗ 4 ಮುಸಲ್ಮಾನ ಯುವಕರು ಭಕ್ತರಿಗಾಗಿ ಮೀಸಲಿದ್ದ ಬೋಗಿ ಸಂಖ್ಯೆ 2 ರಲ್ಲಿ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದರು. ಪ್ರವಾಸಿಗರು ಯುವಕರನ್ನು ಒಳಗೆ ಪ್ರವೇಶಿಸದಂತೆ ತಡೆದಾಗ ಅವರ ನಡುವೆ ವಾಗ್ವಾದ ನಡೆಯಿತು.
2. `ಒಂದು ವೇಳೆ ಯಾರಾದರೂ ನಮ್ಮನ್ನು ರೈಲು ಹತ್ತದಂತೆ ತಡೆದರೆ ಬೆಂಕಿ ಹಚ್ಚುತ್ತೇವೆ’ ಎಂದು ಬೆದರಿಕೆ ಹಾಕಿದರು. ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದಾಗ ಈ ಯುವಕರಿಗೆ ಮತ್ತೊಂದು ಬೋಗಿಯಿಂದ ಪ್ರವಾಸ ಮಾಡಲು ಅನುಮತಿ ನೀಡಲಾಯಿತು; ಆದರೆ ಭಕ್ತರು ಗಾಡಿಯಿಂದ ಕೆಳಗೆ ಇಳಿದು, ಯುವಕರ ವಿರುದ್ಧ ಘೋಷಣೆಯನ್ನು ಕೂಗುತ್ತಾ, ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.
3. ಬಜರಂಗದಳ ಸೇರಿದಂತೆ ಇತರೆ ಹಿಂದೂ ಸಂಘಟನೆಗಳಿಗೆ ಇದರ ಮಾಹಿತಿ ಸಿಗುತ್ತಲೇ ಅವರೂ ತಲುಪಿ ಮುಸ್ಲಿಂ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
4. ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಇವರು ಘಟನಾ ಸ್ಥಳವನ್ನು ತಲುಪಿ ಪ್ರವಾಸಿಗರು ಮತ್ತು ಹಿಂದೂ ಸಂಘಟನೆಗಳಿಗೆ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಭರವಸೆ ನೀಡಿದರು. ತದನಂತರ ಭಕ್ತರು ರೈಲನ್ನು ಹತ್ತಿದರು ಮತ್ತು ಮುಂದಿನ ಪ್ರಯಾಣವನ್ನು ಮುಂದುವರೆಸಿದನು.
5. ಇದು ನಡೆಯುತ್ತಿರುವಾಗ ಅನೇಕ ಮುಸ್ಲಿಂ ಯುವಕರು ಘಟನಾ ಸ್ಥಳದಿಂದ ಪರಾರಿಯಾದರು. ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನ ಆರಂಭಿಸಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಇಲ್ಲಿ ಗೋಧ್ರಾ ಹತ್ಯಾಕಾಂಡದಂತೆ ಕರಸೇವಕರನ್ನು ರೈಲಿನಲ್ಲಿ ಸಜೀವ ಸುಡುವ ಘಟನೆ ನಡೆದಿದ್ದರೆ, ಅದಕ್ಕೆ ಯಾರು ಹೊಣೆ ? ಇದನ್ನು ನೋಡಿದರೆ, ರಾಜ್ಯದ ಹಿಂದೂಗಳು ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುವುದು ಆವಶ್ಯಕವಾಗಿದೆ. |