ನೆತನ್ಯಾಹು ಇವರು ಪ್ಯಾಲೆಸ್ಟೇನಿಯನ್ನರ ನರಸಂಹಾರ ಮಾಡುತ್ತಿದ್ದಾರೆ ! – ಬ್ರೆಜಿಲ್ ಅಧ್ಯಕ್ಷ

  • ಇಸ್ರೇಲ್-ಹಮಾಸ್ ಯುದ್ಧ

  • ನೆತನ್ಯಾಹು ಅವರನ್ನು ಹಿಟ್ಲರ್‌ಗೆ ಹೋಲಿಕೆ!

  • ಈ ಟಿಪ್ಪಣೆ ನಾಚಿಕೆಗೇಡು ! – ನೆತನ್ಯಾಹು

ಅದಿಸ ಅಬಾಬ (ಇಥಿಯೋಪಿಯಾ) – ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ನಾಲ್ಕೂವರೆ ತಿಂಗಳಾಗಿದೆ. ಇದರಲ್ಲಿ ಇದುವರೆಗೂ ೨೮ ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರೀಕರು ಸಾವನ್ನಪ್ಪಿದ್ದಾರೆ. ಈ ಕುರಿತು ಬ್ರೆಜಿಲ್ ಅಧ್ಯಕ್ಷ ಲುಲಾ ದ ಸಿಲ್ವಾ ಅವರು ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿದ್ದಾರೆ. ದ ಸಿಲ್ವಾ ಮಾತನಾಡುತ್ತಾ, ನೇತನ್ಯಾಹು ಗಾಜಾದಲ್ಲಿ ನರಸಂಹಾರ ಮಾಡುತ್ತಿದ್ದಾರೆ. ಹಿಟ್ಲರ್ ಯಹೂದಿಗಳ ಮೇಲೆ ಮಾಡಿದ್ದಂತೆ ಅವರು ಪ್ಯಾಲೆಸ್ಟೀನಿಯನ್ನರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ನ ಕ್ರಮವು ಯಹೂದಿಗಳ ‘ಹೋಲೋಕಾಸ್ಟ‘ ಹತ್ಯಾಕಾಂಡದಂತಿದೆ. ಇಥಿಯೋಪಿಯಾದ ರಾಜಧಾನಿ ಅದಿಸ ಅಬಾಬಾದಲ್ಲಿ ನಡೆದ ಆಫ್ರಿಕನ್ ಯೂನಿಯನ್ ಶೃಂಗಸಭೆಯಲ್ಲಿ ಲುಲಾ ಮೇಲಿನ ಹೇಳಿಕೆ ನೀಡಿದ್ದಾರೆ.

(ಸೌಜನ್ಯ – TRT World)

ಯಹೂದಿ ‘ಹೊಲೊಕಾಷ್ಟ’ದಲ್ಲಿ ೬ ವರ್ಷಗಳಲ್ಲಿ ಅಂದಾಜು ೬೦ ಲಕ್ಷಕ್ಕೂ ಹೆಚ್ಚು ಯಹೂದಿಗಳು ಸಾವನ್ನಪ್ಪಿದ್ದರು. ಇದರಲ್ಲಿ ೧೫ ಲಕ್ಷ ಮಕ್ಕಳು ಸೇರಿದ್ದಾರೆ.

ಇಸ್ರೇಲ್‌ನ ಪ್ರತ್ಯುತ್ತರ!

ಬೆಂಜಮಿನ್ ನೆತನ್ಯಾಹು ಬ್ರೆಜಿಲ್ ಅಧ್ಯಕ್ಷರ ಹೇಳಿಕೆಯನ್ನು ‘ನಾಚಿಕೆಗೇಡು‘ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಖಂಡಿಸಲು ಇಸ್ರೇಲ್ ಸರಕಾರ ಇಸ್ರೇಲ್‌ನಲ್ಲಿರುವ ಬ್ರೆಜಿಲ್ ರಾಯಭಾರಿಯನ್ನು ಕರೆಸಲಾಯಿತು. ಭಯೋತ್ಪಾದಕ ಸಂಘಟನೆ ಹಮಾಸ ನಾಶವಾಗುವವರೆಗೂ ಗಾಜಾ ಮೇಲಿನ ದಾಳಿ ನಿಲ್ಲುವುದಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ.