ರಂಗಾರೆಡ್ಡಿ (ತೆಲಂಗಾಣ)ಯಲ್ಲಿ ರಸ್ತೆ ಅಗಲೀಕರಣಕ್ಕೆ ಚರ್ಚ್ ನಿಂದ ವಿರೋಧ : ಚರ್ಚನಿಂದ ಗ್ರಾಮಸ್ಥರ ಮೇಲೆ ದಾಳಿ

  • ಕಲ್ಲು ಮತ್ತು ಇಟ್ಟಿಗೆಗಳಿಂದ ದಾಳಿ !

  • ಗ್ರಾಮಸ್ಥರಿಂದಲೂ ಪ್ರತ್ಯುತ್ತರ ! 

  • 18 ಜನರಿಗೆ ಗಾಯ, 11 ಜನರ ಬಂಧನ ! 

  • ನಿಷೇಧಾಜ್ಞೆ ಜಾರಿ! 

ಭಾಗ್ಯನಗರ (ತೆಲಂಗಾಣ) – ಭಾಗ್ಯನಗರ ಜಿಲ್ಲೆಯ ಸಮಿಪವಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿ ಫೆಬ್ರವರಿ 13 ರಂದು ನಡೆದ ಘಟನೆಯಾಗಿದ್ದು, ಇಲ್ಲಿಯ ಜನವಾಡಾ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಕಾರ್ಯ ನಡೆಯುತ್ತಿತ್ತು. ಅದಕ್ಕೆ ಅಲ್ಲಿಯ ಮೆಥೊಡಿಸ್ಟ ಚರ್ಚನ ಜನರು ವಿರೋಧಿಸಿದರು. ಈ ಸಮಯದಲ್ಲಿ ಚರ್ಚನಿಂದ ಗ್ರಾಮಸ್ಥರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ದಾಳಿ ನಡೆಸಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಾ, ಚರ್ಚ ಧ್ವಂಸಗೊಳಿಸಿರು. ಈ ದಾಳಿಯಲ್ಲಿ ಎರಡೂ ಕಡೆಯ ಒಟ್ಟು 18 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಂಡು, ಅಲ್ಲಿ ಒಂದು ವಾರದ ವರೆಗೆ ನಿಷೇಧಾಘ್ನೆ ಜಾರಿಗೊಳಿಸಲಾಗಿದೆ. ಈ ವಿಷಯ ಚರ್ಚೆಗೆ ಸಂಬಂಧಿಸಿರುವುದರಿಂದ ರಾಜಕೀಯ ಪಕ್ಷಗಳು ಚರ್ಚಗೆ ಬೆಂಬಲ ನೀಡಲು ಪ್ರಾರಂಭಿಸಿವೆ.

ದಾಳಿಯಲ್ಲಿ ಚರ್ಚ್‌ನ ಶಿಲುಬೆ ಧ್ವಂಸ !

ಕಾನೂನು ಮತ್ತು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸುವುದು ತಪ್ಪು; ಆದರೆ ಯಾವ ಕ್ರೈಸ್ತರು `ಹಿಂದೂ ದೇವತೆಗಳಿಗೆ, ಅವರ ದೇವಸ್ಥಾನಗಳನ್ನೂ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ’ ಎನ್ನುವಂತಹ ಹೇಳಿಕೆ ನೀಡಿ ಹಿಂದೂಗಳ ಮನಸ್ಸು ಪರಿವರ್ತಿಸಲು ನೋಡುತ್ತಾರೆ. ಈಗ ಅವರಿಗೆ ಯಾರಾದರೂ `ಈ ಪ್ರಕರಣದ ಸಮಯದಲ್ಲಿ ಏಸುವಿನಿಂದ ಚರ್ಚ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲವೇ?’ ಎನ್ನುವ ಪ್ರಶ್ನೆಯನ್ನು ಕೇಳಿದರೆ, ನಡೆಯುವುದೇ ?

ಗ್ರಾಮಸ್ಥರು ನಡೆಸಿರುವ ದಾಳಿಯಲ್ಲಿ ಚರ್ಚನ ಶಿಲುಬೆಯನ್ನು ಮುರಿಯಲಾಗಿದೆಯೆಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಚರ್ಚ ನೀಡಿರುವ ದೂರಿನ ಆಧಾರದಲ್ಲಿ `ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ’ ಹಾಗೂ ಇತರೆ ಕಾನೂನುಗಳ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ. (ಕ್ರೈಸ್ತರು ಹಿಂದೂಗಳ ಮತಾಂತರ ಮಾಡಿದ ಬಳಿಕವೂ ಅವರ ದಾಖಲೆಗಳಲ್ಲಿ ಜಾತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಇಂತಹ ದಾಳಿಯ ಸಮಯದಲ್ಲಿ ಕ್ರೈಸ್ತರಾಗಿರುವವರನ್ನು ರಕ್ಷಿಸಲು ಈ ಮಾರ್ಗವನ್ನು ಕಂಡುಕೊಳ್ಳಲಾಗಿದೆಯೆನ್ನುವುದು ಇದರಿಂದ ಗಮನಕ್ಕೆ ಬರುತ್ತದೆ- ಸಂಪಾದಕರು)  

ಹಿಂದುಳಿದ ವರ್ಗದ ಹಿಂದೂಗಳನ್ನು ದ್ವೇಷಿಸುವ ಬಸಪ !

ತೆಲಂಗಾಣ ಬಸಪ ಅಧ್ಯಕ್ಷ ಡಾ. ಆರ್.ಎಸ್. ಪ್ರವೀಣ ಕುಮಾರ ಅವರು ಫೆಬ್ರುವರಿ 14ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರು 200ಕ್ಕೂ ಹೆಚ್ಚು ಮಂದಿ ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು. ಚರ್ಚ್‌ನಲ್ಲಿದ್ದವರಿಗೆ ಕಬ್ಬಿಣದ ಸಲಾಕೆ ಮತ್ತು ಕೋಲುಗಳಿಂದ ಥಳಿಸಿದ್ದಾರೆ. (ಗ್ರಾಮಸ್ಥರೂ ಕೂಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೂ, ಬಸಪ ಈ ಪ್ರಕರಣದಲ್ಲಿ ಕ್ರೈಸ್ತರನ್ನು ಬೆಂಬಲಿಸುತ್ತಿದ್ದಾರೆ. ಇದು ಬಸಪ ಪಕ್ಷದವರ ಕ್ರಿಶ್ಚಿಯನ್ನರ ಪ್ರೀತಿ ಮತ್ತು ಹಿಂದುಳಿದ ವರ್ಗದ ಹಿಂದೂಗಳ ಮೇಲಿರುವ ದ್ವೇಷವೇ ಪ್ರಕಟವಾಗುತ್ತದೆಯೆನ್ನುವುದನ್ನು ಗಮನಿಸಬೇಕಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಇದು ಚರ್ಚ್‌ನ ನಿಜ ರೂಪ ! ಸಮಾಜ ಸೇವೆಯ ಹೆಸರಿನಲ್ಲಿ ಕ್ರೈಸ್ತರು ಏನು ಮಾಡುತ್ತಾರೆ?, ಎನ್ನುವುದು ಎಲ್ಲರಿಗೂ ಜಗಜ್ಜಾಹೀರಾಗಿದೆ. ಈಗ ಇಂತಹ ಘಟನೆಗಳಿಂದ ಚರ್ಚಗಳೂ ಮಸೀದಿಯಂತೆ ಕಲ್ಲು ಸಂಗ್ರಹಿಸಿಡುತ್ತದೆ ಮತ್ತು ಸಮಯ ಬಂದಾಗ ಹಿಂದೂಗಳ ಮೇಲೆ ದಾಳಿ ನಡೆಸುತ್ತವೆ ಎನ್ನುವುದನ್ನು ಗಮನಿಸಿ

‘ಬಿಬಿಸಿ’, ‘ದಿ ನ್ಯೂಯಾರ್ಕ್ ಟೈಮ್ಸ್’ ಮುಂತಾದ ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಹಾಗೆಯೇ ‘ಆಮ್ನೆಸ್ಟಿ ಇಂಟರ್‌ನ್ಯಾಶನಲ್’, ‘ಯುರೋಪಿಯನ್ ಯೂನಿಯನ್’ ಇತ್ಯಾದಿ ಸಂಘಟನೆಗಳು ಈ ಬಗ್ಗೆ ಈಗ ಭಾರತವನ್ನು ಪ್ರಶ್ನಿಸಿದರೆ ಆಶ್ಚರ್ಯಪಡಬಾರದು !