ಇಂತಹ ವಿಕೃತಿಯನ್ನು ಹದ್ದುಬಸ್ತಿನಲ್ಲಿಡಲು, ಸರಕಾರದಿಂದ ಶಿಕ್ಷೆಯಾಗುವವರೆಗೆ ಬೆಂಬೆತ್ತುವಿಕೆ ಮಾಡಿರಿ ! – ಹಿಂದೂ ಜನಜಾಗೃತಿ ಸಮಿತಿ
ಸೋನಾಯಿ (ಅಹಲ್ಯಾನಗರ ಜಿಲ್ಲೆ), ಫೆಬ್ರವರಿ 18 (ಸುದ್ದಿ) – ಕ್ರೈಸ್ತ ಧರ್ಮಗುರುಗಳು ಇಲ್ಲಿಯವರೆಗೆ ಒಟ್ಟು ಎಷ್ಟು ಜನರ ಮೇಲೆ ಲೈಂಗಿಕ ಬಲಾತ್ಕಾರ ಮಾಡಿದ್ದಾರೆ ಎನ್ನುವ ಅಂಕಿ-ಅಂಶಗಳನ್ನು ಕಂಡುಹಿಡಿಯಲು 2018 ರಲ್ಲಿ ಫ್ರಾನ್ಸಿನ ಕ್ಯಾಥೊಲಿಕ ಚರ್ಚ ಒಂದು ಆಯೋಗವನ್ನು ಸ್ಥಾಪಿಸಿತ್ತು. ಕಳೆದ 70 ವರ್ಷಗಳಲ್ಲಿ 2 ಲಕ್ಷ 16 ಸಾವಿರ ಮಕ್ಕಳ ಮೇಲೆ ಲೈಂಗಿಕ ಬಲಾತ್ಕಾರ ಮಾಡಿರುವುದು ಫ್ರಾನ್ಸ ಆಯೋಗದ ಗಮನಕ್ಕೆ ಬಂದಿದೆ. ಅಮೇರಿಕಾದಲ್ಲಿಯೂ ಕಳೆದ 50 ವರ್ಷಗಳಲ್ಲಿ 4 ಸಾವಿರ ಕ್ರೈಸ್ತ ಧರ್ಮಗುರುಗಳನ್ನು ಲೈಂಗಿಕ ಬಲಾತ್ಕಾರದ ಅಪರಾಧಕ್ಕಾಗಿ ಬಂಧಿಸಲಾಗಿತ್ತು. ನವಿ ಮುಂಬಯಿಯ ಚರ್ಚ್‌ನಲ್ಲಿ ಇಂತಹುದೇ ಕೃತ್ಯ ಕಂಡು ಬಂದಿತ್ತು. ಆಗ ಆ ಚರ್ಚ ಆಡಳಿತವು ಪ್ರಕರಣವನ್ನು ಮುಚ್ಚಿ ಹಾಕಿತ್ತು. ಇಂತಹ ಪ್ರಕರಣದ ಘಟನೆಗಳಿಗಾಗಿ ಹಿಂದೂಗಳು ಮೇಲಿಂದ ಮೇಲೆ ರಸ್ತೆಗಿಳಿಯಬೇಕಾಗುತ್ತಿರುವುದು ಬಹುದೊಡ್ಡ ದುರಂತವಾಗಿದೆ. ಆದ್ದರಿಂದ ಇಂತಹ ವಿಕೃತಿಗಳನ್ನು ತಡೆಯುವ ನಿಟ್ಟಿನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಬಲಾತ್ಕಾರ ಮಾಡುವವರಿಗೆ ಶಿಕ್ಷೆಯಾಗುವ ವರೆಗೆ ಬೆಂಬೆತ್ತುವಿಕೆ ಮಾಡಬೇಕು ಎಂದು ಇಲ್ಲಿಯ ಗ್ರಾಮಸ್ಥರಿಗೆ ಹಿಂದೂ ಜನಜಾಗೃತಿ ಸಮಿತಿಯ ಅಹಲ್ಯಾನಗರದ ಸಮನ್ವಯಕಿ ಕು. ಪ್ರತೀಕ್ಷಾ ಕೋರಗಾವಕರ ಇವರು ಮನವಿ ಮಾಡಿದರು. ಸೋನಯಿ-ಬೆಲ್ಹೆಕರವಾಡಿ ರಸ್ತೆಯಲ್ಲಿರುವ ಚರ್ಚನಲ್ಲಿ ಪಾಸ್ಟರ ಉತ್ತಮ ವೈರಾಗರ ಇವನು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಬಲಾತ್ಕಾರ ಮತ್ತು ಒರ್ವ ಮಹಿಳೆಯ ಮಾನಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಇದನ್ನು ಖಂಡಿಸಿ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವಕರು