ವಾಷಿಂಗ್ಟನ್ (ಅಮೇರಿಕಾ) – ಅಶ್ವಿನ್ ರಾಮಾಸ್ವಾಮಿ ಇವರು ಅಮೆರಿಕಾದ ಜಾರ್ಜಿಯ ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಕ್ಕಿಂತ ಚಿಕ್ಕ ವಯಸ್ಸಿನ ಮೊದಲನೆಯ ಭಾರತೀಯ ಅಮೆರಿಕೀ ಆಗಿದ್ದಾರೆ. ರಾಮಾಸ್ವಾಮಿ ಇವರ ತಂದೆ ತಾಯಿ ೧೯೯೦ ರಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ಬಂದ್ದರು. ೨೦೦೦ ರಲ್ಲಿ ಹುಟ್ಟಿರುವ ಅಶ್ವಿನ್ ಇವರು ‘ಜನರೇಷನ್ ಜಿ’ ಈ ಪೀಳಿಗೆಯಲ್ಲಿ ಸೇರಿದ್ದಾರೆ. ೧೯೯೭ ಮತ್ತು ೨೦೧೨ ಈ ಕಾಲಾವಧಿಯಲ್ಲಿ ಹುಟ್ಟಿರುವ ಜನರ ಈ ಪೀಳಿಗೆಯಲ್ಲಿ ಸೇರುತ್ತಾರೆ.
ರಾಮಾಸ್ವಾಮಿ ಇವರು ಸಾಫ್ಟ್ವೇರ್ ಇಂಜಿನಿಯರ್, ಚುನಾವಣೆ ಸುರಕ್ಷೆ, ತಂತ್ರಜ್ಞಾನ ಕಾನೂನು ಮತ್ತು ನೀತಿ ಸಂಶೋಧನೆ ಅಭ್ಯಾಸದ ಪಠ್ಯಕ್ರಮ ಪೂರ್ಣಗೊಳಿಸಿದ್ದಾರೆ. ಅವರ ಪೋಷಕರು ಕೂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿದ್ದಾರೆ. ರಾಮಾಸ್ವಾಮಿ ಏನಾದರು ಚುನಾವಣೆ ಗೆದ್ದರೆ ಅವರು ಜಾರ್ಜಿಯಾದಲ್ಲಿನ ಮೊದಲು ‘ಜನರೇಷನ್ ಜಿ ರಾಜ್ಯ ಸಿನೆಟರ್’ ಮತ್ತು ಕಂಪ್ಯೂಟರ್ ವಿಜ್ಞಾನ ಮತ್ತು ಕಾನೂನು ಎರಡು ಪದವಿ ಪಡೆದಿರುವ ಇಲ್ಲಿಯ ಮೊದಲು ಜನಪ್ರತಿನಿಧಿಯಾಗುವರು. ಒಂದು ಪ್ರಶ್ನೆಗೆ ಉತ್ತರಿಸುವಾಗ ರಾಮಾಸ್ವಾಮಿ ಇವರು,
೧. ನಾನು ಕೃತಜ್ಞತೆ ವ್ಯಕ್ತಪಡಿಸುವುದಕ್ಕಾಗಿ ಮತ್ತು ನನ್ನ ಸಮುದಾಯದ ಸೇವೆ ಮಾಡುವುದಕ್ಕಾಗಿ ಜಾರ್ಜಿಯ ಸಿನೆಟಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕು ಇದನ್ನು ನಾನು ನಿರ್ಧರಿಸಬಹುದು.
೨. ನನ್ನ ತಾಯಿ ಚೆನ್ನೈದವಳಾಗಿದ್ದು ತಂದೆ ಕೋಯಿಮತ್ತುರದವರಾಗಿದ್ದರೆ. ನಾನು ಭಾರತೀಯ ಮತ್ತು ಅಮೆರಿಕ ಸಂಸ್ಕೃತಿಯಲ್ಲಿ ಬೆಳೆದಿದ್ದೇನೆ. ನಾನು ಹಿಂದೂ ಆಗಿದ್ದೇನೆ. ನನಗೆ ಬಾಲ್ಯದಿಂದಲೂ ಭಾರತೀಯ ಸಂಸ್ಕೃತಿ ಮತ್ತು ತತ್ವ ಜ್ಞಾನದಲ್ಲಿ ಬಹಳಷ್ಟು ಆಸಕ್ತಿ ಇತ್ತು.
೩. ನಾನು ಚಿನ್ಮಯ ಮಿಷನ್ ಬಾಲವಾಡಿಯಲ್ಲಿ ಕಲಿತಿದ್ದೇನೆ. ನಾನು ಅಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವತಗೀತೆಯಂತಹ ಮಹಾಕಾವ್ಯವನ್ನು ಓದಿದ್ದೇನೆ. ಎಂದು ಹೇಳಿದ್ದಾರೆ.