ರಾಜ್ಯದ ಶಾಲೆಗಳ ಸ್ವಾಗತ ಫಲಕದಲ್ಲಿ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’, ಬದಲು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಈ ವಾಕ್ಯ ಬರೆದರು !

  • ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ !

ಬೆಂಗಳೂರು – ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ. ಇದಕ್ಕೆ ರಾಜ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ,

1. ಸರಕಾರ `ಕೈ ಮುಗಿದು’ ಇದನ್ನು ಧರ್ಮದೊಂದಿಗೆ ಜೋಡಿಸಿ, ಮಕ್ಕಳಲ್ಲಿ ಇರುವ ತಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ನಾಶ ಮಾಡಲು ಸರಕಾರ ಷಡ್ಯಂತ್ರ ನಡೆಸುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಬ್ರಿಟನ್‌ನ ಆಗಿನ ರಾಜಕುಮಾರ ಚಾರ್ಲ್ಸ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಮುಖ್ಯಸ್ಥರು ಕೈ ಜೋಡಿಸಿ`ನಮಸ್ಕಾರ’ ಮಾಡಿ ಸ್ವಾಗತ ಮಾಡುತ್ತಿದ್ದರು. ಇದು ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದೆ. ಇದನ್ನು ನಷ್ಟಗೊಳಿಸಲು ಪ್ರಯತ್ನಿಸುವ ಸರಕಾರದ ಹೇಳಿಕೆ ಅತ್ಯಂತ ಖಂಡನೀಯವಾಗಿದೆ.

2. ಸರ್ವೋಚ್ಚ ನ್ಯಾಯಾಲಯದ ಫಲಕದ ಮೇಲೆ `ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ.` ಅದಕ್ಕೂ ಧರ್ಮದ ಬಣ್ಣವನ್ನು ನೀಡುವಿರೇ ?’ ಎನ್ನುವ ಪ್ರಶ್ನೆ ಮೂಡುತ್ತದೆ. `ನಮ್ಮ ದೇಶದ ಮೂಲ ಸಂಸ್ಕೃತಿಯನ್ನೇ ಕಿತ್ತು ಹಾಕಿದ ಬಳಿಕ ಮುಂದೆ ಆ ಮಕ್ಕಳು ಸುಸಂಸ್ಕೃತರಾಗಿ ದೇಶವನ್ನು ಹೇಗೆ ನಡೆಸುತ್ತಾರೆ ?’ ಎನ್ನುವ ಆಕ್ರೋಶ ನಿರ್ಮಾಣವಾಗಿದೆ.

3. ಸರಕಾರ ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ನಾಶಪಡಿಸುವ ಹಿನ್ನಲೆಯನ್ನು ಹೊಂದಿದೆ. ಸರಕಾರದ ಇಂತಹ ಕ್ರಮಗಳಿಗೆ ಈ ಹಿನ್ನೆಲೆ ಕಾರಣೀಭೂತವಾಗಿದೆ. ಪೋಷಕರು ಮತ್ತು ಅವರ ಮಕ್ಕಳು ಸರಕಾರದ ಈ ನಿಂದನೀಯ ಕೃತ್ಯವನ್ನು ತಿಳಿದುಕೊಂಡು ತಕ್ಷಣವೇ ಫಲಕದ ಮೇಲೆ ಪುನಃ ಮೊದಲಿನಂತೆ ಬದಲಾಯಿಸಲು ಆಗ್ರಹಿಸುವುದು ಆವಶ್ಯಕವಾಗಿದೆ.