Karnataka Congress Muslims Apeasement : ರಾಜ್ಯದಲ್ಲಿರುವ 416 ವಕ್ಫ್ ಆಸ್ತಿಗಳ ರಕ್ಷಣೆಗೆ ಸರಕಾರದಿಂದ 31.84 ಕೋಟಿ ಅನುದಾನ !

ಭಾಜಪದಿಂದ ವಿರೋಧ !

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು – ರಾಜ್ಯದ ಒಟ್ಟು 416 ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಬೇಲಿಯನ್ನು ನಿರ್ಮಿಸಲು ಕಾಂಗ್ರೆಸ್ ಸರಕಾರ ಒಟ್ಟು ರೂ. 31.84 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದೆ. ಇದಕ್ಕೆ ಭಾಜಪ ಕಿಡಿ ಕಾರಿದೆ. ಭಾಜಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, ರಾಜ್ಯದಲ್ಲಿ ಬರಗಾಲವಿದೆ. ಆದ್ದರಿಂದ ಕೇಂದ್ರ ಸರಕಾರ ನೆರವು ನೀಡಬೇಕೆಂದು ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಮೂಲದಲ್ಲಿ ರಾಜ್ಯ ಸರಕಾರದ ಬಳಿ ಹಣದ ಸಮರ್ಪಕ ವಿನಿಯೋಗಿಸುವ ನಿಯೋಜನೆಯಿಲ್ಲವೆಂದೇ ಹೇಳಬೇಕಾಗುವುದು. ಬರದಿಂದ ಕಂಗೆಟ್ಟಿರುವ ರೈತರಿಗೆ ಆಸರೆಯಾಗುವ ಬದಲು ವಕ್ಫ್ ಆಸ್ತಿಯನ್ನು ರಕ್ಷಿಸಲು ಬೇಲಿಯನ್ನು ನಿರ್ಮಿಸುವುದೇ ಸರಕಾರದ ಆದ್ಯ ಕರ್ತವ್ಯವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ರಾಜ್ಯ ಬಿಕ್ಕಟ್ಟು ಎದುರಿಸುತ್ತಿರುವಾಗ ವಕ್ಫ್ ಆಸ್ತಿ ರಕ್ಷಣೆ ಮಾಡುವ ಆತುರವೇಕೆ ? ಇದು ತುಷ್ಟೀಕರಣದ ರಾಜಕಾರಣವಲ್ಲವೇ ? ಎಂದರು. ಯತ್ನಾಳ ತಮ್ಮ ಮಾತನ್ನು ಮುಂದುವರಿಸಿ, ಸರಕಾರ ವಕ್ಫ್ ಆಸ್ತಿ ರಕ್ಷಣೆಗೆ ನೀಡಿರುವ ಅನುದಾನವನ್ನು ತಕ್ಷಣವೇ ಮರಳಿ ಪಡೆದು ಆ ಹಣವನ್ನು ರೈತರಿಗೆ ನೀಡಬೇಕು ಮತ್ತು ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಅದನ್ನು ಉಪಯೋಗಿಸಬೇಕು ಎಂದು ಹೇಳಿದರು.

ಕಾಂಗ್ರೆಸ ರೈತರ ಹಿತರಕ್ಷಣೆ ಮಾಡುವುದಕ್ಕಿಂತ ಮುಸಲ್ಮಾನರ ಓಲೈಸುವುದು ಮಹತ್ವದ್ದೆನಿಸುತ್ತದೆ ! – ಭಾಜಪದ ಟೀಕೆ

ಬೆಂಗಳೂರು – ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಆಧಾರ ನೀಡಲು ಹಣವಿಲ್ಲ; ಆದರೆ ಅವರ ಗಾಯದ ಮೇಲೆ ಉಪ್ಪು ಸವರುವ ಕೃತ್ಯವನ್ನು ಎಸಗಿರುವ ಸಿದ್ದರಾಮಯ್ಯ ಸರಕಾರ ವಕ್ಫ್ ಆಸ್ತಿಗೆ ಬೇಲಿಯನ್ನು ನಿರ್ಮಿಸಲು 31 ಕೋಟಿ 54 ಲಕ್ಷ ರೂಪಾಯಿ ನೀಡಲು ಮುಂದಾಗಿದೆ. ನಾಚಿಕೆಗೇಡಿನ ಕಾಂಗ್ರೆಸ್ ಸರಕಾರಕ್ಕೆ ಆಹಾರ ಪೂರೈಸುವ ರೈತರನ್ನು ರಕ್ಷಿಸುವ ಬದಲು ಮುಸ್ಲಿಮರನ್ನು ಓಲೈಸುವ ಮೂಲಕ ತನ್ನ ಮತಗಳನ್ನು ಭದ್ರಪಡಿಸಿಕೊಳ್ಳುವುದು ಅಗತ್ಯದ್ದಾಗಿದೆ ಎಂದೆನಿಸುತ್ತದೆ. ಅದಕ್ಕೆ ಅವರು ಆದ್ಯತೆ ನೀಡುತ್ತಿದ್ದಾರೆ ಎಂದು ರಾಜ್ಯದ ಭಾಜಪ ನಾಯಕ ಮತ್ತು ವಿರೋಧಿ ಪಕ್ಷದ ನಾಯಕ ಆರ್. ಅಶೋಕ ಇವರು ಟೀಕಿಸಿದರು.