ರಾಹುರಿ ರಸ್ತೆಯ ಮೇಲೆ ಧರಣಿ ಕುಳಿತುಕೊಂಡು ಪ್ರತಿಭಟನಾ ಸಭೆ ನಡೆಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಅಂಧಶ್ರದ್ಧೆಯ ಹೆಸರಿನಲ್ಲಿ, ಆ ಬಾಲಕಿಯರನ್ನು ಹೆದರಿಸಿ ಚರ್ಚ್‌ನಲ್ಲಿ ಕರೆಸಲಾಯಿತು. ಈ ವಿಷಯದಲ್ಲಿ ಅಂಧಶ್ರದ್ಧೆ ನಿರ್ಮೂಲನ ಕಾನೂನು ಅನ್ವಯವಾಗುವುದಿಲ್ಲವೇ ? ಎಂದು ಕು. ಪ್ರತೀಕ್ಷಾ ಇವರು ಪ್ರಶ್ನಿಸಿದರು. ಈ ನಿಷೇಧ ಸಭೆಯಲ್ಲಿ `ರಾಷ್ಟ್ರೀಯ ಶ್ರೀರಾಮ ಸಂಘ’ದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಸಾಗರ ಬೇಗ ಮತ್ತು ಶ್ರೀ. ಸೋಮನಾಥ ಝಾಡೆ ಇವರೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಗ್ರಾಮದ ಕ್ರೈಸ್ತರಿಂದ ಆರೋಪಿಗೆ ಬೆಂಬಲ !
ಗ್ರಾಮದ ಕ್ರೈಸ್ತರು ತಮ್ಮ ‘ವಾಟ್ಸಅಪ್ ಸ್ಟೇಟಸ್’ನಲ್ಲಿ ಆರೋಪಿಯನ್ನು ರಕ್ಷಿಸಲು ಬರಹವನ್ನು ಇಟ್ಟುಕೊಂಡಿದ್ದರು. `ಎಲ್ಲ ಕ್ರೈಸ್ತ ಸಹೋದರ-ಸಹೋದರಿಯರಲ್ಲಿ ವಿನಂತಿ, ಸೊನಾಯಿ ಗ್ರಾಮದ ದೇವನ ಅನಭಿಷಿಕ್ತ ಸೇವಕನನ್ನು ಸುಳ್ಳು ಆರೋಪ ಮಾಡಿ ಕಾರಾಗೃಹಕ್ಕೆ ತಳ್ಳಲಾಗಿದೆ. ನಾವೆಲ್ಲರೂ ಅವರಿಗಾಗಿ ಪ್ರಾರ್ಥನೆ ಮತ್ತು ಉಪವಾಸವನ್ನು ಮಾಡೋಣ’, ಎಂದು ಇತ್ತು. ಆ ಕ್ರೈಸ್ತ ಪಾಸ್ಟರಗಾಗಿ ಮರ್ಸಿಡಿಸ, ಆಡಿ, ಜಾಗ್ವಾರ ಮುಂತಾದ ವಾಹನಗಳಿಂದ ನ್ಯಾಯಾಲಯದಲ್ಲಿ ಸುಮಾರು 150 ಜನರು ಸೇರಿದ್ದರು. ಅವರು ಅಕ್ಕಪಕ್ಕದ ಜಿಲ್ಲೆಯಿಂದ ಬಂದಿದ್ದರು. (ಕ್ರೈಸ್ತರ ಚಾಲಾಕಿತನ – ಸಂಪಾದಕರು)
ಸಂಪಾದಕೀಯ ನಿಲುವುಕ್ರೈಸ್ತರ ಚರ್ಚ್‌ಗಳ ನೈಜ ರೂಪವನ್ನು ತಿಳಿಯಿರಿ ! ಇಂತಹ ಘಟನೆಗಳು ಭಾರತದಲ್ಲಿ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ ! ಹಿಂದೂಗಳ ಸಂತರ ಮೇಲೆ ಆಧಾರರಹಿತ ಆರೋಪ ಮಾಡಿದ ಬಳಿಕವೂ ಹಿಂದೂಧರ್ಮದ ಮೇಲೆ ಕೆಸರು ಎರಚುವ ಹಿಂದೂದ್ವೇಷಿ ಪ್ರಸಾರಮಾಧ್ಯಮಗಳು ಇಂತಹ ಪ್ರಕರಣದಲ್ಲಿ ಮಾತ್ರ ಕುರುಡರಂತೆ ಕುಳಿತುಕೊಳ್ಳುತ್ತಾರೆ. ಈಗ ಈ ಘಟನೆಯ ಬಗ್ಗೆ ಅವರನ್ನು ಪ್ರಶ್ನಿಸಬೇಕು ! |