ಸಂಭಲ (ಉತ್ತರ ಪ್ರದೇಶ) ಇಲ್ಲಿಯ ಪ್ರಾಚೀನ ಕಲ್ಕಿ ಮಂದಿರ ಕೆಡವಿ ಶಾಹಿ ಜಮಾ ಮಸೀದಿ ನಿರ್ಮಾಣ !

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹೊಸ ಕಲ್ಕಿ ಮಂದಿರದ ಅಡಿಪಾಯ !

ಸಂಭಲ (ಉತ್ತರಪ್ರದೇಶ) – ಭಗವಾನ್ ಕಲ್ಕಿಯು ಭಗವಾನ್ ವಿಷ್ಣುವಿನ ಕೊನೆಯ ಅವತಾರ ಇರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಇಲ್ಲಿ ಕಟ್ಟುವ ಭಗವಾನ್ ಕಲ್ಕಿ ಮಂದಿರದ ಅಡಿಪಾಯ ಇಟ್ಟರು. ಈ ಸಮಯದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಉಪಸ್ಥಿತರಿದ್ದರು. ಧರ್ಮಶಾಸ್ತ್ರದ ಪ್ರಕಾರ ಭಗವಾನ್ ಕಲ್ಕಿ ಇವರ ಜನ್ಮ ಇದೇ ಸಂಭಲದಲ್ಲಿ ಆಗುವುದು. ೫೦೦ ವರ್ಷಗಳ ಹಿಂದೆ ಕೂಡ ಇಲ್ಲಿ ಭಗವಾನ್ ಕಲ್ಕಿ ಮಂದಿರ ಇತ್ತು; ಆದರೆ ಬಾಬರನು ಯಾವ ರೀತಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಧ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿದನೋ ಅದೇ ರೀತಿ ಇಲ್ಲಿ ಕೂಡ ಕಲ್ಕಿ ಮಂದಿರ ಧ್ವಂಸಗೊಳಿಸಿ ಶಾಹಿ ಜಮಾ ಮಸೀದ್ ಕಟ್ಟಲಾಯಿತು. ಬಾಬರನು ಪಾನಿಪತದಲ್ಲಿ ಕಾಬುಲಿ ಬಾಗ ಮಸೀದಿ ಕಟ್ಟಿದನು. ಅಲ್ಲಿಯ ಯುದ್ಧದಲ್ಲಿ ಇಬ್ರಾಹಿಂ ಲೋಧಿ ಇವನು ವಿಜಯದ ನೆನಪಿಗಾಗಿ ಈ ಮಸೀದಿ ಕಟ್ಟಿದನು. ಈ ಮಸೀದಿಯ ಹೆಸರು ಅವನ ತನ್ನ ಪತ್ನಿ ಕಾಬುಲಿ ಬೇಗಂ ಹೆಸರು ಇಟ್ಟನು.

ಇತಿಹಾಸಕಾರರ ಪ್ರಕಾರ ಬಾಬರನ ಆದೇಶದ ಪ್ರಕಾರ ೧೫೨೮ ರಲ್ಲಿ ಅವನ ನಂಬಿಕಸ್ಥ ಮೀರ ಬೇಗ ಇವನು ಕಲ್ಕಿ ಮಂದಿರ ಧ್ವಂಸಗೊಳಿಸಿದನು ಮತ್ತು ಅಲ್ಲಿ ಮಂದಿರದ ಅವಶೇಷದ ಮೇಲೆ ಮಸೀದಿ ಕಟ್ಟಿದನು. ಇಂದಿಗೂ ಕಲ್ಕಿ ಮಂದಿರದ ಗೋಡೆಗಳ ಮೇಲೆ ಮತ್ತು ಇತರ ಅಂಶಗಳಲ್ಲಿ ಮಂದಿರದ ಅವಶೇಷ ಕಾಣುತ್ತದೆ.

೫ ಎಕರೆ ಪರಿಸರದಲ್ಲಿ ಕಲ್ಕಿ ಮಂದಿರ !

ಕಲ್ಕಿ ಪೀಠಾಧೀಶ್ವರ ಆಚಾರ್ಯ ಪ್ರಮೋದ ಕೃಷ್ಣಂ ಇವರು ಸಂಭಲನಲ್ಲಿ ಭವ್ಯ ಕಲ್ಕಿ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದರು. ಈ ಮಂದಿರ ಕೂಡ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಕಟ್ಟಿರುವಂತೆ ಗುಲಾಬಿ ಕಲ್ಲಿನಿಂದ ಕಟ್ಟುವರು. ಭಗವಾನ್ ಕಲ್ಕಿ ಮಂದಿರ ೧೧ ಅಡಿ ಎತ್ತರದ ಮೇಲೆ ಕಟ್ಟುವರು ಮತ್ತು ಶಿಖರದ ಎತ್ತರ ೧೦೮ ಅಡಿ ಎತ್ತರ ಆಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನ ದಾಳಿಕೋರರು ಎಲ್ಲೆಲ್ಲಿ ಮಂದಿರಗಳನ್ನು ನಾಶಗೊಳಿಸಿ ಮಸೀದಿಗಳು ಕಟ್ಟಿದ್ದಾರೆ ಅಲ್ಲಿಯ ಎಲ್ಲಾ ಸ್ಥಳಗಳು ಎಲ್ಲಿಯವರೆಗೆ ಮುಕ್ತವಾಗುವುದಿಲ್ಲ ಅಲ್ಲಿಯವರೆಗೆ ಹಿಂದುಗಳು ಹೋರಾಟ ಮುಂದುವರಿಸಬೇಕು !