ಲಂಡನ್‌ನಲ್ಲಿ ಭಾರತೀಯರನ್ನು ಸುಲಿಗೆ ಮಾಡುವ ಘಟನೆಗಳಲ್ಲಿ ಭಾರಿ ಹೆಚ್ಚಳ !

  • ಆರೋಪಿಗಳನ್ನು ಹಿಡಿಯುವಲ್ಲಿ ಲಂಡನ್ ಪೊಲೀಸರು ವಿಫಲರಾಗಿದ್ದಾರೆ !

  • ವಿರೋಧ ಪಕ್ಷದಿಂದ ಪ್ರಧಾನಮಂತ್ರಿ ರಿಷಿ ಸುನಕ ರವರ ಮೇಲೆ ಟೀಕೆ

ಲಂಡನ (ಬ್ರಿಟನ್) – ಲಂಡನ್‌ನಲ್ಲಿ ಭಾರತೀಯರ ಮೇಲೆ ದಾಳಿ ನಡೆಸಿ, ಅವರನ್ನು ದೋಚುವ ಘಟನೆಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಭಾರತಿಯರನ್ನು ದೋಚಿರುವ 270 ಘಟನೆಗಳು ನಡೆದಿದ್ದವು. 2022 ರಲ್ಲಿ ಈ ಸಂಖ್ಯೆಯು 90 ಇತ್ತು. ಇದರಲ್ಲಿ ಈಗ ದೊಡ್ಡ ಹೆಚ್ಚಳವಾಗಿದೆ. ವಿಶೇಷವೆಂದರೆ ಲಂಡನ ಪೊಲೀಸರಿಗೆ ಯಾವುದೇ ಘಟನೆಯ ಆರೋಪಿಯನ್ನು ಬಂಧಿಸುವಲ್ಲಿ ಅಥವಾ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಲಭಿಸಿಲ್ಲ.

ಲಂಡನ್ನಿನಲ್ಲಿ ಸ್ಥಳೀಯರನ್ನು ದೋಚುವ ಘಟನೆಗಳಿಗೆ ಹೋಲಿಸಿದರೆ ವಿದೇಶಿ ಪ್ರಜೆಗಳನ್ನು ದೋಚುವ ಘಟನೆಗಳು ಅತ್ಯಧಿಕವಾಗಿವೆ.

ಲಂಡನಗಿಂತ ದೆಹಲಿ ಸುರಕ್ಷಿತ! – ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್

ಈ ನಿಟ್ಟಿನಲ್ಲಿ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ನ ಲಂಡನ್ ಶಾಖೆಯು ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನರನ್ನು ಭೇಟಿಯಾಗಿ ಭಾರತೀಯರನ್ನು ದೋಚುವ ಘಟನೆಗಳ ಬಗ್ಗೆ ನಿಷೇಧ ವ್ಯಕ್ತಪಡಿಸಿತು. ನಿಯೋಗವು `ಲಂಡನ್‌ಗಿಂತಲೂ ದೆಹಲಿಯು ಹೆಚ್ಚು ಸುರಕ್ಷಿತವಾಗಿದೆ, ಅಲ್ಲಿ ಇಷ್ಟು ದರೊಡೆಯ ಘಟನೆಗಳು ನಡೆಯುವುದಿಲ್ಲ’ ಎಂದು ಹೇಳಿದೆ.

‘ನಾವು ಪೊಲೀಸರಲ್ಲಿ ದೂರು ದಾಖಲಿಸಲು ಹೋದಾಗ, ಪೊಲೀಸರು ನಮಗೆ `ಭಾರತೀಯರು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು’ ಎಂಬ ಸಲಹೆ ನೀಡುತ್ತಾರೆ.’ – ದೇವೆನ ನಾರಂಗ, ಲಂಡನ.

 ‘ಭಾರತೀಯರಿಗೆ ಲಂಡನ ಅಸುರಕ್ಷಿತವೆನಿಸುತ್ತಿದೆ.’ – ಡೇವಿಡ್ ಲ್ಯಾಮಿ, ನಾಯಕ, ಶ್ರಮಿಕರ ಪಕ್ಷ

 ‘ ಪ್ರಧಾನಮಂತ್ರಿ ಸುನಕರವರು ಭಾರತೀಯರ ಸುರಕ್ಷೆಗಾಗಿ ಯಾವುದೇ ಕ್ರಮವನ್ನು ಕೈಕೊಳ್ಳುತ್ತಿಲ್ಲ.’ – ಸಾರಾ ಓಲ್ನಿ, ಸಂಸದೆ

ಸಂಪಾದಕೀಯ ನಿಲುವು

ಬ್ರಿಟನ್ನಿನ ಪೊಲೀಸರು ಮತ್ತು ಸರಕಾರವು ಭಾರತೀಯರ ಭದ್ರತೆಯ ಸಂದರ್ಭದಲ್ಲಿ ನಿಷ್ಕ್ರಿಯವಾಗಿವೆ, ಎಂಬುದು ಈ ಹಿಂದೆಯೇ ಖಲಿಸ್ತಾನಿಗಳ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ದಾಳಿಯಿಂದ ಬಯಲಾಗಿದೆ!

ಬ್ರಿಟನ್ನಿನ ಪ್ರಧಾನಮಂತ್ರಿಗಳು ಭಾರತೀಯ ಮೂಲದವರಾಗಿದ್ದರೂ, ಅದರಿಂದ ಭಾರತೀಯರಿಗೆ ಯಾವುದೇ ವಿಶೇಷ ಉಪಯೋಗವಿಲ್ಲ ಎಂಬುದೇ ಪುನಃ ಪುನಃ ಕಂಡುಬರುತ್ತಿದೆ !