ಬುಲಢಾಣಾದಲ್ಲಿ ಮಹಾಪ್ರಸಾದದಿಂದ 500 ಕ್ಕೂ ಹೆಚ್ಚು ಜನರಿಗೆ ವಿಷಬಾಧೆ

ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ವೈದ್ಯರು ಗೈರುಹಾಜರು; ಗ್ರಾಮಸ್ಥರಿಂದ ಆಕ್ರೋಶ

ಬುಲಢಾಣಾ – ಜಿಲ್ಲೆಯ ಲೋಣಾರ ತಾಲೂಕಿನ ಸೋಮಠಾಣಾ ಗ್ರಾಮದಲ್ಲಿ ಫೆಬ್ರುವರಿ 20 ರಂದು ಏಕಾದಶಿ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ, ಎಲ್ಲಾ ಭಕ್ತರಿಗೆ ಊಟದಲ್ಲಿ ನವಣಕ್ಕಿ ಅನ್ನ ಮತ್ತು ಸಾಂಬಾರು ನೀಡಲಾಯಿತು; ಆದರೆ ಊಟದ ಬಳಿಕ ಗ್ರಾಮದ ಸರಿಸುಮಾರ ಎಲ್ಲರೂ ವಾಂತಿ ಮತ್ತು ಭೇದಿಯಿಂದ ಬಳಲತೊಡಗಿದರು. ಸುಮಾರು 450 ರಿಂದ 500 ಜನರಿಗೆ ಈ ಊಟದಿಂದ ವಿಷಬಾಧೆಯಾಗಿದ್ದು, ಅವರ ಮೇಲೆ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪ್ರಾರಂಭವಾಗಿದೆ. ವಿಷಾಹಾರಕ್ಕೆ ತುತ್ತಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಲ್ಲಿ 100 ರಿಂದ 120 ಜನರನ್ನು ಅವರ ಆರೋಗ್ಯ ಸುಧಾರಿಸಿದ ನಂತರ ಮನೆಗೆ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ 400 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವು ಹಿರಿಯ ನಾಗರಿಕರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಸ್ಥಳ ಮತ್ತು ಆಧುನಿಕ ವೈದ್ಯರು ಇಲ್ಲದ ಕಾರಣ ಬುಲಡಾಣದಿಂದ ಆಧುನಿಕ ವೈದ್ಯರ ತಂಡವನ್ನು ಕರೆಸಲಾಗಿತ್ತು. ವಿಶೇಷವೆಂದರೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಿಲ್ಲದ ಕಾರಣ, ಅನೇಕ ಜನರನ್ನು ನೆಲದ ಮೇಲೆಯೇ ಮಲಗಿಸಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ವೈದ್ಯರು ಇಲ್ಲದ ಕಾರಣ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಲಿಲ್ಲ. ಇದರಿಂದ ಕೆಲವು ರೋಗಿಗಳ ಸ್ಥಿತಿ ಗಂಭೀರವಾಗಿತ್ತು. ಈ ಕಾರಣದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದರು. ಅವರು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. (ಇದರಲ್ಲಿ ತಪ್ಪಿತಸ್ಥರನ್ನು ಕೇವಲ ಅಮಾನತುಗೊಳಿಸದೆ ಅವರನ್ನು ವರ್ಗಾಯಿಸಿ ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. – ಸಂಪಾದಕರು)