ಆಂದೋಲನ ನಡೆಸುತ್ತಿರುವ ರೈತರಿಂದ ದೆಹಲಿಯ ಶಂಭು ಗಡಿಯಿಂದ ದೆಹಲಿಯನ್ನು ಪ್ರವೇಶಿಸುವ ಯತ್ನ!

  • ಪೊಲೀಸರು ತಡೆದಾಗ ಕಲ್ಲುತೂರಾಟ

  • ಪೋಲಿಸರಿಂದ ಅಶ್ರುವಾಯು ದಾಳಿ

  • ರಬ್ಬರ್ ಗುಂಡುಗಳ ಗೋಲಿಬಾರ!

ನವದೆಹಲಿ – ಕೇಂದ್ರ ಸರ್ಕಾರದ 3 ಕೃಷಿ ಕಾನೂನುಗಳ ವಿರುದ್ಧ 2021 ರಲ್ಲಿ ಪ್ರಮುಖವಾಗಿ ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳ ರೈತ ಸಂಘಟನೆಗಳು ದೆಹಲಿಯ ಗಡಿಯಲ್ಲಿ ಒಂದು ವರ್ಷಪೂರ್ತಿ ಪ್ರತಿಭಟನೆ ನಡೆಸಿದ್ದವು. ಅನಂತರ ರೈತರು ಪುನಃ ಆಕ್ರಮಣಕಾರಿಯಾಗಿದ್ದಾರೆ. ಬೆಂಬಲ ಬೆಲೆಗಾಗಿ ಕಾನೂನು ರಚಿಸುವ ಪ್ರಮುಖ ಬೇಡಿಕೆಗಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಸಾವಿರಾರು ರೈತರು ಮತ್ತೊಮ್ಮೆ ರಾಜಧಾನಿ ದೆಹಲಿಯನ್ನು ನುಗ್ಗಲು ಪ್ರಯತ್ನಿಸಿದರು. ರೈತರು ಟ್ರ್ಯಾಕ್ಟರ್ ಮತ್ತು ಟ್ರಕ್‌ಗಳೊಂದಿಗೆ ದೆಹಲಿ ಗಡಿಯನ್ನು ತಲುಪಿದರು. ಅವರು ದೆಹಲಿಗೆ ನುಗ್ಗಲು ಪ್ರಯತ್ನಿಸುತ್ತಿರುವಾಗ ಶಂಭು ಗಡಿಯಲ್ಲಿ ಪೊಲೀಸರೊಂದಿಗೆ ಜಟಾಪಟಿ ನಡೆಯಿತು. ರೈತರು ಶಂಭು ಗಡಿಯ ಮೇಲ್ವೇಸುವೆಯ ಕಂಬಿಗೆ ಅಡ್ಡಲಾಗಿ ಹಚ್ಚಲಾಗಿದ್ದ ಬ್ಯಾರಿಕೇಡಗಳನ್ನು ಮುರಿದು ಕೆಳಗೆ ಎಸೆದರು. ಇಲ್ಲಿ ಪೊಲೀಸರು ರೈತರನ್ನು ತಡೆದಾಗ ಅವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಅಶ್ರುವಾಯು ಸಿಡಿಸಿ ರಬ್ಬರ್ ಗುಂಡುಗಳನ್ನು ಹಾರಿಸಿದರು. ಇದರಿಂದಾಗಿ ಇಲ್ಲಿನ ಪರಿಸ್ಥಿತಿಯು ಉದ್ವಿಗ್ನಗೊಂಡಿದೆ. ಪೊಲೀಸರು ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ. ಇದರ ಹೊರತು ಸಿಂಧು ಮತ್ತು ಗಾಜಿಪುರದ ಗಡಿಯಿಂದಲೂ ರೈತರು ದೆಹಲಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿಯೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

(ಸೌಜನ್ಯ – INDIA TODAY)

1. ಚಂಡೀಗಡದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ದೇಶಾದ್ಯಂತ ಇರುವ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಅರ್ಜುನ ಮುಂಡಾ, ರಾಜ್ಯದ ಗೃಹಮಂತ್ರಿಗಳಾದ ನಿತ್ಯಾನಂದ ರಾಯ ಮತ್ತು ವಾಣಿಜ್ಯ ಸಚಿವರಾದ ಪಿಯೂಷ ಗೋಯಲ, ಈ ಮೂವರು ಕೇಂದ್ರೀಯ ಮಂತ್ರಿಗಳು ಇದರಲ್ಲಿ ಭಾಗವಹಿಸಿದ್ದರು; ಆದರೆ ಇದರಿಂದ ಯಾವುದೇ ಪರಿಹಾರ ಸಿಗಲಿಲ್ಲ. ಅದುದರಿಂದ ರೈತರು ಆಂದೋಲನ ನಡೆಸುವುದಾಗಿ ಘೋಷಿಸಿದರು. ಹಾಗೆಯೇ ಫೆಬ್ರವರಿ 16 ರಂದು `ಭಾರತ ಬಂದ್‌’ಗೆ ಕರೆ ನೀಡಿದ್ದಾರೆ.

2. ಸಭೆಯ ನಂತರ ಮಾತನಾಡಿದ ರೈತ-ಕಷ್ಟಕರಿ ಸಂಘರ್ಷ ಸಮಿತಿಯ ಕಾರ್ಯದರ್ಶಿಗಳಾದ ಸರ್ವನಸಿಂಹ ಪಂಧೇರ ರವರು ಮಾತನಾಡಿ, ಈ ಸರಕಾರಕ್ಕೆ ಕೇವಲ ನಮ್ಮ ಚಳವಳಿಯನ್ನು ಮುಂದೂಡಬೇಕಿದೆ. ಚರ್ಚೆಗಾಗಿ ಅವರ ಬಾಗಿಲು ಇನ್ನು ಮುಂದೆಯೂ ತೆರೆದಿರಲಿದೆ; ಆದರೆ ರೈತರ ಬೇಡಿಕೆಗಳನ್ನು ಈಡೇರಿಸುವ ಇಚ್ಛಾಶಕ್ತಿ ಬೇಕು. ಸರಕಾರಕ್ಕೆ ಇಚ್ಛೆಯಿದ್ದರೆ, ಕನಿಷ್ಠ ಬೆಂಬಲ ಬೆಲೆ (ಎಂ.ಎಸ್‌.ಪಿ.)ಯ ಕಾನೂನು ಮತ್ತು ರೈತರ ಇತರ ಬೇಡಿಕೆಗಳನ್ನು ಒಪ್ಪಿಕೊಳ್ಳುವುದು ಅವಶ್ಯಕವಾಗಿದೆ.

3. ಈ ಆಂದೋಲನದಲ್ಲಿ ‘ಸಂಯುಕ್ತ ಕಿಸಾನ್ ಮೋರ್ಚಾ’ ಅಧಿಕೃತವಾಗಿ ಭಾಗವಹಿಸಿಲ್ಲ; ಆದರೆ ಈಗಿನ ಆಂದೋಲನದಲ್ಲಿ ದೇಶದಾದ್ಯಂತ 200 ರೈತ ಸಂಘಟನೆಗಳು ಭಾಗವಹಿಸಿವೆ ಎಂದು ಈ ಸಂಘಟನೆಯ ನಾಯಕರಾದ ಜಗಜಿತ್ ಸಿಂಹ ಡಲ್ಲೆವಾಲ ಹೇಳಿದ್ದಾರೆ.

ದೆಹಲಿಯಲ್ಲಿ ಗುಂಪುಗೂಡುವುದರ ಮೇಲೆ ನಿರ್ಬಂಧ

ಪೊಲೀಸರು ಸಿಂಘೂ, ಟಿಕರಿ, ಗಾಝೀಪುರ, ನೋಯ್ಡಾ ಮುಂತಾದ ದೆಹಲಿಯ ಗಡಿಭಾಗಗಳಿಗೆ ಬಂದು ಧುಮುಕಿರುವುದರಿಂದ ಈ ಗಡಿಗಳಲ್ಲಿ ನಾಕಾಬಂದಿ ಮಾಡಿದ್ದಾರೆ. ಈ ಗಡಿಗಳಿಂದ ದೆಹಲಿಗೆ ಬರುವ ಮಾರ್ಗದಲ್ಲಿ ಕಾಂಕ್ರೀಟ್ ಬ್ಲಾಕ್, ಬ್ಯಾರಿಕೆಡ ಮತ್ತು ಮುಳ್ಳಿನ ತಂತಿಯನ್ನು ಹಾಕಿ ಭಾರೀ ವಾಹನಗಳನ್ನು ತಡೆಯಲಾಗಿದೆ. ತ್ವರಿತ ಕ್ರಮಕ್ಕಾಗಿ ಸಾವಿರಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಭಾಗದಲ್ಲಿ ಹಾಗೆಯೇ ರಾಷ್ಟ್ರೀಯ ರಾಜಧಾನಿ ಪರೀಕ್ಷೇತ್ರದಲ್ಲಿ (ಎನ್‌. ಸಿ. ಆರ್.) ಕಲಂ 144 ರ ಅಡಿಯಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಆಂದೋಲನ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಟ್ರ್ಯಾಕ್ಟರ್‌ನಂತಹ ಭಾರೀ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಪ್ರತಿಭಟನಕಾರ ರೈತರ ಬೇಡಿಕೆಗಳು

