ಜರ್ಮನ ನಾಗರಿಕರಲ್ಲದವರನ್ನು ಜರ್ಮನಿಯಿಂದ ಹೊರಹಾಕಲು ನಾಜಿ ವಿಚಾರವಾದಿ ಬೆಂಬಲಿಗರಿಂದ ಪ್ರಯತ್ನ !

  • ಒಂದು ರಾಜಕೀಯ ಪಕ್ಷದ ಬೆಂಬಲ

  • ಸಾರ್ವಜನಿಕರಿಂದ ವಿರೋಧ

ಬಾನ್ (ಜರ್ಮನಿ) – ಎರಡನೆಯ ಮಹಾಯುದ್ಧದಲ್ಲಿ, ಮಿತ್ರರಾಷ್ಟ್ರಗಳು ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ನಾಜಿ ಸೈನ್ಯವನ್ನು ಸೋಲಿಸಿದರು. ಜರ್ಮನಿಯಿಂದ ನಾಜಿವಾದವನ್ನು ಬುಡಸಮೇತ ನಷ್ಟಗೊಳಿಸಿದರು; ಆದರೆ ಇಂದಿಗೂ ಅಲ್ಲಿ ಈ ವಿಚಾರಗಳ ಜನರು ಅಸ್ತಿತ್ವದಲ್ಲಿದ್ದಾರೆ. ಜರ್ಮನಿಯಲ್ಲಿ ಎರಡನೇಯ ದೊಡ್ಡ ಪಕ್ಷವಾಗಿರುವ `ಆಲ್ಟರನೇಟಿವ್ ಫಾರ ಜರ್ಮನಿ’ ಯು ( ಎ.ಎಫ್.ಡಿ.) ದೇಶದಲ್ಲಿರುವ ನಾಜಿ ಬೆಂಬಲಿಗರೊಂದಿಗೆ ಸೇರಿ ಜರ್ಮನಿಯೇತರ ನಾಗರಿಕರನ್ನು ಜರ್ಮನಿಯಿಂದ ಹೊರಹಾಕಲು ಸಂಚು ರೂಪಿಸಿದೆ. ‘ಕರೆಕ್ಟಿವ್’ ಈ ಸಂಘಟನೆಯು ನೀಡಿದ ಮಾಹಿತಿಯನುಸಾರ ಎ.ಎಫ್.ಡಿ. ಮತ್ತು ನವ-ನಾಝಿ ಬೆಂಬಲಿಗರ ಒಂದು ಸಭೆ ನಡೆಯಿತು. ಈ ಸಭೆಯಲ್ಲಿ ಜರ್ಮನಿಯ ನಾಗರಿಕರಲ್ಲದವರನ್ನು ದೇಶದಿಂದ ಹೊರಹಾಕುವ ಅಂಶದ ಬಗ್ಗೆ ಚರ್ಚಿಸಲಾಯಿತು. ಈ ಚರ್ಚೆಯನುಸಾರ, ಜರ್ಮನಿಯಲ್ಲಿ ವಾಸಿಸುತ್ತಿರುವ ಮತ್ತು ಅನುಮತಿ ಪಡೆದು ವಾಸಿಸುತ್ತಿರುವ ಎಲ್ಲರನ್ನು ಅವರ ತಾಯ್ನಾಡಿಗೆ ಕಳುಹಿಸುವ ವಿಚಾರ ಮಾಡಲಾಯಿತು. ಈ ಸಭೆಯಲ್ಲಿ ಉನ್ನತ ಅಧಿಕಾರಿಗಳು, ಉದ್ಯಮಿಗಳು ಮುಂತಾದವರು ಭಾಗವಹಿಸಿದ್ದರು.

ಜನರ ವಿರೋಧ!

