‘ದಾರುಲ ಉಲೂಮ ದಿಯೋಬಂದ’ ನ ‘ಗಜವಾ-ಎ-ಹಿಂದ’ ಇದಕ್ಕೆ ಹೊಸ ಫತ್ವಾ ಮೂಲಕ ಮಾನ್ಯತೆ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೋಟಿಸ್

(‘ಗಝವಾ-ಎ-ಹಿಂದ’ ಎಂದರೆ ಭಾರತದ ಮೇಲೆ ದಾಳಿ ನಡೆಸಿ ಮುಸಲ್ಮಾನರು ಆಳ್ವಿಕೆ ನಡೆಸುವುದು)
(‘ದಾರುಲ ಉಲೂಮ ದೇವಬಂದ’ – ಉತ್ತರ ಪ್ರದೇಶದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ)

ಸಹರಾನಪುರ (ಉತ್ತರ ಪ್ರದೇಶ) – ಇಲ್ಲಿನ ದಾರುಲ ಉಲೂಮ ದಿಯೋಬಂದ ಈ ಇಸ್ಲಾಮಿಕ ಶಿಕ್ಷಣ ಸಂಸ್ಥೆಯು ತನ್ನ ಹೊಸ ಫತ್ವಾದಲ್ಲಿ `ಗಝವಾ-ಎ- ಹಿಂದ’ ಗೆ ಮಾನ್ಯತೆ ನೀಡಿದೆ. ಈ ಫತ್ವಾದಲ್ಲಿ,ಭಾರತದ ಮೇಲಿನ ದಾಳಿಯಲ್ಲಿ ಯಾರು ಸತ್ತಿದ್ದಾರೆಯೋ ಅವರನ್ನು ‘ಮಹಾನ ಶಹೀದ’’ ಎಂದು ಕರೆಯಲಾಗುವುದು ಮತ್ತು ಅವರು ಸ್ವರ್ಗಕ್ಕೆ ಹೋಗುತ್ತಾರೆ’ ಎಂದು ಹೇಳಲಾಗಿದೆ. ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ವು ಸ್ವತಃ ಫತ್ವಾವನ್ನು ಗಮನಕ್ಕೆ ತೆಗೆದುಕೊಂಡು ಈ ಫತ್ವಾ ವಿರುದ್ಧ ಕ್ರಮ ಕೈಕೊಳ್ಳುವಂತೆ ಸಹರಾನ್‌ಪುರ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದೆ. ಹಾಗೆಯೇ ಕೈಕೊಂಡ ಕ್ರಮದ ವರದಿಯನ್ನು 15 ದಿನಗಳೊಳಗೆ ಆಯೋಗಕ್ಕೆ ಕಳುಹಿಸುವಂತೆ ತಿಳಿಸಿದೆ.

1. ದಾರುಲ ಉಲೂಮನ ಸಂಕೇತ ಸ್ಥಳದ ಮೇಲೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು, ‘ಹದೀಸ್’ ನಲ್ಲಿ (ಒಂದು ವಿಶಿಷ್ಟ ಸನ್ನಿವೇಶದಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ಹೇಗೆ ನಡೆದುಕೊಂಡರು ಮತ್ತು ಹೇಗೆ ಮಾತನಾಡಿದರು ಇದರ ಸಂಗ್ರಹ) ಉಪಖಂಡದಲ್ಲಿ ಆಗುವ ಭಾರತದ ಮೇಲಿನ ದಾಳಿಯ ಪ್ರಸ್ತಾಪವಿದೆಯೇ? ಮತ್ತು ಈ ಯುದ್ಧದಲ್ಲಿ ಯಾರು ` ಶಹೀದ’ ಆಗುತ್ತಾರೆಯೋ ಅವನನ್ನು `ಮಹಾನ ಶಹೀದ’ ಎಂದು ಕರೆಯಬಹುದೇ? ಮತ್ತು ‘ಘಾಜಿ’ (ಇಸ್ಲಾಂ ಧರ್ಮಕ್ಕಾಗಿ ಹೋರಾಡುವ ವೀರ ಯೋಧ) ಆಗುವವನು ಸ್ವರ್ಗದಲ್ಲಿ ಇರುತ್ತಾನೆಯೇ?

