ಆಂದೇಕರ ಗುಂಪಿನ ಕೈದಿಗಳಿಂದ ಪುಣೆಯ ಯೆರವಡಾ ಮಧ್ಯವರ್ತಿ ಕಾರಾಗೃಹದ ಜೈಲು ಅಧಿಕಾರಿಯ ಥಳಿತ !

ಪುಣೆ – ಯೆರವಡಾ ಮಧ್ಯವರ್ತಿ ಕಾರಾಗೃಹದಲ್ಲಿ ಗಂಭೀರ ಅಪರಾಧಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕೈದಿಗಳ ಗುಂಪು ಶೇರಖಾನ ಪಠಾಣ ಎಂಬ ಹೆಸರಿನ ಜೈಲು ಅಧಿಕಾರಿಯು ಕರ್ತವ್ಯ ನಿರ್ವಹಿಸುತ್ತಿರುವಾಗ ಮುಷ್ಟಿಯಿಂದ, ಕಾಲಿನಿಂದ ಒದ್ದು ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೊಡೆದಾಟ ಮಾಡಿರುವ ಕೈದಿಗಳು ಕುಖ್ಯಾತ ಅಪರಾಧಿ ಆಂದೇಕರ ಗುಂಪಿನ ಸದಸ್ಯರಾಗಿರುವುದು ತಿಳಿದಿದೆ. ಕೆಲವು ಕೈದಿಗಳು ಕಾರ್ಯಾಲಯದಲ್ಲಿದ್ದ ಕುರ್ಚಿಗಳನ್ನು ಎತ್ತಿ ಆ ಅಧಿಕಾರಿಯ ಮೇಲೆ ಎಸೆದು ಥಳಿಸಲು ಪ್ರಯತ್ನಿಸಿದರು; ಆದರೆ ಅಲ್ಲಿದ್ದ ಇತರ ಕೈದಿಗಳು ಅವರನ್ನು ತಡೆದರು. ಕೈದಿಗಳ ಥಳಿತದಲ್ಲಿ ಅಧಿಕಾರಿಯ ಕಣ್ಣಿಗೆ ಗಾಯವಾಗಿದ್ದು, ಎಡಗೈಯ ಮಣಿಕಟ್ಟಿನ ಎಲುಬು ಮುರಿದಿದೆ(ಫ್ರ್ಯಾಕ್ಚರ). ಜೈಲು ಅಧಿಕಾರಿಯು ಕೆಟ್ಟ ಶಬ್ದಗಳಿಂದ ಬೈದಿರುವ ಬಗ್ಗೆ ಕೈದಿಗಳು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ವಿಕಿ ಕಾಂಬಳೆ, ಪ್ರಕಾಶ ರೇಣುಸೆ ಮತ್ತು ಇನ್ನೂ 10 ಕೈದಿಗಳ ವಿರುದ್ಧ ಯೆರವಾಡಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸುವ ಕೆಲಸ ನಡೆಯುತ್ತಿದೆ.

ಆಡಳಿತವು ತಕ್ಷಣ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಹೊಡದಾಡಿದ ಕೈದಿಗಳನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ಯೆರವಡಾ ಪೊಲೀಸರು ಜೈಲಿಗೆ ಹೋಗಿ ಘಟನೆಯ ಸವಿಸ್ತಾರ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಳೆದ ಕೆಲವು ದಿನಗಳಿಂದ ಪುಣೆಯಲ್ಲಿ ಅಪರಾಧ ಪ್ರಕರಣಗಳು ಉತ್ತುಂಗಕ್ಕೆರಿವೆ. ಇದನ್ನು ಗಮನಿಸಿದಾಗ ಅಪರಾಧಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿರುವುದು ಸ್ಪಷ್ಟವಾಗುತ್ತಿದೆ. ಇದು ಪೊಲೀಸರಿಗೆ ನಾಚಿಕೆಗೇಡು !