ಎ.ಎಫ್.ಡಿ. ಪಕ್ಷದ ಸಭೆಯಲ್ಲಿ ಜರ್ಮನಿಯೇತರ ಜನರನ್ನು ದೇಶದ ಹೊರಗೆ ಹಾಕಲು ಚರ್ಚೆ ನಡೆದಿರುವ ಸುದ್ದಿ ಪ್ರಸಾರವಾದ ಬಳಿಕ ಜರ್ಮನಿಯ ಅನೇಕ ನಗರಗಳಲ್ಲಿ ಜನರು ಪ್ರತಿಭಟನೆಯಲ್ಲಿ ಬೀದಿಗಿಳಿದರು. ಜನರ ಹೇಳಿಕೆಯಂತೆ, ಈ ಸಭೆಯು ಪ್ರಜಾಪ್ರಭುತ್ವ ಮತ್ತು ಘಟನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಜನರು ‘ಎ.ಎಫ್.ಡಿ. ಪಕ್ಷವು ಜರ್ಮನಿಯ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಎಂದು ಹೇಳಲಾಗುತ್ತಿದೆ. ಜರ್ಮನಿಯ ಸಂವಿಧಾನದಲ್ಲಿ ವ್ಯಕ್ತಿಯ ಮೂಲ, ವಂಶ, ಭಾಷೆ ಅಥವಾ ಅವನ ಮೂಲ ದೇಶ ಈ ಅಂಶವನ್ನು ಆಧರಿಸಿ ತಾರತಮ್ಯ ಮಾಡಲಾಗುವುದಿಲ್ಲ.

ಎ.ಎಫ್.ಡಿ. ಪಕ್ಷವನ್ನು ನಿಷೇಧಿಸುವಂತೆ ಬೇಡಿಕೆ.

ಈ ಘಟನೆಯ ಬಳಿಕ ಎ.ಎಫ್.ಡಿ. ಪಕ್ಷದ ಮೇಲೆ ನಿಷೇಧ ಹೇರುವ ಚರ್ಚೆ ಆರಂಭವಾಗಿದೆ. ಗೃಹ ಸಚಿವ ಥಾಮಸ್ ಸ್ಟ್ರಾಬಲ್ ಮಾತನಾಡಿ, ಭದ್ರತಾ ಅಧಿಕಾರಿಗಳಿಗೆ ಪಕ್ಷವನ್ನು ನಿಷೇಧಿಸಲು ಸಾಕಷ್ಟು ಪುರಾವೆಗಳು ಸಿಕ್ಕಿದರೆ, ಅದರ ವಿಚಾರವನ್ನು ಮಾಡಬಹುದು ಎಂದು ಹೇಳಿದ್ದಾರೆ. ಜರ್ಮನಿಯಲ್ಲಿ, ಫೆಡರಲ್ ಸಂವಿಧಾನದಲ್ಲಿ ನ್ಯಾಯಾಲಯ ಮಾತ್ರ ರಾಜಕೀಯ ಪಕ್ಷದ ಮೇಲೆ ನಿಷೇಧ ಹೇರಬಹುದಾಗಿದೆ.

1. ‘ಸ್ಥಳಾಂತರಗೊಂಡ ಅಥವಾ ವಿದೇಶಿ ಮೂಲ ವಂಶದ ನಾಗರಿಕರಿಗೆ ಹೊರಹಾಕುವ ಯೋಜನೆಯು ಜರ್ಮನಿಯ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ.’ – ಓಲಾಫ್ ಶುಲ್ಟ್ಜ್, ಚಾನ್ಸಲರ್ (ರಾಷ್ಟ್ರಪತಿ) ಜರ್ಮನಿ.

2. ‘ದೇಶದಿಂದ ಲಕ್ಷಾಂತರ ಜನರನ್ನು ಹೊರಹಾಕುವ ಯೋಜನೆಯು ಜರ್ಮನಿಯ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು (ಹಿಟ್ಲರ್ ನಡೆಸಿದ ಜ್ಯೂ ಜನರ ನರಮೇಧ) ನೆನಪಿಸುತ್ತದೆ.’ – ಕ್ರಿಶ್ಚಿಯನ್ ಡ್ಯೂರ, ಸಂಸದ, ಡೆಮಾಕ್ರಟಿಕ್ ಪಾರ್ಟಿ.