2. ಈ ಪ್ರಶ್ನೆಗೆ ಉತ್ತರವಾಗಿ, ದಾರುಲ ಉಲೂಮ ಫತ್ವಾ ಹೊರಡಿಸುವಾಗ ‘ಸುನಾನ-ಅಲ್-ನಾಸಾ’ ಎಂಬ ಪುಸ್ತಕವನ್ನು ಉಲ್ಲೇಖಿಸಿ, ಈ ಪುಸ್ತಕದಲ್ಲಿ `ಗಝವಾ-ಎ-ಹಿಂದ’ ಮೇಲೆ ಒಂದು ಸಂಪೂರ್ಣ ಪ್ರಕರಣವಿದೆ. ಹಜರತ್ ಅಬು ಹುರೈರಾ ಅವರ ಹದೀಸ್ ಅನ್ನು ಉಲ್ಲೇಖಿಸಿ, ‘ಅಲ್ಲಾಹನ ದೂತರು ಭಾರತದ ಮೇಲೆ ದಾಳಿ ಮಾಡುವುದಾಗಿ ವಚನ ನೀಡಿದ್ದರು. ‘ನಾನು ಜೀವಂತವಾಗಿದ್ದರೆ, ಇದಕ್ಕಾಗಿ ನಾನು ನನ್ನನ್ನು ಮತ್ತು ನನ್ನ ಆಸ್ತಿಯನ್ನು ತ್ಯಾಗ ಮಾಡುತ್ತೇನೆ. ನಾನು ಎಲ್ಲರಿಗಿಂತ ದೊಡ್ಡ ಹುತಾತ್ಮನಾಗುತ್ತೇನೆ’ ಎಂದು ಅವರು ಹೇಳಿದ್ದರು. ದೇವಬಂದ್‌ನ ‘ಮುಖ್ತಾರ್ ಅಂಡ್ ಕಂಪನಿ’ ಈ ಪುಸ್ತಕವನ್ನು ಪ್ರಕಟಿಸಿದೆಯೆಂದು ಈ ಫತವಾದಲ್ಲಿ ಹೇಳಲಾಗಿದೆ.

3. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೋಟಿಸ್‌ನಲ್ಲಿ ಈ ಮದರಸಾ ಭಾರತದ ಮಕ್ಕಳಿಗೆ ದೇಶ ವಿರೋಧಿ ತರಬೇತಿಯನ್ನು ನೀಡುತ್ತಿದೆ ಎಂದು ತಿಳಿಸಿದೆ. ಇದರಿಂದ ಇಸ್ಲಾಮಿಕ್ ಮೂಲಭೂತವಾದಕ್ಕೆ ಚಾಲನೆ ಸಿಗಲಿದೆ. ಮಕ್ಕಳಲ್ಲಿ ದೇಶದ ವಿಷಯದಲ್ಲಿ ದ್ವೇಷ ನಿರ್ಮಾಣವಾಗಲಿದೆ. ಚಿಕ್ಕ ಮಕ್ಕಳಿಗೆ ಯಾವುದೇ ಕಾರಣವಿಲ್ಲದೇ ತೊಂದರೆ ಕೊಡುವುದು ಅಥವಾ ಅವರಿಗೆ ದೈಹಿಕ ತೊಂದರೆ ಕೊಡುವುದು ಬಾಲಾಪರಾಧ ನ್ಯಾಯ ಕಾಯ್ದೆಯ ಕಲಂ 75 ರ ಉಲ್ಲಂಘನೆಯಾಗಿದೆ.

ಈ ಹಿಂದಿನ ವಿವಾದಾತ್ಮಕ ಫತ್ವಾ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಕೊಂಡಿರಲಿಲ್ಲ !

ಈ ಹಿಂದೆ 2022 ರಲ್ಲಿ ಮತ್ತು 2023 ರಲ್ಲಿ ಆಯೋಗವು ದಾರುಲ ಉಲೂಮನ ವಿವಾದಾತ್ಮಕ ಫತ್ವಾಗಳ ಬಗ್ಗೆ ಪ್ರಕರಣವನ್ನು ದಾಖಲಿಸಲು ಒತ್ತಾಯಿಸಿತ್ತು. ಆದರೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆಯೋಗ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿನ ಫತ್ವಾದಿಂದ ಏನಾದರೂ ಪ್ರತಿಕೂಲ ಘಟನೆ ನಡೆದರೆ ಜಿಲ್ಲಾಡಳಿತವೂ ಅಷ್ಟೇ ಹೊಣೆಯಾಗಬೇಕಾಗುತ್ತದೆ ಎಂದು ಆಯೋಗ ಎಚ್ಚರಿಸಿದೆ. (ಉತ್ತರ ಪ್ರದೇಶದ ಭಾಜಪ ಸರಕಾರವಿರುವಾಗ ಪೊಲೀಸರು ಮತ್ತು ಆಡಳಿತವು ಈ ರೀತಿ ನಿಷ್ಕ್ರಿಯವಾಗಿದ್ದರೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ದಾರುಲ ಉಲೂಮ ದೇವಬಂದ’ನ ಇತಿಹಾಸ ಮತ್ತು ವರ್ತಮಾನವನ್ನು ಗಮನಿಸಿದರೆ, ಇಂತಹ ಶಿಕ್ಷಣ ಸಂಸ್ಥೆಯಿಂದ ಭಾರತ ದ್ವೇಷಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದರಿಂದ ಅದನ್ನು ಮುಚ್ಚುವುದೇ ಯೋಗ್ಯವಾಗುವುದು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು.