ರಾಷ್ಟ್ರೀಯವಾದಿ ಕಾಂಗ್ರೆಸ್ ನ ಶಾಸಕರ ಅನರ್ಹತೆ ಪ್ರಕರಣ
ಮುಂಬಯಿ – ಅಜಿತ್ ಪವಾರ್ ಗುಂಪು 53 ಶಾಸಕರ ಪೈಕಿ 41 ಶಾಸಕರ ಬೆಂಬಲವನ್ನು ಹೊಂದಿದೆ. ಶರದ್ ಪವಾರ್ ಗುಂಪು ಇದನ್ನು ಆಮಂತ್ರಿಸಲಿಲ್ಲಾ ಆದ್ದರಿಂದ, ಎರಡೂ ಗುಂಪುಗಳ ಸಂಖ್ಯಾ ಬಲವು ಸ್ಪಷ್ಟವಾಗಿದೆ. ಅದರಂತೆ ಅಜಿತ್ ಪವಾರ್ ಗುಂಪಿಗೆ ಶಾಸಕಾಂಗ ಪಕ್ಷದ ಬೆಂಬಲವಿದೆ. ವಿಧಾನಮಂಡಲ ಪಕ್ಷದ ಸಂಖ್ಯಾ ಬಲಕ್ಕನುಸಾರ ಅಜಿತ್ ಪವಾರ್ ಗುಂಪು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎಂದು ವಿಧಾನಸಭೆ ಅಧ್ಯಕ್ಷ ರಾಹುಲ್ ನಾರ್ವೇಕರ್ ಹೇಳಿದ್ದಾರೆ. ‘ರಾಷ್ಟ್ರೀಯವಾದಿ ಕಾಂಗ್ರೆಸ್ ನ ಅಧ್ಯಕ್ಷ ಯಾರು?, ಇದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ. ಶಾಸಕಾಂಗ ಪಕ್ಷದಲ್ಲಿ ಯಾರಿಗೆ ಬಹುಮತವಿದೆ ಇದಕ್ಕೆ ಈ ಮಾನದಂಡ ಮುಖ್ಯ’ ಎಂದು ಅವರು ಈ ಸಮಯದಲ್ಲಿ ಹೇಳಿದರು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಇವರು 5 ಅರ್ಜಿಗಳ ಕುರಿತು ನಿರ್ಧಾರವನ್ನು ನೀಡಿದರು.
(ಸೌಜನ್ಯ – ABP Maza)
ಶರದ್ ಪವಾರ್ ಗುಂಪಿನಿಂದ 3 ಅರ್ಜಿಗಳು ಮತ್ತು ಅಜಿತ್ ಪವಾರ್ ಗುಂಪಿನಿಂದ 2 ಅರ್ಜಿಗಳನ್ನು ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಪಕ್ಷದ ಸಂವಿಧಾನ, ಪಕ್ಷದ ನಾಯಕತ್ವ ಮತ್ತು ಪಕ್ಷದ ಶಾಸಕಾಂಗ ಗುಂಪಿನ ಮೇಲೆ ಈ ಸಂದರ್ಭದಲ್ಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.