ಟೆಕ್ಸಾಸ್ (ಅಮೇರಿಕಾ): ಚರ್ಚ್‌ನಲ್ಲಿ ಗುಂಡಿನ ದಾಳಿ : 5 ವರ್ಷದ ಬಾಲಕನಿಗೆ ಗಾಯ !

ಅಮೆರಿಕದಂತಹ ಪ್ರಗತಿ ದೇಶದ ಅರಾಜಕತೆಯತ್ತ ಏಕೆ ಪ್ರಯಾಣ ? 

ಹೂಸ್ಟನ್ (ಟೆಕ್ಸಾಸ್) – ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಲ್ಲಿನ ಒಂದು ಚರ್ಚ್ ನಲ್ಲಿ ಫೆಬ್ರವರಿ 11 ರಂದು ಗುಂಡಿನ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 57 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ ಮಹಿಳೆಯನ್ನು ಪೊಲೀಸರು ಕೊಂದಿದ್ದಾರೆ.

1. ನಗರ ಪೊಲೀಸ್ ಮುಖ್ಯಸ್ಥ ಟ್ರೈ ಫಿನರ್ ಇವರು ಮಾತನಾಡಿ, ಲೇಕ್‌ವುಡ್ ಚರ್ಚ್‌ನಲ್ಲಿ ಮಧ್ಯಾಹ್ನ ಮಹಿಳೆಯೊಬ್ಬರು ನಿರಂತರವಾಗಿ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಲೇ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.

2. ಫಿನರ್ ಇವರು, ಸುಮಾರು 30 ರ ಹರೆಯದ ಮಹಿಳೆಯೊಬ್ಬರು ಕೈಯಲ್ಲಿ ರೈಫಲ್‌ ಹಿಡಿದು ಚರ್ಚ್‌ನಲ್ಲಿ ಪ್ರವೇಶಿಸಿದರು ಮತ್ತು ಅವಳ ಜೊತೆ ಸುಮಾರು 5 ವರ್ಷದ ಹುಡುಗನೂ ಇದ್ದನು ಎಂದು ಹೇಳಿದರು. ಮಧ್ಯಾಹ್ನ 1.50ಕ್ಕೆ ಚರ್ಚ್ ನಲ್ಲಿ ಮಹಿಳೆ ಗುಂಡು ಹಾರಿಸಲು ಪ್ರಾರಂಭಿಸಿದಳು. ಇದಕ್ಕೆ ಪ್ರತ್ಯುತ್ತರವಾಗಿ ಅಲ್ಲಿ ಉಪಸ್ಥಿತರಿದ್ದ ಇಬ್ಬರು ಅಧಿಕಾರಿಗಳು ಗುಂಡಿನ ದಾಳಿ ನಡೆಸಿ ಮಹಿಳೆಯನ್ನು ಕೊಂದಿದ್ದಾರೆ.