ಮತದಾನದಲ್ಲಿ ಶೇ 54 ರಷ್ಟು ಜನರ ಬೆಂಬಲ !
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸನಲ್ಲಿರುವ `ಸೀನ ಪೋರ್ಟ’ ಗ್ರಾಮದಲ್ಲಿ ಸ್ಮಾರ್ಟಫೋನ್ ವ್ಯಸನದಿಂದ ಮುಕ್ತಿ ಹೊಂದಲು ವಿಶೇಷ ಪ್ರಯತ್ನಗಳು ನಡೆಸಿರುವುದು ಕಂಡು ಬಂದಿದೆ. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸಲು ಇಲ್ಲಿ ಮತದಾನ ನಡೆಸಲಾಯಿತು. ಆಶ್ಚರ್ಯವೆಂದರೆ ಈ ಮತದಾನದಲ್ಲಿ ಶೇ. 54 ಜನರು ಸ್ಮಾರ್ಟ್ ಫೋನ್ ನಿಷೇಧದ ಪರವಾಗಿ ಮತ ಚಲಾಯಿಸಿದ್ದಾರೆ. ಇಷ್ಟೇ ಅಲ್ಲ, ಗ್ರಾಮದ ಅಂಗಡಿಕಾರರಿಗೂ ‘ನಿಮ್ಮ ಬಳಿಗೆ ಬರುವ ಜನರಿಗೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸಿರಿ ಮತ್ತು ತಮ್ಮ ಅಂಗಡಿಗಳ ಹೊರಗೆ ನಿಷೇಧದ ಸ್ಟಿಕ್ಕರ್‌ಗಳನ್ನು ಹಚ್ಚುವಂತೆ’ ವಿನಂತಿಸಲಾಗಿದೆ.
(ಸೌಜನ್ಯ – Oneindia news)
1. ಅಷ್ಟೇ ಅಲ್ಲ, ಫ್ರಾನ್ಸ್‌ನಲ್ಲಿ ಮೊದಲ ಬಾರಿಗೆ, ಸ್ಮಾರ್ಟ್‌ಫೋನ್ ಬಳಕೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದಿಂದ ಲಿಖಿತ ಆದೇಶವನ್ನು ಹೊರಡಿಸಲಾಗುವುದು. ಹೀಗಿದ್ದರೂ, ರಾಷ್ಟ್ರಮಟ್ಟದಲ್ಲಿ ಕಾನೂನು ಇಲ್ಲದಿರುವುದರಿಂದ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವನ್ನು ಕೈಕೊಳ್ಳಲು ಬರುವುದಿಲ್ಲ.
2. ಫ್ರಾನ್ಸ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ‘ಸ್ಕ್ರೀನ್ ಟೈಮ್’ (ಹಗಲಿನಲ್ಲಿ ಎಷ್ಟು ಸಮಯವನ್ನು ಬಳಸಲಾಗುತ್ತದೆ) ಇದು ಒಂದು ರಾಜಕೀಯ ಅಂಶವಾಗುತ್ತಿದೆ. ಇತ್ತೀಚೆಗೆ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಮಾತನಾಡಿ, ನಾವು ಮಕ್ಕಳಿಗೆ ಸ್ಕ್ರೀನ್ ನ ಅತ್ಯುತ್ತಮ ಬಳಕೆಯ ಕುರಿತು ನಿರ್ಧರಿಸಲು ನಾವು ತಜ್ಞರೊಂದಿಗೆ ಚರ್ಚಿಸುವವರಿದ್ದೇವೆ ಎಂದು ಹೇಳಿದರು.
3. ಇದರೊಂದಿಗೆ ಪೋಷಕರಿಗೆ ಕೆಲವು ಮಾರ್ಗಸೂಚಿ ಅಂಶಗಳನ್ನು ಪ್ರಸಾರ ಮಾಡಲಾಗಿದೆ. ಇದರಲ್ಲಿ ಅವರು ತಮ್ಮ ಮಕ್ಕಳ ಮಲಗುವ ಕೋಣೆಯಲ್ಲಿ ಮೊಬೈಲ ಬಳಸುವಂತಿಲ್ಲ. ಅಲ್ಲದೇ, ಅವರಿಗೆ 15 ವರ್ಷ ತುಂಬುವವರೆಗೆ ಮೊಬೈಲ್ ನೀಡುವಂತಿಲ್ಲ. ಅಂದರೆ ಇದನ್ನು ಮಕ್ಕಳು ವಿರೋಧಿಸುತ್ತಿದ್ದಾರೆ.
4. ಕೆಲವು ದಿನಗಳ ಹಿಂದೆ, ಯುರೋಪ್‌ನ ಮತ್ತೊಂದು ದೇಶವಾದ ಐಸ್‌ಲ್ಯಾಂಡ್‌ನಲ್ಲಿ ಕಂಪನಿಯೊಂದು ಬೇರೆಯದೇ ಆದ ವಿಶಿಷ್ಟವಾದ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಮೊಬೈಲ್ ಅನ್ನು ಒಂದು ತಿಂಗಳವರೆಗೆ ಬಳಸುವಂತಿಲ್ಲ. ಅಂತಹ ಸ್ಪರ್ಧೆ ಆಗಿತ್ತು. ಇದನ್ನು ‘ಡಿಜಿಟಲ್ ಡಿಟಾಕ್ಸ್’ ಎಂದು ಸಂಜ್ಞೆಯಾಗಿದೆ. ಇದರರ್ಥ ನಿಮ್ಮ ಬಳಿಯಿರುವ ಯಾವುದೇ ಡಿಜಿಟಲ್ ಉಪಕರಣದಿಂದ ನಿಮ್ಮನ್ನು ನೀವು ಸ್ವತಃ ಪ್ರತ್ಯೇಕಗೊಳಿಸುವುದಾಗಿದೆ.
ಸಂಪಾದಕೀಯ ನಿಲುವುಮಿತಿ ಮೀರಿದ ವೈಜ್ಞಾನಿಕ ಉಪಕರಣಗಳ ಬಳಕೆ ಮತ್ತು ಅನಿಯಂತ್ರಿತ ಬಳಕೆಯ ಪರಿಣಾಮವಾಗಿದೆ. ವಿಜ್ಞಾನದಿಂದ ಸಮಾಜದ ಮಾನಸಿಕ ಸ್ವಾಸ್ಥ್ಯ ಹದಗೆಟ್ಟಿದೆ. ಹೀಗಾಗಿ ಈಗ ಈ ರೀತಿ ಮತದಾನ ಪಡೆದು ನಿರ್ಬಂಧ ಹೇರುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆ ನೋಡಿದರೆ ಈ ಪ್ರಯತ್ನಗಳು ಮೇಲ್ನೋಟಕ್ಕೆ ಚೆನ್ನಾಗಿದೆಯೆಂದು ಅನಿಸಿದರೂ, ಸಂಯಮ ಮತ್ತು ಸಂತೃಪ್ತ ಜೀವನಕ್ಕೆ, ಅಧ್ಯಾತ್ಮವನ್ನು ಆಧರಿಸಿದ ವೈಜ್ಞಾನಿಕವು ವಿಕಾಸಕ್ಕೆ ಉತ್ತಮವಾಗಿದೆ ! |