ಅ. ಕನಿಷ್ಠ ಬೆಂಬಲ ಬೆಲೆಗೆ ಕಾನೂನನ್ನು ರಚಿಸಬೇಕು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು.

ಆ. ರೈತರ ಸಾಲಮನ್ನಾ ಮಾಡಬೇಕು.

ಇ. 2 ವರ್ಷಗಳ ಹಿಂದೆ ಆಂದೋಲನದಲ್ಲಿ ಭಾಗವಹಿಸಿದ್ದ ರೈತರ ವಿರುದ್ಧ ಇರುವ ದೂರುಗಳನ್ನು ಹಿಂಪಡೆಯಬೇಕು.

ಈ. ಲಖಿಂಪುರ ಖಿರಿಯ ಹಿಂಸಾಚಾರದಲ್ಲಿನ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು.

ಉ. 58 ವರ್ಷ ಮೇಲ್ಪಟ್ಟ ರೈತರು ಮತ್ತು ಹೊಲದಲ್ಲಿ ಕೆಲಸ ಮಾಡುವವರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳ ನಿವೃತ್ತಿ ವೇತನ ಜಾರಿಗೊಳಿಸಬೇಕು.

ಊ. ಭಾರತವು ಜಾಗತಿಕ ವ್ಯಾಪಾರ ಸಂಸ್ಥೆಯಿಂದ ಹೊರಬರಬೇಕು.

ಆಂದೋಲನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಾರದು- ಪಂಜಾಬ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯ

ಚಂಡೀಗಡ – ರೈತರು ಆಂದೋಲನದ ಸಂದರ್ಭದಲ್ಲಿ ಪಂಜಾಬ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ದೂರಿನ ವಿಚಾರಣೆ ನಡೆಸುವಾಗ ನ್ಯಾಯಾಲಯವು `ಆಂದೋಲನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಾರದು’ ಎಂದು ಹೇಳಿದೆ. ಹಾಗೆಯೇ ಎರಡೂ ರಾಜ್ಯಗಳ ಹೇಳಿಕೆಯನ್ನು ಕೇಳಿದ ಬಳಿಕ ನ್ಯಾಯಾಲಯವು ಸದ್ಯದ ಸ್ಥಿತಿಯ ವರದಿಯನ್ನು(ಸ್ಟೇಟಸ ರಿಪೋರ್ಟ್) ಸಾದರ ಪಡಿಸಲು ಆದೇಶಿಸಿದೆ. ಹರಿಯಾಣಾದಲ್ಲಿ ಇಂಟರನೆಟ್ ನಿರ್ಬಂಧಿಸುವುದರೊಂದಿಗೆ ರಸ್ತೆಯನ್ನು ತಡೆಯುವ ರಾಜ್ಯ ಸರಕಾರದ ನಿರ್ಣಯವನ್ನು ಈ ದೂರಿನಲ್ಲಿ ಪ್ರಶ್ನಿಸಲಾಗಿದೆ.

ಸಂಪಾದಕೀಯ ನಿಲುವು

ಪೊಲೀಸರು ಜನರನ್ನು ತಡೆದಾಗ ಅವರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದರೆ ಈ ಆಂದೋಲನದಲ್ಲಿ ಸಮಾಜಘಾತಕ ಶಕ್ತಿಗಳ ಸಹಭಾಗವಿದೆ ಎಂದೇ ಹೇಳಬೇಕಾಗುವುದು !