ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮುಕ್ತಗೊಳಿಸಿ !

ಮಹಾಭಾರತದಲ್ಲಿ ಹೇಳಲಾಗುವ ಲಾಕ್ಷಾಗೃಹವು ಪ್ರಸ್ತುತ ಉತ್ತರಪ್ರದೇಶದ ಬಾಗಪತ್‌ನಲ್ಲಿರುವ ಬರ್ನಾವಾದಲ್ಲಿದೆ. ಇದನ್ನು ೧೯೭೦ ರಿಂದ ಮುಸಲ್ಮಾನರು ಗೋರಿ ಇರುವುದಾಗಿ ಹೇಳಿ ಕೊಳ್ಳುತ್ತಿದ್ದರು. ಇದೀಗ ನ್ಯಾಯಾಲಯವು ಲಾಕ್ಷಾಗೃಹವನ್ನು ಹಿಂದೂಗಳಿಗೆ ಹಸ್ತಾಂತರಿಸಲು ಆದೇಶಿಸಿದೆ.

೨. ಇಂತಹ ಆಡಳಿತಗಾರರು ಬೇಕಾಗಿದ್ದಾರೆ !

ಉತ್ತರಪ್ರದೇಶದಲ್ಲಿ ಮಹಿಳೆ ಅಥವಾ ಸಹೋದರಿಯರಿಗೆ ಯಾರಾದರೂ ಕಿರುಕುಳ ನೀಡಿದರೆ ಅವರ ‘ರಾಮ್ ನಾಮ್ ಸತ್ಯ ಹೈ ಆಗುವುದು ಖಂಡಿತ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾರ್ಯಕ್ರಮವೊಂದರಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

೩. ಭಾರತದಲ್ಲಿ ಹಿಂದೂಗಳಿಗೆ ಯಾವಾಗ ಧರ್ಮಶಿಕ್ಷಣ ಸಿಗುವುದು ?

ಬ್ರಿಟನ್ ಶಾಲೆಗಳಲ್ಲಿ ಬರುವ ಏಪ್ರಿಲ್‌ನಿಂದ ಪ್ರಾರಂಭವಾಗುವ ಶೈಕ್ಷಣಿಕ ವರ್ಷದಿಂದ ೪ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಹಿಂದೂ, ಜೈನ, ಸಿಕ್ಖ್ ಮತ್ತು ಬೌದ್ಧ ಧರ್ಮದ ಶಿಕ್ಷಣವನ್ನು ಕಲಿಸಲಾಗುವುದು. ಪ್ರಸ್ತುತ ಕ್ರೈಸ್ತಧರ್ಮವನ್ನು ಮಾತ್ರ ಕಲಿಸಲಾಗುತ್ತಿದೆ.

೪. ಮುಸಲ್ಮಾನ ಇತಿಹಾಸಕಾರರ ಮಾನಸಿಕತೆ ತಿಳಿಯಿರಿ !

ಹಿಂದೆ ಕಾಶಿ ಮತ್ತು ಮಥುರಾದಲ್ಲಿ ದೇವಾಲಯಗಳಿದ್ದವು. ಅವುಗಳನ್ನು ಕೆಡವಲಾಯಿತು; ಆದರೆ ಇಷ್ಟು ವರ್ಷಗಳ ನಂತರ ಅವುಗಳ ಈಗಿನ ರೂಪವನ್ನು ಬದಲಾಯಿಸುವ ಅಗತ್ಯವೇನಿದೆ ? ಎಂದು ಹಿಂದೂದ್ವೇಷಿ ಮತ್ತು ಸಾಮ್ಯವಾದಿ ಇತಿಹಾಸಕಾರ ಇರ್ಫಾನ್ ಹಬೀಬ್ ಪ್ರಶ್ನಿಸಿದ್ದಾರೆ.

೫. ಹಿಂದೂಗಳ ಮುಂದೆ ಪೌರುಷತ್ವವನ್ನು ತೋರಿಸುವ ಪೊಲೀಸರು ಮತಾಂಧರ ಮುಂದೆ ಬಗ್ಗುತ್ತಾರೆ !

ಹಲ್ದ್ವಾನಿ (ಉತ್ತರಾಖಂಡ)ದಲ್ಲಿ ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸಲ್ಮಾನರು ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದರು. ಅಲ್ಲದೇ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಪ್ರಯತ್ನವೂ ನಡೆದಿದೆ. ಈ ದಾಳಿಯಲ್ಲಿ ೧೦೦ ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

೬. ಹಿಂದೂಗಳಿಗೆ ಬೆದರಿಕೆಯೊಡ್ಡುವವರನ್ನು ಜೈಲಿಗಟ್ಟಿ !

ಯಾರಾದರೂ ಮಸೀದಿಗಳನ್ನು ದೇವಸ್ಥಾನಗಳನ್ನಾಗಿ ಪರಿವರ್ತಿಸಲು ಹೊರಟರೆ ನಾವು ಸುಮ್ಮನಿರುವುದಿಲ್ಲ. ಇದನ್ನು ಆಗಲು ನಾವು ಬಿಡುವುದಿಲ್ಲ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಬಂಗಾಲದ ಮುಖ್ಯಸ್ಥ ಸಿದ್ದಿಕುಲ್ಲಾ ಚೌಧರಿ ಇವರು ಜ್ಞಾನವಾಪಿ ಪ್ರಕರಣದಲ್ಲಿ ಬೆದರಿಕೆ ಹಾಕಿದ್ದಾರೆ.

೭. ಎಷ್ಟು ಜನರು ಈ ಸತ್ಯವನ್ನು ಹೇಳುತ್ತಾರೆ ?

ಗೋಪುರವನ್ನು ಒಡೆದು ಗೋಡೆಯ ಮೇಲೆ ಗುಮ್ಮಟವನ್ನು ಮಾಡುವುದರಿಂದ ಅದು ಗಂಗಾ-ಜಮುನಿ ಸಂಸ್ಕೃತಿ (ತಹಜೀಬ್) ಆಗುವುದಿಲ್ಲ. ಹಿಂದೂ ದೇವಾಲಯಗಳನ್ನು ದಾಳಿಕೋರರು ಧ್ವಂಸಗೊಳಿಸಿರುವುದು ಸ್ಪಷ್ಟವಾಗಿದೆ ಎಂದು ಉತ್ತರಪ್ರದೇಶ ಲೋಕತಾಂತ್ರಿಕ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ರಾಜಾ ಭಯ್ಯಾ ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.