ಉತ್ತರಪ್ರದೇಶದಲ್ಲಿ ಮುಸ್ಲೀಂ ದಂಪತಿ ಹಿಂದೂಧರ್ಮಕ್ಕೆ ಘರವಾಪಸಿ !

ಮುಸಲ್ಮಾನರ ಮನೆಯಲ್ಲಿ ಬಾಡಿಗೆಗೆ ಇರುವಾಗ ಇಸ್ಲಾಂನ್ನು ಸ್ವೀಕರಿಸಿದ್ದರು

ಫತೆಹಪುರ (ಉತ್ತರಪ್ರದೇಶ) – ಇಲ್ಲಿನ ಅಧಾರಿ ಗ್ರಾಮದ ನಿವಾಸಿ ಅಬ್ದುಲ್ಲಾ ಮತ್ತು ಅವರ ಪತ್ನಿ ಫಾತೀಮಾ ಇವರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಈ ದಂಪತಿ ೨೫ ವರ್ಷಗಳ ಹಿಂದೆ ಬನಾರಸದಿಂದ ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದರು. ಗಂಡನ ಹೆಸರು ಶಿವಪ್ರಸಾದ ಹಾಗೂ ಹೆಂಡತಿ ಹೆಸರು ಕವಿತ ಇತ್ತು. ಅಧಾರಿ ಗ್ರಾಮಕ್ಕೆ ಬಂದನಂತರ ಈ ಹಿಂದೂ ದಂಪತಿ ಒಂದು ಮುಸಲ್ಮಾನ ಕುಟಂಬದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಮುಸಲ್ಮಾನ ಕುಟಂಬದವರ ಸಲಹೆಯಂತೆ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಈಗ ಅವರು ‘ಘರ್‌ವಾಪಸಿ‘ ಆಗಿದ್ದಾರೆ.

೧. ೬ ತಿಂಗಳ ಹಿಂದೆ ಈ ದಂಪತಿ ಆಧಾರಿ ಗ್ರಾಮದಲ್ಲಿ ಮನೆ ಕಟ್ಟಿದರು. ಈ ಕಾಲಾವಧಿಯಲ್ಲಿ ಅವರು ಹಿಂದೂ ಸಂಘಟನೆಯವರನ್ನು ಸಂರ್ಪಕಿಸಿ ಸಂಪೂರ್ಣ ವಾಸ್ತವವನ್ನು ತಿಳಿಸಿದರು. ಆನಂತರ ಹಿಂದೂ ಸಂಘಟನೆಯ ಜನರ ಉಪಸ್ಥಿತಿಯಲ್ಲಿ ಸುಂದರಕಾಂಡ ಪಠಿಸಿ ಹವನಪೂಜೆ ಮಾಡಿ ಹಿಂದೂ ಧರ್ಮ ಸ್ವೀಕರಿಸಿದರು. ‘ನಾವು ಸನಾತನಿ ಇದ್ದೆವು, ಸನಾತನಿಯಾಗಿಯೇ ಇರುತ್ತೇವೆ‘, ಎಂದು ಶಿವಪ್ರಸಾದ ಹೇಳಿದರು.

೨. ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ದಳದ ಅಧ್ಯಕ್ಷ ಅಜೇಂದ್ರ ಸಾಹು ಮಾತನಾಡಿ, ಹಿಂದೂ ಧರ್ಮದ ಈ ಇಬ್ಬರೂ ಕಾರಣಾಂತರಗಳಿಂದ ಇಸ್ಲಾಂ ಸ್ವೀಕರಿಸಿದ್ದರು. ಅವರಿಗೆ ಹಿಂದೂಧರ್ಮಕ್ಕೆ ಮರಳಿ ಬರುವುದಿತ್ತು. ನಾವು ಅವರಿಗೆ ಭದ್ರತೆ ಮತ್ತು ಸಹಾಯ ಮಾಡಿದೆವು ಎಂದರು.