ಟೋಕಿಯೋ (ಜಪಾನ್) – ಜಪಾನಿನ ವಿಜ್ಞಾನಿಗಳು ವಿಶ್ವದ ಮೊದಲ ಮರದ ಉಪಗ್ರಹವನ್ನು ತಯಾರಿಸಿದ್ದಾರೆ. ಇದು ಸಂಪೂರ್ಣ ಪರಿಸರ ಸ್ನೇಹಿ ಎಂದು ಹೇಳಿಕೊಂಡಿದೆ. ‘ದಿ ಗಾರ್ಡಿಯನ್‘ ಪತ್ರಿಕೆಯ ಪ್ರಕಾರ ಈ ಉಪಗ್ರಹವನ್ನು ಶೀಘ್ರದಲ್ಲಿಯೇ ಅಮೇರಿಕಾದ ರಾಕೆಟ್‌ನಿಂದ ಉಡಾವಣೆ ಮಾಡಲಾಗುವುದು.
ಉಪಗ್ರಹದ ಹೆಸರು !
ಜಪಾನಿ ವಿಜ್ಞಾನಿಗಳು ಈ ಮರದ ಉಪಗ್ರಹಕ್ಕೆ ‘ಲಿಗ್ರೋಸ್ಯಾಟ್‘ ಎಂದು ಹೆಸರಿಟ್ಟಿದ್ದಾರೆ.
ಉಪಗ್ರಹವನ್ನು ಎಲ್ಲಿ ತಯಾರಿಸಲಾಗಿದೆ ?
ಜಪಾನಿನ ಕ್ಯೂಟೋ ವಿಶ್ವವಿದ್ಯಾಲಯದ ‘ಏರೋಸ್ಪೇಸ್‘ ಇಂಜನಿಯರ್‌ಗಳು ಈ ಉಪಗ್ರಹವನ್ನು ತಯಾರಿಸಿದ್ದಾರೆ.
ಈ ಮರದ ಉಪಗ್ರಹದ ಲಾಭ !
೧. ಉಪಗ್ರಹದಿಂದ ಭೂಮಿಯ ಸುತ್ತಲಿನ ವಾತಾವರಣದಲ್ಲಿನ ಮಾಲಿನ್ಯವನ್ನು ಕಡಿಮೆ ಆಗುತ್ತದೆ.
೨. ಯಾವ ಮರದಿಂದ ಇದನ್ನು ತಯಾರಿಸಿದೆಯೋ, ಅದು ಸಹಜವಾಗಿ ಮುರಿಯುವುದಿಲ್ಲ.
೩. ಬಾಹ್ಯಾಕಾಶದಲ್ಲಿ ಅನೇಕ ದೇಶಗಳ ಉಪಗ್ರಹಗಳಿವೆ. ಅವು ಕಾಲಾನಂತರ ನಾಶವಾಗುತ್ತವೆ. ಅವುಗಳ ಬಿಡಿಭಾಗಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುತ್ತವೆ ಹಾಗೂ ಭೂಮಿಗೆ ಬಿದ್ದರೆ ವಿನಾಶಕಾರಿಯಾಗಬಹುದು. ಈ ತ್ಯಾಜ್ಯವನ್ನು ತಪ್ಪಿಸಲು ಮತ್ತು ಬಾಹ್ಯಾಕಾಶದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಈ ಉಪಗ್ರಹವನ್ನು ನಿರ್ಮಿಸಲಾಗಿದೆ.
೪. ಸ್ಥಿರವಾಗಿರಲು ಮತ್ತು ಮುರಿಯದಿರಲು ಮಂಗೋಲಿಯನ್ ಮರದಿಂದ ತಯಾರಿಸಲಾಗಿದೆ.
೫. ಕ್ಯೂಟೋ ವಿಶ್ವವಿದ್ಯಾಲಯದ ಇಂಜನಿಯರ್ ಪ್ರಕಾರ, ಈ ಮರವು ಬಯೋಡಿಗ್ರೇಡ್ (ಜೈವಿಕ ವಿಘಟನೆಯಾಗಿದೆ) ಇದ್ದು ಪ್ರಕೃತಿಯಲ್ಲಿ ನೈಸರ್ಗಿಕವಾಗಿ ನಾಶವಾಗುತ್ತವೆ.
೬. ಭವಿಷ್ಯದಲ್ಲಿ ಪ್ರತಿವರ್ಷ ೨ ಸಾವಿರಕ್ಕೂ ಹೆಚ್ಚು ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಲಾಗುವುದು ಈ ಮೂಲಕ ಮೇಲಿನ ವಾತಾವರಣದಲ್ಲಿ ಅಲ್ಯೂಮಿನಿಯಂ ದೊಡ್ಡ ಪ್ರಮಾಣದಲ್ಲಿ ಶೇಖರಣೆ ಆಗುವ ಸಾಧ್ಯತೆ ಇದೆ. ಅಲ್ಯೂಮಿನಿಯಂ ಓಝೋನ್ ಪದರವನ್ನು ದುರ್ಬಲಗೊಳಿಸುತ್ತದೆ ಎಂದು ಕೆಲವು ಸಂಶೋಧನೆಗಳು ಬಹಿರಂಗಪಡಿಸಿವೆ. ಓಝೋನ್ ಪದರವು ಸೂರ್ಯನ ಅಪಾಯಕಾರಿ ಅಲ್ಟ್ರಾವಯಲೆಟ್ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ.
Japanese scientists unveil plans for LignoSat, the first wooden satellite crafted from magnolia wood.https://t.co/2LBHz2oCK1
— Tech Times (@TechTimes_News) February 18, 2024
ಸಂಪಾದಕೀಯ ನಿಲುವುಸಾಮಾನ್ಯ ಉಪಗ್ರಹ ಅಲ್ಯೂಮಿನಿಯಂನಿಂದ ಇರುವುದರಿಂದ ಬಾಹ್ಯಾಕಾಶ ಮಾಲಿನ್ಯವನ್ನು ಉಂಟುಮಾಡುತ್ತದೆ ! |