ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಮದು ನೇಪಾಳಿ ಕಾಂಗ್ರೆಸ್ ಪಕ್ಷದ ಬೇಡಿಕೆ

ಕಾಠ್ಮಂಡು (ನೇಪಾಳ) – ನೇಪಾಳಿ ಕಾಂಗ್ರೆಸ ಪಕ್ಷದ ಸುಮಾರು 22 ಅಧಿಕಾರಿಗಳು ಮತ್ತೊಮ್ಮೆ ನೇಪಾಳದಲ್ಲಿ ಹಿಂದೂ ರಾಷ್ಟ್ರವನ್ನು ಮರುಸ್ಥಾಪಿಸುವ ವಿಚಾರದಲ್ಲಿದ್ದಾರೆ. ಪಕ್ಷದ ಇತರ ಪದಾಧಿಕಾರಿಗಳು ಈ ಕೋರಿಕೆಯನ್ನು ಪಕ್ಷದ ನಿಲುವಿನಲ್ಲಿ ಸೇರ್ಪಡೆಗೊಳಿಸಲು ವಿರೋಧಿಸುತ್ತಿದ್ದಾರೆ. ಮಾಜಿ ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ ಇವರು ನೇಪಾಳಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.

1. ನೇಪಾಳಿ ಕಾಂಗ್ರೆಸ್‌ನ ಸಾಮಾನ್ಯ ಸಮಿತಿ ಸಭೆಯು ಲಲಿತ್‌ಪುರದಲ್ಲಿ ನಡೆಯಲಿದೆ. ಹಿಂದೂ ರಾಷ್ಟ್ರದ ಮರುಸ್ಥಾಪನೆಯ ಪ್ರಸ್ತಾಪವನ್ನು 22 ಸದಸ್ಯರು ಮಂಡಿಸಿದ್ದು ಈ ಮನವಿಯ ಮೇಲೆ ಹಸ್ತಾಕ್ಷರ ಮಾಡಿದ್ದಾರೆ; ಆದರೆ ಪಕ್ಷದ ಕೇಂದ್ರ ಕಾರ್ಯಕಾರಿಣಿ ಇದನ್ನು ಒಪ್ಪಿಕೊಂಡಿಲ್ಲ. ಇದಕ್ಕೆ ಹಿಂದೂ ರಾಷ್ಟ್ರದ ಮರುಸ್ಥಾಪನೆಯನ್ನು ಬೆಂಬಲಿಸುವ ಸದಸ್ಯರು ಚರ್ಚಿಸಲು ಯೋಜಿಸುತ್ತಿದ್ದಾರೆ. ಇದನ್ನು ಅವರು ‘ವೈದಿಕ ಸನಾತನ ಹಿಂದೂ ರಾಷ್ಟ್ರ’ ಎಂದು ಕರೆಯುತ್ತಿದ್ದಾರೆ. ನೇಪಾಳದ ಶೇ. 81 ನಾಗರಿಕರು ಹಿಂದೂಗಳಾಗಿದ್ದಾರೆ.

2. ಕಾನೂನಿನ ಪ್ರಕಾರ, ಸಾಮಾನ್ಯ ಸಮಿತಿ ಸಭೆಯನ್ನು ಪ್ರತಿವರ್ಷ ಕರೆಯಬೇಕು; ಆದರೆ ವಿವಿಧ ಕಾರಣಗಳಿಂದ ಡಿಸೆಂಬರ 2021 ರಲ್ಲಿ 14ನೇ ಸರ್ವಸಾಧಾರಣ ಪರಿಷತ್ತಿನಿಂದ ಅದನ್ನು ಮುಂದೂಡಲಾಗಿದೆ. ನವೆಂಬರ್ 2023 ರಲ್ಲಿ ನೇಪಾಳದಲ್ಲಿ ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಲಾಯಿತು. ಕಾಠ್ಮಂಡೂ ಪೋಸ್ಟ್‌ನಲ್ಲಿನ ಲೇಖನದ ಪ್ರಕಾರ, ಮಾಜಿ ರಾಜ ಜ್ಞಾನೇಂದ್ರ ಶಾ ಕಡೆಗೆ ಜನರ ಒಲವು ಹೆಚ್ಚಾಗುತ್ತಿದೆ. ಒಟ್ಟಾರೆ ಇದರಿಂದ ಅವರಿಗೆ ಮತಗಳ ಲಾಭ ಸಿಗಬೇಕೆಂದು ಈಗ ಅನೇಕ ಪಕ್ಷಗಳು ಹಿಂದೂರಾಷ್ಟ್ರವನ್ನು ಬೆಂಬಲಿಸುತ್ತಿವೆ.