ಶಾಹಜಹಾಪುರ(ಉತ್ತರಪ್ರದೇಶ)ದ ಘಟನೆ !
ಶಾಹಜಹಾಪುರ (ಉತ್ತರಪ್ರದೇಶ) – ಸಫೋರಾ ಗ್ರಾಮದ ವಿನೋದ ಸಿಂಹರವರ ಮಗಳಾದ ೧೩ ವರ್ಷದ ಪೂಜಾಳ ಕನಸಿನಲ್ಲಿ ಭಗವಾನ ಶ್ರೀಕೃಷ್ಣರು ದರ್ಶನ ನೀಡಿದರು. ಹಾಗೆಯೇ ಒಂದು ದರ್ಗಾದ ಭೂಮಿಯಲ್ಲಿ ದೇವರ ಮೂರ್ತಿಯನ್ನು ಹುಗಿದಿಟ್ಟಿರುವ ಬಗ್ಗೆ ಹೇಳಿದರು. ಅದರಂತೆಯೇ ಪೂಜಾಳ ಕುಟುಂಬದವರು ಆ ಜಾಗದಲ್ಲಿ ಅಗೆದಾಗ ಭಗವಾನ ಶ್ರೀ ಕೃಷ್ಣನ ಮೂರ್ತಿ ದೊರೆಯಿತು.
(ಸೌಜನ್ಯ – sanatan samachar)
೧. ಪೂಜಾಳು ಕುಟುಂಬದವರಿಗೆ ಭಗವಾನ್ ಶ್ರೀ ಕೃಷ್ಣನು ಕನಸಿನಲ್ಲಿ ಮೂರ್ತಿಯ ಬಗ್ಗೆ ಮಾಹಿತಿ ನೀಡಿರುವುದರ ಕುರಿತು ಹೇಳಿದಾಗ, ಅವರು ಅದರ ಕಡೆಗೆ ನಿರ್ಲಕ್ಷ ಮಾಡಿದರು. ಇದರಿಂದ ಪೂಜಾಳು ೧೦ ದಿನಗಳ ವರೆಗೆ ಆಹಾರ-ನೀರು ತ್ಯಜಿಸಿದಳು. ಕೊನೆಗೆ ಮನೆಯವರು ಪೂಜಾಳ ಮಾತನ್ನು ಒಪ್ಪಿದರು.
೨. ಪೂಜಾಳ ಮಾತಿನ ಮೇಲೆ ವಿಶ್ವಾಸವಿಟ್ಟು ಆಕೆಯ ತಂದೆಯಾದ ವಿನೋದ ಸಿಂಹರವರು ಪೂಜಾಳನ್ನು ಕರೆದುಕೊಂಡು ಗ್ರಾಮಸ್ಥರ ಜೊತೆಗೆ ದರ್ಗಾದ ಬಳಿ ತಲುಪಿದರು. ಪೂಜಾ ಕನಸಿನಲ್ಲಿ ಮೂರ್ತಿಯನ್ನು ನೋಡಿದ್ದ ಜಾಗದ ಬಳಿ ಗೆರೆ ಎಳೆದಳು. ಆ ಜಾಗವು ದರ್ಗಾದಿಂದ ೩೦ಮೀಟರ್ ಅಂತರದಲ್ಲಿದೆ. ಮೊದಲಿಗೆ ಪೂಜೆ ನಡೆಸಿ ಅಲ್ಲಿ ಅಗೆಯುವ ಕೆಲಸವನ್ನು ಆರಂಭಿಸಲಾಯಿತು. ಈ ಬಗ್ಗೆ ಮಾಹಿತಿ ದೊರೆಯುತ್ತಲೇ ದರ್ಗಾದ ವ್ಯವಸ್ಥಾಪಕರಾದ ಮಹಮ್ಮದ ಆಮೀರ ಅಲಿಯಾಸ್ ಗುಡ್ಡು ಮಿಯಾರವರು ಅಲ್ಲಿಗೆ ತಲುಪಿದರು. ಅವರು ಅಗೆಯುವುದನ್ನು ವಿರೋಧಿಸಿದರು. ಈ ಸಮಯದಲ್ಲಿ ಬಹಳಷ್ಟು ಸಮಯ ವಾದ-ವಿವಾದ ನಡೆಯಿತು; ಆದರೂ ಅಗೆಯುವ ಕೆಲಸ ಮುಂದುವರೆದಿತ್ತು. ಸುಮಾರು ೩ ಅಡಿ ಅಗೆದ ನಂತರ ೧ ಅಡಿ ಎತ್ತರದ ಪ್ರಾಚೀನ ಶ್ರೀಕೃಷ್ಣನ ಮೂರ್ತಿ ದೊರೆಯಿತು.
೩. ವಿನೋದ ಸಿಂಹರವರು ದರ್ಗಾದಿಂದ ೨.೫ ಕಿಮೀ. ಅಂತರ ದೂರದಲ್ಲಿರುವ ತಮ್ಮ ಹೊಲದಲ್ಲಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಅನಂತರ ಜನರು ಈ ಮೂರ್ತಿಯ ಪೂಜೆ ಮಾಡಲು ಆರಂಭಿಸಿದರು. ಅಲ್ಲಿ ದರ್ಶನಕ್ಕಾಗಿ ಜನ ಸೇರಲು ಆರಂಭವಾದ್ದರಿಂದ ಸುರಕ್ಷೆಯ ದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ಕೂಡ ಇಡಲಾಗಿದೆ. ಜಿಲ್ಲಾ ಉಪದಂಡಾಧಿಕಾರಿಗಳಾದ ಅಂಜಲಿ ಗಂಗವಾರ ರವರು, ಈ ಮೂರ್ತಿಯ ಪುರಾತತ್ವ ಮಹತ್ವದ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
೪. ಎಸ್. ಎಸ್. ಕಾಲೇಜಿನ ಇತಿಹಾಸ ವಿಭಾಗದ ಅಧ್ಯಕ್ಷರಾದ ವಿಕಾಸ ಖುರಾನರವರು, ಈ ತಾಮ್ರದ ಮೂರ್ತಿಯು ಗುಪ್ತರ ಕಾಲದ್ದು ಎಂಬಂತೆ ಕಾಣುತ್ತದೆ. ಇಂತಹ ಮೂರ್ತಿಗಳನ್ನು ೭ ನೆಯ ಶತಮಾನದಲ್ಲಿ ತಯಾರಿಸುತ್ತಿದ್ದರು. ಪುರಾತತ್ವ ಇಲಾಖೆಯ ಪರಿಶೀಲನೆಯ ನಂತರ ಎಲ್ಲವೂ ಸ್ಪಷ್ಟವಾಗುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಈ ದರ್ಗಾದ ಜಾಗದಲ್ಲಿ ಹಿಂದೆ ಹಿಂದೂಗಳ ದೇವಸ್ಥಾನವಿತ್ತೆ ? ಈಗ ಇದರ ಪರಿಶೀಲನೆ ನಡೆಸುವುದೂ ಆವಶ್ಯಕವಾಗಿದೆ. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ನೇತೃತ್ವ ವಹಿಸಬೇಕು ! |